ಮಂಜೇಶ್ವರ : ಚಲಿಸುತ್ತಿದ್ದ ಲಾರಿಯ ಹಿಂಬಾಗಕ್ಕೆ ಸ್ಕೂಟರ್ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಮಂಗಳವಾರ ಬೆಳಿಗ್ಗೆ 9.10 ರ ಸುಮಾರಿಗೆ ತೂಮಿನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಉಪ್ಪಳ ಐಲ ನಿವಾಸಿ ಉಮೇಶ್ ಹಾಗೂ ಸರೋಜಿನಿ ದಂಪತಿಗಳ ಪುತ್ರ ಕಲ್ಪೇಶ್ ಯು. ಉಚ್ಚಿಲ್ (35) ಸಾವನ್ನಪ್ಪಿದ ದುರ್ದೈವಿ.
ಉಪ್ಪಳ ಭಾಗದಿಂದ ಕೆ ಸಿ ರೋಡ್ ನಲ್ಲಿರುವ ಪೇಪರ್ ಮಿಲ್ಲ್ ಗೆ ಕೆಲಸಕ್ಕೆ ತೆರಳುತ್ತಿರುವ ಮಧ್ಯೆ ಸ್ಕೂಟರ್ ನಿಯಂತ್ರಣ ತಪ್ಪಿ ಎದುರಿನಿಂದ ಸಂಚರಿಸುತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳದಲ್ಲೇ ಕಲ್ಪೇಶ್ ಕೊನೆಯುಸಿರೆಳೆದಿದ್ದಾರೆ. ಬಳಿಕ ಮಾಹಿತಿ ಅರಿತು ಸ್ಥಳಕ್ಕಾನಾಮಿಸಿದ ಸಮಾಜ ಸೇವಕ ಅಸ್ಲಂ ರವರ ಆಂಬ್ಯುಲೆನ್ಸ್ ನಲ್ಲಿ ಮೃತ ದೇಹವನ್ನು ಮಂಗಲ್ಪಾಡಿ ಶವಗಾರಕ್ಕೆ ಕೊಂಡೊಯ್ಯಲಾಯಿತು.
ಸ್ಥಳಕ್ಕೆ ಮಂಜೇಶ್ವರ ಠಾಗಾಧಿಕಾರಿ ಅನೂಪ್ ಕುಮಾರ್ ನೇತೃತ್ವದ ಪೊಲೀಸರು ಆಗಮಿಸಿ ಅಪಘಾತಕ್ಕೀಡಾದ ವಾಹನಗಳನ್ನು ಠಾಣೆಗೆ ಕೊಂಡೊಯ್ದಿದ್ದಾರೆ.ಮೃತ ಕಲ್ಪೇಶ್ ರವರ ಹುಟ್ಟು ಹಬ್ಬ ಶುಕ್ರವಾರ ನಡೆದಿದ್ದು ಈತನ ಪತ್ನಿ ನಾಲ್ಕು ತಿಂಗಳ ಗರ್ಭಿಣಿ ಕೂಡಾ ಆಗಿದ್ದಾಳೆ. ಕಲ್ಪೇಶ್ ನ ಸಾವು ನಾಡನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.