ಮಂಜೇಶ್ವರ : ಕೇರಳ ವ್ಯಾಪಾರಿ ಏಕೋಪನ ಸಮತಿ ಇದರ ಮಂಜೇಶ್ವರ ಘಟಕದ ವಾರ್ಷಿಕ ಸಭೆ ಮಂಜೇಶ್ವರ ವ್ಯಾಪಾರಿ ಭವಣದಲ್ಲಿ ಜರಗಿತು.
ಸಂಘಟನೆಯ ಅಧ್ಯಕ್ಷ ಬಶೀರ್ ಕನಿಲರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಆಹ್ಮದ್ ಶೆರೀಫ್ ಉದ್ಘಾಟಿಸಿದರು.
ಸಮಾರಂಭದಲ್ಲಿ ಮರಣ ಹೊಂದಿದ ವ್ಯಾಪಾರಿಗಳ ಕುಟುಂಬಗಳಿಗೆ 4ಲಕ್ಷ ರೂಪಾಯಿಯಂತೆ ಎರಡು ಕುಟುಂಬಗಳಿಗಿರುವ ಧನ ಸಹಾಯವನ್ನು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ವಿತರಣೆ ನಡೆಸಿದರು.
ಜಿಲ್ಲಾ ವ್ಯಾಪಾರಿ ಭವನ ಕಟ್ಟಡ ಸಹಾಯಾರ್ಥ ಹಮ್ಮಿ ಕೊಳ್ಳಲಾದ ಲಕ್ಕಿ ಕೂಪನ್ ಡ್ರಾ ವನ್ನು ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷೆ ಸಮೀನಾ ಟೀಚರ್ ನಿರ್ವಹಿಸಿದರು.
ವ್ಯಾಪಾರಿಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿರುವ ನಗದು ಹಾಗೂ ಪುರಸ್ಕಾರವನ್ನು ಮಂಜೇಶ್ವರ ಜನ ಮೈತ್ರಿ ಪೊಲೀಸರು ನೀಡಿದರು.
ದಯಾನಂದ ಬಂಗೇರ, ಸತ್ಯಜಿತ್, ಹಮೀದ್ ಹೊಸಂಗಡಿ, ಸುದರ್ಶನ್, ಇಸಾಕ್ ಮಂಜೇಶ್ವರ, ವಾರ್ಡ್ ಸದಸ್ಯೆ ರಾಧಾ, ಸೈಪುಲ್ಲಾ, ಕುಮುದಾ, ನಾಸಿರ್ ಮಿಲ್ಮಾ ಮೊದಲಾದವರು ಮಾತನಾಡಿದರು.