ಮಂಜೇಶ್ವರ : ಮೀಂಜ ಪಂಚಾಯತ್ NREG ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಮೀಯಪದವು ಅಂಚೆ ಕಚೇರಿಗೆ ಮಾರ್ಚ್ ಹಾಗೂ ಧರಣಿ ನಡೆಸಲಾಯಿತು.
ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೇರಳ ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಕಾಮ್ರೇಡ್ ಕೆ.ಆರ್.ಜಯಾನಂದ ಉದ್ಘಾಟಿಸಿದರು. ಅಧ್ಯಕ್ಷತೆ NREG ಏರಿಯಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಎಲಿಯಾನ ಅಧ್ಯಕ್ಷತೆ ವಹಿಸಿದರು.
ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ, ಲೋಕಲ್ ಕಾರ್ಯದರ್ಶಿ ಲೋಕೇಶ್ ಚಿನಾಲ, ಮಹಿಳಾ ಅಸೋಸಿಯೇಶನ್ ನ ನೇತಾರೆ ಶ್ರೀಮತಿ ಐರಿನ್ ಜೋಸ್ಫಿನ್ ಮೊದಲಾದವರು ನೇತೃತ್ವ ವಹಿಸಿದ್ದರು. ಮೀಂಜ ಪಂಚಾಯತ್ ಕಚೇರಿ ಯಿಂದ ಅಂಚೆ ಕಚೇರಿ ವರೆಗೆ ನಡೆದ ಮಾರ್ಚ್ ನಲ್ಲಿ ನೂರಾರು ಮಂದಿ ಎನ್.ಆರ್.ಈ. ಜಿ ಕಾರ್ಮಿಕರು ಪಾಲ್ಗೊಂಡರು