ಶ್ರೀ ಸತ್ಯನಾರಾಯಣ ಭಜನಾ ಮಂದಿರ(ರಿ.) ಅಂಬೇಡ್ಕರ್ ನಗರ, ಉದ್ಯಾವರ ಗುತ್ತು, ಮಂಜೇಶ್ವರ.ಇದರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಉದಯ ಪೂಜಾರಿ ಅವರು ನೆರವೇರಿಸಿದರು.
ವಾರ್ಷಿಕೋತ್ಸವವು ನವೆಂಬರ್ 15 ರಿಂದ 17 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಂದಿರದ ಗೌರವಾಧ್ಯಕ್ಷರಾದ ಶ್ರೀ ಐತಪ್ಪ ಜಿ, ಉಪಾಧ್ಯಕ್ಷ ಶ್ರೀ ಲಕ್ಷ್ಮಣ,ಕೋಶಾಧಿಕಾರಿ ಶ್ರೀ ರಾಮ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಸಾವಿತ್ರಿ, ಅಧ್ಯಕ್ಷೆ ಶ್ರೀಮತಿ ಸವಿತಾ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶ್ರೀ ಉದಯ ಪೂಜಾರಿಯವರನ್ನು ಶಾಲು ಹೊದಿಸಿ, ಫಲಪುಷ್ಪಗಳನ್ನಿತ್ತು ಗೌರವಿಸಲಾಯಿತು.ಭಜನಾ ಸಂಚಾಲಾರದ ಅಕ್ಷಯ್ ಕುಮಾರ್ ಸ್ವಾಗತಿಸಿ. ರತೀಕ್ (ಚಿನ್ನು ) ವಂದಿಸಿದರು.ಮೋಹನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು