ಮಂಜೇಶ್ವರ: ಚಲಿಸುತ್ತಿದ್ದ ಟ್ಯಾಂಕರ್ ಲಾರಿಯಿಂದ ಸ್ಪಿರಿಟ್ ಸೋರಿಕೆಯಾಗಿ ಆತಂಕದ ಪರಿಸ್ಥಿತಿ ಎದುರಾಗಿದೆ. ಮಂಜೇಶ್ವರ ಹೊಸಂಗಡಿ ವಾಮಂಜೂರು ಅಬಕಾರಿ ತಪಾಸಣಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ.
ಬಳಿಕ ಟ್ಯಾಂಕರ್ ಲಾರಿಯಿಂದ ಪಾತ್ರೆಗೆ ಸ್ಪಿರಿಟ್ ಹರಿಯುವ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಪ್ರದೇಶದಿಂದ ಕೋಝಿಕ್ಕೋಡ್ ಗೆ ತೆರಳುತಿದ್ದ ಟ್ಯಾಂಕರ್ ಲಾರಿಯಲ್ಲಿ ಈ ರೀತಿಯ ಸೋರಿಕೆ ಕಂಡು ಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸರು ಆಗಮಿಸಿ ಸುರಕ್ಷತೆಯಲ್ಲಿ ಬೇರೊಂದು ಟ್ಯಾಂಕರಿಗೆ ಸ್ಪಿರಿಟ್ ವರ್ಗಾಯಿಸಿದ್ದಾರೆ.