ಓಟ್ ಚೋರರ ಹಾರಾಟಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಶತಃಸ್ಸಿದ್ಧ- ಪಿ.ಕೆ.ಫೈಸಲ್

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಯಲ್ಲಿ ಬಿಜೆಪಿಯು ನಿರ್ಲಜ್ಜ ಅಕ್ರಮವೆಸಗುವ ಮೂಲಕ ಅನ್ಯಾಯವಾಗಿ ಅಧಿಕಾರ ಗಳಿಸಿಕೊಂಡಿದೆ. ವಿವಿಧೆಡೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಸಹಸ್ರಾರು ಮತದಾರರನ್ನು ಅವರ ಅರಿವಿಗೇ ಬಾರದೆ ಯಾದಿಯಿಂದ ಹೊರತು ಪಡಿಸಿ ಅಷ್ಟೇ ಸಂಖ್ಯೆಯ ನಕಲಿ ಮತದಾರರನ್ನು ಕಳ್ಳತನದಿಂದ ಸೇರ್ಪಡೆಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲುಗೊಳಿಸಲಾಗಿದೆ. ಒಬ್ಬನಿಗೆ ಕಷ್ಟದಿಂದ ಇರಲು ಅಸಾಧ್ಯವಾದ ಕೊಠಡಿಗಳಲ್ಲಿ 80 ಕ್ಕಿಂತಲೂ ಹೆಚ್ಚಿನ ನಕಲಿ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ತಂದೆಯ ಹೆಸರು ಇರುವಲ್ಲಿ ಮನಸಿಗೆ ಕಂಡ ಹೆಸರುಗಳನ್ನು, ಅಕ್ಷರಮಾಲೆಯಲ್ಲಿರುವ ಸಕಲ ಅಕ್ಷರಗಳನ್ನು ಬರೆಯಲಾಗಿದೆ. ಬಿಜೆಪಿ ಅಭ್ಯರ್ಥಿಗಳು ಮತ ಎಣಿಕೆಯ ಆರಂಭದಿಂದ ಕೊನೆಯ ಹಂತದವರೆಗೆ ಹಿನ್ನಡೆಯಲ್ಲಿದ್ದರೂ, ಫಲಿತಾಂಶ ಬರುವಾಗ ವಿಜೇತರಾದ ನಂಬಲಸಾಧ್ಯವಾದ ಉದಾಹರಣೆಗಳಿವೆ. ಕೆಲವೆಡೆ ಚಲಾವಣೆಯಾದ ಮತಕ್ಕಿಂತ ಹೆಚ್ಚಿನ ಮತಗಳು ಎಣಿಕೆಯ ಸಂದರ್ಭದಲ್ಲಿ ದಾಖಲಾಗಿವೆ.

ಮತದಾನ ಕೇಂದ್ರಗಳ ದೃಶ್ಯಗಳನ್ನು ಒದಗಿಸಲು ಕೇಳಿಕೆ ಮುಂದಿಟ್ಟಾಗ, ಎಲ್ಲಾ ವಿಡಿಯೋ ದಾಖಲೆಗಳನ್ನು ನಾಶಪಡಿಸಿದ್ದು ಸಂದೇಹಾಸ್ಪದವಾಗಿದೆ. ಈ ಓಟ್ ಕಳ್ಳತನದ ಕುರಿತು ಲೋಕಸಭೆಯ ವಿಪಕ್ಷ ನಾಯಕರಾದ ಶ್ರೀ ರಾಹುಲ್ ಗಾಂಧಿಯವರು ಸುದೀರ್ಘ ಅವಧಿಯ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿ, ಎಳೆ ಎಳೆಯಾಗಿ ಜಗತ್ತಿನ ಮುಂದೆ ಅನಾವರಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ನೇತೃತ್ವದ ಬಿಜೆಪಿಯ ಓಟ್ ಚೋರಿಯ ಕುರಿತು ಇನ್ನಷ್ಟು ವಾಸ್ತವ ಕತೆಗಳನ್ನು ಜನತೆಯ ಮುಂದಿಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಅಧಿಕಾರ ಗಳಿಸಲು ಮತ್ತು ಉಳಿಸಲು ಬಿಜೆಪಿ ನಡೆಸುವ ಹೀನ ಹಾಗೂ ನಾಚಿಕೆಗೇಡಿನ ಕಳ್ಳತನ ವಿರುದ್ಧ ಕಾಂಗ್ರೆಸ್ ಜನಾಂದೋಲನ ನಡೆಸಲಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಪ್ರಜೆಗಳು ಈ ಹೋರಾಟದಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಆಗ್ರಹಿಸುತ್ತಿದ್ದೇವೆ. ಬಿಜೆಪಿಯ ಓಟ್ ಚೋರಿಗೆ ಅಂತ್ಯ ಹಾಡಿ ಪ್ರಜಾಪ್ರಭುತ್ವವನ್ನು ಉಳಿಸಲು ಕಾಂಗ್ರೆಸ್ ಶತಃಸ್ಸಿದ್ಧವಾಗಿದೆ ಎಂದು ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪಿ.ಕೆ.ಫೈಸಲ್ ಘೋಷಿಸಿದ್ದಾರೆ.


ಬಿಜೆಪಿಯ ಓಟ್ ಚೋರಿ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕರಾದ ಶ್ರೀ ರಾಹುಲ್ ಗಾಂಧಿಯವರು ರಾಷ್ಟ್ರವ್ಯಾಪಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಕವಾಗಿ ನಡೆಸಲಾಗುವ ಸಹಿ ಸಂಗ್ರಹ ಅಭಿಯಾನದ ಮಂಜೇಶ್ವರ ಬ್ಲಾಕ್ ಮಟ್ಟದ ಉದ್ಘಾಟನೆಯನ್ನು ನಿರ್ವಹಿಸಿ ಅವರು ಮಾತನಾಡಿದರು.ಹೊಸಂಗಡಿ ಜಂಕ್ಷನ್ ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಡಿಎಂಕೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ನಾಯಕರಾದ ಶ್ರೀ ಹಕೀಂ ಕುನ್ನಿಲ್, ರಮೇಶನ್ ಕರುವಾಚೇರಿ,ಎಂ.ಸಿ.ಪ್ರಭಾಕರನ್, ಶಾಹುಲ್ ಹಮೀದ್ ಪೆರ್ಲ ಮುಂತಾದವರು ಮಾತನಾಡಿದರು.


ಕಾರ್ಯಕ್ರಮದಲ್ಲಿ ನೇತಾರರಾದ ಉಮ್ಮರ್ ಬೋರ್ಕಳ, ಹರ್ಷಾದ್ ವರ್ಕಾಡಿ, ಚಂದ್ರಶೇಖರ ಶೆಟ್ಟಿ ಬೆಜ್ಜ, ಇಕ್ಬಾಲ್ ಕಳಿಯೂರು, ಅಹ್ಮದ್ ಮನ್ಸೂರ್, ಫ್ರಾನ್ಸಿಸ್ ಡಿ ಸೋಜಾ, ನಾಗೇಶ್ ಮಂಜೇಶ್ವರ, ಫಾರೂಕ್ ಶಿರಿಯ, ಸತ್ಯನ್ ಸಿ.ಉಪ್ಪಳ, ಗಣೇಶ್ ಪಾವೂರು, ಕರೀಂ ಪೂನಾ, ಹನೀಫ್ ಪಡಿಂಞಾರ್, ಬಾಬು ಬಂದ್ಯೋಡು, ಪುರುಷೋತ್ತಮ ಅರಿಬೈಲ್, ದಾಮೋದರ ಮಾಸ್ಟರ್, ಗೀತಾ ಬಂದ್ಯೋಡು, ತಾಹಿರಾ ಉಪ್ಪಳ, ಪ್ರಶಾಂತಿ ಮಂಜೇಶ್ವರ, ಜೆಸ್ಸಿ ಕಣ್ವತೀರ್ಥ,ವಿನೋದ್ ಪಾವೂರು, ನವೀನ್ ಶೆಟ್ಟಿ ಚೆರುಗೋಳಿ,ಸೀತಾ ಡಿ, ಸುಮಯ್ಯಾ ಧರ್ಮನಗರ, ಮೊಹಮ್ಮದ್ ಮಜಾಲ್, ರಾಜೇಶ್ ನಾಯ್ಕ್ ಹೇರೂರು, ಪ್ರದೀಪ್ ಶೆಟ್ಟಿ,ಕೃಷ್ಣನ್ ಅಡ್ಕತ್ತೊಟ್ಟಿ, ವಸಂತರಾಜ್, ಮುಹಮ್ಮದ್ ಜೆ, ಹಮೀದ್ ಕಣಿಯೂರು, ಇರ್ಷಾದ್ ಮಂಜೇಶ್ವರ, ವಿಕ್ಟರ್ ಡಿಸೋಜ, ಎಲಿಯಾಸ ಡಿ ಸೋಜಾ, ಮಾಲಿಂಗ ಮಂಜೇಶ್ವರ, ರಂಜಿತ್ ಮಂಜೇಶ್ವರ, ಶೀನ ಕೆದುಂಬಾಡಿ, ಗಂಗಾಧರ ಕೆ ಎಸ್,ಸದಾಶಿವ ಕೆ, ಕೆ.ವಿ.ರಾಮನ್, ಎಎಂ ಉಮ್ಮರ್ ಕುಂಞಿ, ಮೊಹಮ್ಮದ್ ಸೀಗಂಡಡಿ, ಗಣೇಶ್ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು. ಶ್ರೀ ದಿವಾಕರ ಎಸ್ ಜೆ ಸ್ವಾಗತಿಸಿ, ಶ್ರೀ ಖಲೀಲ್ ಬಜಾಲ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!