ಕಾಸರಗೋಡು : ಆಟೋ ರಿಕ್ಷಾದಲ್ಲಿ ಸಾಗಿಸಲಾಗುತಿದ್ದ 22.5 ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಆರೋಪಿಗಳಿಗೆ ಹತ್ತು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ನಂತೆ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಕಾಸರಗೋಡು ಅಡಿಷನಲ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ಧ್ವಿ) ನ್ಯಾಯಾಧೀಶೆ ಕೆ ಪ್ರಿಯಾ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದಾರೆ. ನೆಲ್ಲಿಕಟ್ಟೆ ಹಮೂಸ್ ನಗರದ ಅಬ್ದುಲ್ ರಹ್ಮಾನ್ (55), ಪೆರುಂಬಳ ಕಡವ್ ನಿವಾಸಿ ಸಿ ಎ ಆಹ್ಮದ್ ಕಬೀರ್ (43) ಹಾಗೂ ಆದೂರು ನಿವಾಸಿ ಕೆ ಪಿ ಮೊಹಮ್ಮದ್ ಹಾರಿಸ್ (40) ಎಂಬಿವರು ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.
2022 ಫೆಬ್ರವರಿ 4 ಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ಘಟನೆ ನಡೆದಿದೆ. ರಾತ್ರಿ 8.30 ಕ್ಕೆ ಕಾಸರಗೋಡು ಚೌಕಿ ಪೆಟ್ರೋಲ್ ಪಂಪ್ ಗೆ ಸಮೀಪ ಆಟೋ ರಿಕ್ಷಾದಲ್ಲಿ ಸಾಗಿಸಲಾಗುತ್ತಿದ್ದ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆ ವಿಧಿಸಲಾಗಿದೆ.