ಮಂಜೇಶ್ವರ: ಹೆಚ್ಚು ಸಂಖ್ಯೆಯಲ್ಲಿ ಜನ ಸಂದಣಿ ಇರುವ ಹೊಸಂಗಡಿ ಪೇಟೆಯಲ್ಲಿ ದಾರಿಮದ್ಯೆ ಅವ್ಯವಸ್ಥೆಯಾಗಿ ವಾಹನಗಳು ಪಾರ್ಕಿಂಗ್ ಮಾಡಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ.
ಸಮೀಪದ ಮೇಘ ಟವರ್ ಲ್ಲಿ ಇರುವ ಅಂಗಡಿಗಳಿಗೆ ಜನಸಾಮಾನ್ಯರು ಹೋಗುವುದಕ್ಕೆ ಹರಸಾಹಸ ಪಡುವಂತಾಗಿದೆ. ಇದಕ್ಕೆ ಅಂಗಡಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇನ್ನೊಂದೆಡೆ ಸರಿಯಾದ ಜಾಗಗಳಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದರೂ ಪೊಲೀಸರು ವಿನಾಕಾರಣ ಫೈನ್ ಹಾಕುತ್ತಿದ್ದಾರೆ ಎಂದು ವಾಹನ ಚಾಲಕರು ಆರೋಪಿಸಿದ್ದಾರೆ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕೈಗೊಂಡು ಸರಿಯಾದ ಪಾರ್ಕಿಂಗ್ ಜಾಗವನ್ನು ಕಲ್ಪಿಸಿಕೊಡಬೇಕು ಎಂಬುದು ಜನರ ಅಗ್ರಹ.