ಮಂಜೇಶ್ವರ : ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮತದಾರ ಪಟ್ಟಿಯಿಂದ ಮತದಾರರನ್ನು ಡಿಲೀಟ್ ಮಾಡುವ ಬಿಜೆಪಿ ಷಡ್ಯಂತರದ ವಿರುದ್ಧ ನಾಗರಿಕರ ಆಕ್ರೋಶ ಬುಗಿಲೆದ್ದಿದೆ. ವರ್ಕಾಡಿ ಪಂಚಾಯತಿನ ವಿವಿಧ ವಾರ್ಡುಗಳಲ್ಲಿ ಸುಮಾರು ರೂ.1000ಕ್ಕೂ ಮಿಕ್ಕಿದ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕುವಂತೆ ಬಿಜೆಪಿ ಮುಖಂಡರ ಅರ್ಜಿಗೆ ಬುಧವಾರದಂದು ವರ್ಕಾಡಿ ಪಂಚಾಯಿತಿನಲ್ಲಿ ಮತದಾರರ ನೇರ ಸಂದರ್ಶನ ನಡೆಯಿತು. ಈ ಸಂದರ್ಭದಲ್ಲಿ ತಮ್ಮ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲು ಮನವಿ ಕೊಟ್ಟ ಬಿಜೆಪಿ ಮುಖಂಡನ ವಿರುದ್ಧ ಮತದಾರರು ತರಾಟೆಗೆ ತೆಗೆದುಕೊಂಡಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು.
ಅರ್ಜಿ ಪರಿಶೀಲನೆಗೆ ಆಯಾಮ ಮತದಾರರು ದಾಖಲು ಸಮೇತ ಪಂಚಾಯತಿಗೆ ತಲುಪಿದ್ದು, ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ತೆಗೆದುಹಾಕಲು ದೂರು ಸಲ್ಲಿಸಿದ್ದ ಬಿಜೆಪಿಯ ಯತಿರಾಜ ಹಾಗೂ ಮತ್ತಿತರ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯತಿನಲ್ಲಿ ಹೊಯ್ ಕೈ ನಡೆದಿದ್ದು, ತಕ್ಷಣವೇ ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ವರ್ಕಾಡಿ ಪಂಚಾಯತಿನ ನೈಜ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿ, ಚುನಾವಣೆಯನ್ನು ಬುಡಮೇಲುಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ವಿವಿಧ ರಾಜಕೀಯ ಪಕ್ಷಗಳು ದೂರಿಕೊಂಡಿದೆ.