ಬಂದ್ಯೋಡ್ ರಾ.ಹೆದ್ದಾರಿಯಲ್ಲಿ ಕಾರುಗಳ ಮಧ್ಯೆ ಡಿಕ್ಕಿ : ಮಹಿಳೆ ಸಾವು : ನಾಲ್ಕು ಮಂದಿಗೆ ಗಾಯ

ಮಂಜೇಶ್ವರ : ಬಂದ್ಯೋಡ್ ಮುಟ್ಟಂ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾರ್ ಕಾರಿನ ಹಿಂಬಾಗಕ್ಕೆ ಆಲ್ಟೋ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಐದು ಮಂದಿ ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಕಾಸರಗೋಡು ಭಾಗದಿಂದ ತಲಪಾಡಿ ಭಾಗಕ್ಕೆ ಆಗಮಿಸುತ್ತಿದ್ದ ಎರಡೂ ವಾಹನಗಳು ಬಂದ್ಯೋಡ್ ಮುಟ್ಟಂ ನಲ್ಲಿ ಬಾನುವಾರ ರಾತ್ರಿ 7.45 ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಮಚ್ಚಂಪ್ಪಾಡಿ ನಿವಾಸಿ ಹುಸೈನ್ ಸಹದಿಯವರ ಪತ್ನಿ ಮಿರ್ಜಾನ (28) ಸಾವನ್ನಪ್ಪಿದ್ದಾರೆ. ಜೊತೆಯಾಗಿದ್ದ ಹುಸೈನ್ ಸಹದಿ(34) ಮರಿಯಮುತ್ ಝಕ್ಕಿಯ್ಯ(15), ಜುಮಾನ (19) ಹಾಗೂ ಅಬ್ದುಲ್ ಸಾಲಿಂ (3) ಎಂಬಿವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮುಂಭಾಗದಲ್ಲಿದ್ದ ತಾರ್ ಕಾರು ದಿಢೀರ್ ಬ್ರೇಕ್ ಹಾಕುವಾಗ ಹಿಂದಿನಿಂದ ಆಗಮಿಸುತ್ತಿದ್ದ ಆಲ್ಟೋ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.ಕಾರು ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಕಾರುಗಳು ಪೂರ್ಣವಾಗಿಯೂ ನುಜ್ಜುಗುಜ್ಜಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!