ಎಲ್ ಡಿ ಎಫ್ ಮಂಜೇಶ್ವರ ಪಂಚಾಯತ್ ಚುನಾವಣಾ ಸಮಾವೇಶ

ಮ0ಜೇಶ್ವರ : ಎಲ್ ಡಿ ಎಫ್ ಮಂಜೇಶ್ವರ ಪಂಚಾಯತ್ ಸಮಾವೇಶ ಟಿವಿ ತೋಮಸ್ ಹಾಲ್ ನಲ್ಲಿ ನಡೆಯಿತು. ಸಮಾವೇಶವನ್ನು ಸಿಪಿಐ ಎಂ ರಾಜ್ಯ ಸಮಿತಿ ಸದಸ್ಯ ಕೆ ಆರ್ ಜಯಾನಂದ ಉದ್ಘಾಟಿಸಿದರು.ಸಿಪಿಐ ನೇತಾರ ದಯಾಕರ ಮಾಡ ಅಧ್ಯಕ್ಷತೆ ವಹಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ ಕೃಷ್ಣನ್, ಜೆ ಡಿ ಎಸ್ ನೇತಾರ ಡಾ. ಖಾದರ್, ಸಿಪಿಐ ನೇತಾರರಾದ ಎಸ್ ರಾಮಚಂದ್ರ ಬಡಾಜೆ, ಶ್ರೀಧರ್ ಮಾಡ,ಸಿಪಿಐ ಎಂ ನೇತಾರರಾದ ಅಶ್ರಫ್ ಕುಂಜತ್ತೂರ್, ಕರುಣಾಕರ ಶೆಟ್ಟಿ ಮೊದಲಾದವರು ಸಮಾವೇಶ ಉದ್ದೇಸಿಸಿ ಮಾತಾಡಿದರು.

ಜಿಲ್ಲಾ ಪಂಚಾಯತ್ ಮಂಜೇಶ್ವರ ಡಿವಿಷನ್ ಅಭ್ಯರ್ಥಿ ಐರಿನ್ ಜಾಸ್ಮಿನ್, ಕುಂಜತ್ತೂರ್ ಬ್ಲೋಕ್ ಡಿವಿಷನ್ ಅಭ್ಯರ್ಥಿ ಗಣೇಶ್ ಕುಂಜತ್ತೂರ್, ಮಂಜೇಶ್ವರ ಬ್ಲೋಕ್ ಡಿವಿಷನ್ ಅಭ್ಯರ್ಥಿ ರಮೇಶ್ ಉದ್ಯಾವರ, ಬಡಾಜೆ ಬ್ಲೋಕ್ ಡಿವಿಷನ್ ಅಭ್ಯರ್ಥಿ ದಯಾಕರ ಹೊಸಂಗಡಿ, ವಾರ್ಡ್ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಪ್ರಶಾಂತ್ ಕನಿಲ, ವಿಜಯ ಕನಿಲ, ಉಮೇಶ್ ಪದವು, ಕಿರಣ್ ಮಾಡ, ಪ್ರದೀಶ್ ಬಡಾಜೆ, ಮೋನು ಕುಚಿಕ್ಕಾಡ್, ನೌಫಲ್, ರಾಜ ಕೀರ್ತೆಶ್ವರ, ಉದಯ, ಕೇಶವ ಕಣ್ವತೀರ್ಥ, ಅಸಿರ್ ಮಂಜೇಶ್ವರ, ಯಾಕೊಬ್ ಸಣ್ಣಡ್ಕ, ಗಂಗಾಧರ್ ಕೆ ಕೆ ಮೊದಲದವರು ನೇತೃತ್ವ ನೀಡಿದರು. ಕಮಲಾಕ್ಷ ಕನಿಲ ಸ್ವಾಗತಿಸಿ, ದಯಾಕರ ಮಾಡ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!