ಮಂಗಳೂರು:ನೂತನವಾಗಿ ಉರ್ವ ಮಾರಿಗುಡಿ ಸಮೀಪದ ಆಟೋ ರಿಕ್ಷಾ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಉರ್ವ ಮಾರಿಗುಡಿ ಸರ್ಕಲ್ ನ ಕಾಮಗಾರಿ ಮನಪಾ ಮತ್ತು ಅದನ್ನು ನಿರ್ಮಿಸಿದ ಇಂಜಿನಿಯರ್ ಅಧಿಕಾರಿಗಳ ಬೇಜವಾಬ್ದಾರಿಗೆ ಉದಾಹರಣೆ ಎಂಬಂತೆ ಇದೆ . ನಿರ್ಮಾಣ ಹಂತದಲ್ಲಿರುವ ಉರ್ವ ಮಾರಿಗುಡಿ ಸರ್ಕಲ್ ನ ಎತ್ತರವು ಹೆಚ್ಚಾಗಿದ್ದು ಇದು ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನದ ಗೋಚರಕ್ಕೆ ಕಷ್ಟಕರವಾಗಿದೆ . ಇದರಿಂದ ಆ ಭಾಗದಲ್ಲಿ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ .
ಈ ಸರ್ಕಲ್ ಪ್ರಮುಖವಾಗಿ ಅಶೋಕ ನಗರ , ಸುಲ್ತಾನ್ ಬತ್ತೇರಿ, ಲೇಡಿಹಿಲ್ , ಮಣ್ಣಗುಡ್ಡ ರಸ್ತೆಯನ್ನು ಸಂಪರ್ಕಿಸುವ ಜಂಕ್ಷನ್ ಆಗಿದೆ . ಈ ಮಾರ್ಗವಾಗಿ ಅದೆಷ್ಟೋ ವಾಹನಗಳು ಸಂಚರಿಸುತ್ತದೆ . ಸ್ಥಳೀಯ ನಿವಾಸಿಗಳು ಈ ಸಮಸ್ಯೆಯನ್ನು ಮನಪಾ ದ ಗಮನಕ್ಕೆ ತಂದಿದ್ದುದರಿಂದ ಕಾಮಗಾರಿ ಅರ್ಧದಲ್ಲೇ ನಿಂತಿದೆ .ಶೀಘ್ರವೇ ಸರ್ಕಲ್ ನ ಎತ್ತರವನ್ನು ಕಡಿಮೆ ಮಾಡುವುದರಿಂದ ಅಲ್ಲಿ ನಡೆಯಬಹುದಾದ ಅಪಘಾತವನ್ನು ತಡೆಯಬಹುದಾಗಿದೆ .
✍️ ಗಿರೀಶ್ ಪಿಎಂ