ಮಂಜೇಶ್ವರ : ಮಂಜೇಶ್ವರ ರಾಗಂ ಜಂಕ್ಷನ್ ನಲ್ಲಿ ಕಾರ್ಯಾಚರಿಸುತ್ತಿರುವ ಅಶ್ರಫ್ ಎಂಬವರ ಮಾಲಕತ್ವದಲ್ಲಿರುವ ಭಾರತ್ ಸೂಪರ್ ಮಾರ್ಕೆಟ್ ಅಂಗಡಿಯ ಶಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರವರಿನೊಳಗಿರಿಸಿದ್ದ 35000 ರೂಪಾಯಿ ನಗದು ಹಾಗೂ ಸುಮಾರು 10 ಸಾವಿರ ರೂಪಾಯಿ ಮೌಲ್ಯದ ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ.ಬುಧವಾರ ಬೆಳಿಗ್ಗೆ ಮಾಲಕ ಅಶ್ರಫ್ ಅಂಗಡಿಗೆ ತಲುಪಿದಾಗ ಕಳವಾಗಿರುವುದು ಗಮನಕ್ಕೆ ಬಂದಿದೆ. ಮಂಗಳವಾರ ರಾತ್ರಿ ಕಳವು ನಡೆದಿದೆ.ಇದರ ಸಮೀಪದಲ್ಲಿರುವ ಮೊಬೈಲ್ ಅಂಗಡಿ ಹಾಗೂ ತರಕಾರಿ ಅಂಗಡಿಯ ಬೀಗ ಮುರಿದು ಕಳವಿಗೆ ಯತ್ನ ನಡೆದಿದೆ.
ಘಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿ ಸಮೀಪದ ಸಿ ಸಿ ಟಿವಿ ದೃಶ್ಯವಾಳಿಗಳನ್ನು ಪರಿಶೋಧಿಸುತಿದ್ದಾರೆ. ಕಳ್ಳರ ಹಾವಳಿಯಿಂದ ಸ್ವಲ್ಪವಾದರೂ ನಾಡಿನ ಜನತೆ ನಿಟ್ಟುಸಿರು ಬಿಡುವ ಮಧ್ಯೆ ಮತ್ತೆ ಕಳ್ಳರ ಲಗ್ಗೆ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.