ತ್ರಿತಲ ಪಂಚಾಯತ್ ಚುನಾವಣೆಯ ಪ್ರಚಾರದ ಭಾಗವಾಗಿ ಎಲ್ ಡಿ ಎಫ್ ಮೀoಜ ಪಂಚಾಯತ್ ಚುನಾವಣಾ ಸಮಿತಿಯ ನೇತೃತ್ವದಲ್ಲಿ ಮೀಯಪದವಿನಲ್ಲಿ ಬಹಿರಂಗ ಸಭೆ ನಡೆಯಿತು. ಸಭೆಯನ್ನು ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಕಾಂ : ಸಿ ಎಚ್ ಕುಂಞoಬು ಎಂಎಲ್ಎ ಉದ್ಘಾಟಿಸಿದರು. ಗಂಗಾಧರ ಕೊಡ್ದೆ ಅಧ್ಯಕ್ಷತೆ ವಹಿಸಿದರು.
ಮಾಜಿ ಶಾಸಕರಾದ ಸಿ ಪಿ ಐ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ : ಕುಮಾರನ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ : ಎಂ ಸುಮತಿ, ಎಲ್ ಡಿ ಎಫ್ ಮಂಜೇಶ್ವರ ಮಂಡಲ ಕನ್ವಿನರ್ ಕಾಂ : ಜಯರಾಮ ಬಳ್ಳoಗುಡೆಲ್, ಕಡಂಬಾರ್ ಬ್ಲೋಕ್ ಡಿವಿಷನ್ ಎಡರಂಗ ಅಭ್ಯರ್ಥಿ ಕಾಂ : ಬೇಬಿ ಶೆಟ್ಟಿ, ಮಾತನಾಡಿದರು. ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ,ಹಿರಿಯ ನೇತಾರರಾದ ಬಿ ಸದಾಶಿವ ರೈ, ಬಾಳಪ್ಪ ಬಂಗೇರ, ಡಿ. ಕಮಲಾಕ್ಷ, ಎನ್ ಸಿ ಪಿ ನೇತಾರ ಅಬ್ದುಲ್ಲ ಭಾಗವಹಿಸಿದರು. ಪಂಚಾಯತ್ ಚುನಾವಣಾ ಸಮಿತಿ ಸೆಕ್ರೆಟರಿ ರಾಮಚಂದ್ರ ಟಿ ಸ್ವಾಗತಿಸಿ, ಲೋಕೇಶ ಚೀನಾಲ ವಂದಿಸಿದರು.