ಪೈವಳಿಕೆ : ಬಿಜೆಪಿ ಈ ಬಾರಿಯ ಸ್ಥಳೀಯಾಡಳಿತ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾದಿಸಲಿದೆ, ಅ ಮೂಲಕ ಪೈವಳಿಕೆ, ಮೀoಜ, ವರ್ಕಾಡಿ, ಮಂಜೇಶ್ವರ ಪಂಚಾಯತ್ ಗಳ ಆಡಳಿತ ಚುಕ್ಕಾಣಿ ಹಿಡಿಯಲ್ಲಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು. ಬಿಜೆಪಿ ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳಾದ ವಿಜಯ್ ಕುಮಾರ ರೈ, ಮಣಿಕಂಠ ರೈ, ಯವರ ಚುನಾವಣಾ ವಾಹನ ಪ್ರಚಾರಣ ಜಾಥಾ ಉದ್ಘಾಟಿಸಿ ಮಾತನಾಡಿದರು.
ಶಬರಿಮಲೆಗೆ ಅಪಚಾರ ಮಾಡಿದ ಎಡರಂಗಕ್ಕೆ vote ಇಲ್ಲ, ರೇಪ್ ಕೇಸ್ ಆರೋಪಿ ರಾಹುಲ್ ಮಂಗುಟನ್ ಪಕ್ಷಕ್ಕೂ vote ಇಲ್ಲ, ಧರ್ಮದ ಹೆಸರಲ್ಲಿ ವೋಟ್ ಕೇಳುವ ಮುಸ್ಲಿಂ ಲೀಗ್ ಪಕ್ಷಕ್ಕೂ ವೋಟ್ ಕೇಳುವ ನೈತಿಕತೆ ಇಲ್ಲ.
ಆದರೆ ಬಿಜೆಪಿ ದೇಶದಲ್ಲಿ ಮಾಡಿರುವ ಅಭಿವೃದ್ಧಿ ಹಾಗೂ ನಿಸ್ಪಕ್ಷ ಆಡಳಿತ ದೇಶಕ್ಕೆ ಮಾದರಿ ಅಂತಹ ಆಡಳಿತ ಗ್ರಾಮಗಳಲ್ಲಿ ತರಲು ಗ್ರಾಮಗಳಲ್ಲಿ ಬಿಜೆಪಿ ಗೆ ಅಧಿಕಾರ ನೀಡಿ ಎಂದು ಕರೆನೀಡಿದರು.
ಬಿಜೆಪಿ ಅಭ್ಯರ್ಥಿ ಗಳಾದ ವಿಜಯ್ ರೈ, ಮಣಿಕಂಠ, ರೈ, ಜಯಲಕ್ಷ್ಮಿ ಭಟ್, ವಿಶ್ವನಾಥ್ ಶೆಟ್ಟಿ ,ಚಂದ್ರವತಿ, ಬಿ ಕೆ ಬಲ್ಲಾಳ್, ಸುಬ್ರಮಣ್ಯ ಭಟ್,ಸದಾಶಿವ ಚೇರಲ್ ಸಲೀಲ್ ಮಾಸ್ಟರ್, ಶ್ರೀಧರ್ ಬದಿಯರ್, ಮಮತಾ, ಕೀರ್ತಿ ಭಟ್, ಸತ್ಯಶಂಕರ್ ಭಟ್, ಕೊಜಪೆ ಶಿವರಾಮ ಜೊತೆ ಉಪಸ್ಥಿತಿ ಇದ್ದರು.ವಿವಿಧ ವಾರ್ಡ್ ಗಳಲ್ಲಿ ವಾಹನ ಪ್ರಚಾರಣ ಸಭೆ ನಡೆಸಲಾಯಿತು.