ಭಯದ ವಾತಾವರಣ ಸೃಷ್ಟಿಸಿದ ನಾಗರಾಹಾವು: ಸೆರೆ ಹಿಡಿದು ಮಾನವೀಯತೆ ಮೆರೆದ ಉರಗ ತಜ್ಞ ರಾಜು ಕಿದೂರು

ಕುಂಬ್ಳೆ : ಎರಡು ದಿನಗಳಿಂದ ಬಂಬ್ರಾಣ ಬತ್ತೆರಿ ನಿವಾಸಿ ನಾರಾಯಣ ಅವರ ಮನೆ ಅಂಗಳದಲ್ಲಿ ಸುತ್ತಾಡುತ್ತಿದ್ದ ನಾಗರ ಹಾವೊಂದು ಮನೆ ಮಂದಿಗೆ ಭಯದ ವಾತಾವರಣ ಸೃಷ್ಟಿಸಿತ್ತು. ಇದೀಗ ಕೊನೆಗೂ ಇಂದು ಮುಂಜಾನೆ 7 ಗಂಟೆಯ ಸುಮಾರಿಗೆ ಹೊಲಿ ಫ್ಯಾಮಿಲಿ ಶಾಲಾ ಅಧ್ಯಾಪಕರು ಹಾಗೂ ನುರಿತ ಉರಗ ತಜ್ಞರಾದ ರಾಜು ಕಿದುರ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊನೆಗೂ ಮನೆ ಹಾಗೂ ಊರ ಮಂದಿ ನಿಟ್ಟುಸಿರು ಬಿಡುವಂತಾಗಿದೆ. ಈ ಸಂಧರ್ಭದಲ್ಲಿ ಉರಗ ತಜ್ಞರಾದ ರಾಜು ಕಿದುರ್ ಅವರು ಹಾವಿನ ಬಗ್ಗೆ ಈ ರೀತಿ ಹಾವು ಕಂಡಾಗ ಏನು ಮಾಡಬೇಕು? ಅದು ಕಚ್ಚಿ ಅಪಾಯ ಉಂಟಾದಲ್ಲಿ ಏನು ಮಾಡಬೇಕು ಎಂದು ಸ್ಪಷ್ಟವಾಗಿ ಊರವರಿಗೆ ಮಾಹಿತಿ ನೀಡಿದರು. ಅಲ್ಲದೆ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಉರಗ ತಜ್ಞರಿಗೆ ಊರವರು ಅಭಿನಂದನೆಗಳನ್ನು ತಿಳಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!