ಸ್ವಸ್ತಿಕ್ ಕಲಾಕೇಂದ್ರ ( ರಿ) ಜಲ್ಲಿಗುಡ್ಡೆ .ಯಕ್ಷರಂಗದ ಧೀಮಂತ ಪ್ರತಿಭೆ ಬಾಬು ಕುಡ್ತಡ್ಕ ಪ್ರಶಸ್ತಿ ಪ್ರಧಾನ ಸಮಾರಂಭ

ಸ್ವಸ್ತಿಕ್ ಕಲಾಕೇಂದ್ರ ( ರಿ) ಜಲ್ಲಿಗುಡ್ಡೆ ಇದರ ವತಿಯಿಂದ ರಾಮಕೃಷ್ಣ ಮಿಷನ್ ಮಂಗಳೂರು ಇಲ್ಲಿನ ವಿವೇಕಾನಂದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಯಕ್ಷರಂಗದಲ್ಲಿ 33 ವರ್ಷಗಳಿಗೂ ಹೆಚ್ಚು ಕಾಲ ಕಲಾದೇವಿಯನ್ನು ಆರಾಧಿಸಿ ಸವ್ಯಸಾಚಿ ಎನಿಸಿದ ಕುಮಾರ ಗೌಡ ಪುತ್ತಿಗೆ ಇವರಿಗೆ 25-26 ರ ಸಾಲಿನ ಬಾಬು ಕುಡ್ತಡ್ಕ ಪ್ರತಿಷ್ಟಿತ ಬಾಬು ಕುಡ್ತಡ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಪ್ರಶಸ್ತಿಗೆ ಸ್ಪಂದಿಸಿ ಮಾತನಾಡಿದ ಅವರು ಬಾಬು ಕುಡ್ತಡ್ಕ ರು ಬದುಕಿದ್ದಾಗ ಅವರು ನಾನು ಒಂದೇ ಮೇಳದಲ್ಲಿದ್ದೆವು ನನ್ನ.ತಪ್ಪುಗಳನ್ನು ತಿದ್ದಿ ನನಗೆ ಮೂರ್ತಿ ರೂಪ ಕೊಟ್ಟ ಅವರ ಹೆಸರಿನ ಪ್ರಶಸ್ತಿ ‌ನನಗೆ ಸಿಕ್ಕಿರುವುದು ನನ್ನ ಭಾಗ್ಯ ಎಂದು 75 ರ ಹರೆಯದ ಕುಮರ ಗೌಡ ಅಭಿಪ್ರಾಯ ಪಟ್ಟರು. ಅಲ್ಲದೆ ಭಾರತೀಯ ಭೂಸೇನೆಯಲ್ಲಿ 28 ವರ್ಷಗಳನ್ನು ದೇಶಕ್ಕಾಗಿ ಸಲ್ಲಿಸಿ ಕಳೆದ ತಿಂಗಳು ನಿವೃತ್ತಿ ಹೊಂದಿದ್ದ ಶ್ರೀ ಸುಭೇದಾರ್ ರಾಘವೇಂದ್ರ ಕುಡ್ತಡ್ಕ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು. ಸೇವಾವಧಿಯಲ್ಲಿ ದೇಶದ ಎಲ್ಕಾ ದುರ್ಗಮ ಪ್ರದೇಶದಲ್ಲಿ ಅವರ ಕಠಿಣ ಸಾಧನೆಯ ಫಲಶ್ರುತಿಯಾಗಿ
ಗೌರವಾರ್ಪಣೆ ನೀಡಲಾಯಿತು.

ಅವರ ಅಭಿನಂದನಾ ಭಾಷಣವನ್ನು ಉಷಾ ಟೀಚರ್ ನಡೆಸಿಕೊಟ್ಟರು. ಕಲಾಕೇಂದ್ರದ ಗೌರವಾಧ್ಯಕ್ಷ ಬಿ. ಪ್ರಕಾಶ್ ಪೈ ಮಾತನಾಡಿ ಯುವ ಜನಾಂಗ ದೇಶ ಸೇವೆಯ ಕಾರ್ಯದಲ್ಲಿ ಮುಂದಾಗಿ ರಾಘವೇಂದ್ರ ರು ಎಲ್ಲರಿಗೂ ಮಾದರಿ ಎಂದರು. ಕುಲಾಲ ಯುವ ಸಂಘಟನಾ ಅಧ್ಯಕ್ಷ ಅನಿಲ್ ದಾಸ್, ಯುಗೇಶಾನಂದ ಸ್ವಾಮೀಜಿ, ಕೃಷ್ಣಮೂರ್ತಿ, ಡಾ. ಅಣ್ಯಯ್ಯ ಕುಲಾಲ್, ನಿರೂಪಕಿ ಡಾ. ಪ್ರಿಯಾ ಹರೀಶ್, ದಿನೇಶ್ ಶೆಟ್ಟಿ, ಪ್ರತಿಭಾ ಕುಡ್ತಡ್ಕ, ಗಾಯತ್ರಿ ದೇವಿ,ಉಪಸ್ಥಿತರಿದ್ದರು ಅಧ್ಯಕ್ಷೆ ಲಲಿತಾ ಗೌಡ, ಸಮಾಜ ಸೇವಾ ಕಾರ್ಯದರ್ಶಿ ಸುಮಲತಾ ಹಾಗೂ ಅಲ್ಲದೆ ದಾಕ್ಷಾಯಿಣಿ,ರೋಹಿಣಿ ವಿದ್ಯಾ,ಗಾಯತ್ರಿ, ಮಲ್ಲಿಕಾ, ಶೋಭಾ, ಅಶೋಕ್ ಜಾಧವ್, ಧನಿಷ್, ಆಶಿಷ್, ಶಶಿಕಲಾ, ಗಂಗಾಧರ್ ಉಪಸ್ಥಿತರಿದ್ದರು . ಸಂತೋಚ್ ಪಡೀಲ್ ಸ್ವಾಗತಿಸಿ,
ಪ್ರಧಾನ ಕಾರ್ಯದರ್ಶಿ ಆನಂದ ರಾವ್ ಧನ್ಯವಾದವಿತ್ತರು.. ಸಂಚಾಲಕ ಕೆ.ಸಿ. ಹರಿಶ್ಚಂದ್ರ ರಾವ್ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!