ಮಂಜೇಶ್ವರ : ಇತಿಹಾಸ ಪ್ರಸಿದ್ಧ ಕನಿಲ ಶ್ರೀ ಭಗವತಿ ಕ್ಷೇತ್ರದ ನವೀಕರಣ ಕೆಲಸಗಳು ಬರದಿಂದ ಸಾಗುತ್ತಿದ್ದು ಏಪ್ರಿಲ್ ತಿಂಗಳಲ್ಲಿ ಬ್ರಹ್ಮ ಕಲಶೋತ್ಸವ ನಡೆಯಲಿದ್ದು ಪೂರ್ವಭಾವಿಯಾಗಿ ತಯಾರಿಗಳು ನಡೆಯುತ್ತಿದೆ. ಸುತ್ತು ಗೋಪುರ , ದೈವಸ್ಥಾನಗಳು ನವೀಕರಣ ಗೊಳ್ಳುತ್ತಿದ್ದು ಸಮುದಾಯ ಮತ್ತು ಊರವರ ಸಹಕಾರದಿಂದ ನವೀಕರಣ ಮುಂದುವರಿಯುತ್ತಿದೆ. ಈ ಪ್ರಸಿದ್ಧ ಕ್ಷೇತ್ರಕ್ಕೆ ಖ್ಯಾತ ರಷ್ಯಾ ಉದ್ಯಮಿ ಹಾಗೂ ಕೊಡುಗೈ ದಾನಿ ಎಡಕಾನ ಶ್ರೀ ಮಹಾಬಲೇಶ್ವರ ಭಟ್ ಅವರು ಕ್ಷೇತ್ರಕ್ಕೆ ಭೇಟಿ ಕೊಟ್ಟರು.
ಕ್ಷೇತ್ರದ ಸಮಿತಿ ಜೀರ್ಣೋದ್ದಾರ ಸಮಿತಿ , ಮಹಿಳಾ ಸಮಿತಿಯವರು ಪೂರ್ಣ ಸ್ವಾಗತವನ್ನು ನೀಡಿದ್ದಾರೆ. ಬರದಿಂದ ಸಾಗುವ ಜೀರ್ಣೋದ್ದಾರ ಕೆಲಸವನ್ನು ವೀಕ್ಷಿಸಿ ರೂಪುರೇಷೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತು ತಮ್ಮ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.