ಮೀoಜ ಪಂಚಾಯತ್ ವ್ಯಾಪ್ತಿಯ ರಸ್ತೆಗಳನ್ನುPM ಗ್ರಾಮೀಣ ಸಡಕ್ ಯೋಜನೆಯಲ್ಲಿ ಸೇರ್ಪಡೆ ಗೆ ಕೇಂದ್ರ ಸಚಿವರಿಗೆ ಬಿಜೆಪಿ ಮನವಿ

ಮಿಯಪದವು : ಮೀoಜ ಪಂಚಾಯತ್ ವ್ಯಾಪ್ತಿಯ ದುರ್ಗಿಪಳ್ಳ, ಅರಿಯಾಳ, ಬಲ್ಯೂರು, ಬೇಜ್ಜ, ಮಜಿಬೈಲ್ ರಸ್ತೆಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು ಮೀoಜ ಪಂಚಾಯತ್ ಬಿಜೆಪಿ ಪಂಚಾಯತ್ ಸದಸ್ಯೆ ಹಾಗೂ ಬ್ಲಾಕ್ ಸದಸ್ಯೆ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೆ ಸುರೇಂದ್ರನ್ ಅವರ ಮೂಲಕ ಕೇಂದ್ರ ಗ್ರಾಮೀಣಾಭಿರುದ್ಧಿ ಹಾಗೂ ಕೃಷಿ ಸಚಿವರಿಗೆ ಮನವಿ ಸಲ್ಲಿಸಲು ಮನವಿ ನೀಡಲಾಯಿತು.


ಅದೇ ರೀತಿ ಕೇರಳದಲ್ಲಿ ತಡೆ ಯಾಗಿರುವ ಫಸಲ್ ಭೀಮ ಯೋಜನೆ ಇನ್ಸೂರೆನ್ಸ್ ತಡೆ ಆಗುತ್ತಿದ್ದು ತಾಂತ್ರಿಕ ಕಾರಣ ಹೇಳಿ ನಷ್ಟ ಪರಿಹಾರ ತಡೆ ಹಿಡಿದಿರುವುದು ಕೂಡಲೇ ಸರಿ ಪಡಿಸಬೇಕೆಂದು ಸರಿ ಪಡಿಸಲು ಮೀoಜ ಬಿಜೆಪಿ ಕೆ ಸುರೇಂದ್ರ ರಲ್ಲಿ ಮನವಿ ಯನ್ನು ನೀಡಿತು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ, ನೇತಾರ ರಾದ ವಿಜಯ್ ಕುಮಾರ್ ರೈ, ಬೇಜ್ಜ ಚಂದ್ರಹಾಸ, ಕೆ ವಿ ಭಟ್, ನವೀನ್ ಬೇಜ್ಜ ಸದಸ್ಯರಾದ ಲತೀಶ್ ಮಜಿಬೈಲ್, ಮೋಹನ್, ಶಾಂತ ಕುಮಾರಿ, ಕೃಷ್ಣ ಬೇಜ್ಜ, ಸಂಧ್ಯಾ ಜ್ಯೋತಿ ರೈ, ಶಾಲಿನಿ ಶೆಟ್ಟಿ, ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!