ಮಂಜೇಶ್ವರ ಅಸೆಂಬ್ಲಿ ಯುವ ಕೌನ್ಸಿಲ್ ಆಯೋಜನೆ; ಹೊಸಂಗಡಿಯಲ್ಲಿ ಭರ್ಜರಿ ಯುವಜನ ರ‍್ಯಾಲಿ

ಹೊಸಂಗಡಿ: ಯಂಗ್ ಡೆಮೋಕ್ರಾಟ್ಸ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಅಸೆಂಬ್ಲಿ ಯುವ ಕೌನ್ಸಿಲ್ ಆಯೋಜಿಸಲಾಯಿತು.
ಅಕ್ಟೋಬರ್ 2ರಂದು ಸಂಜೆ 4 ಗಂಟೆಗೆ ಹೊಸಂಗಡಿ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮಕ್ಕೆ ಯಂಗ್ ಡೆಮೋಕ್ರಾಟ್ಸ್ ಜಿಲ್ಲಾ ಕನ್‍ವೀನರ್ ಕಬೀರ್ ಬ್ಲಾರ್‌ಕೋಡ್ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ಯುವ ಕೌನ್ಸಿಲ್‌ನ ಅಂಗವಾಗಿ ಹೊಸಂಗಡಿ ಪಟ್ಟಣದಲ್ಲಿ ಆಯೋಜಿಸಲಾದ ಯುವಜನ ರ‍್ಯಾಲಿಯಲ್ಲಿ ಹಲವಾರು ಯುವಜನರು ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು. ವಿವಿಧ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ರ‍್ಯಾಲಿಗೆ ಮತ್ತಷ್ಟು ಉತ್ಸಾಹ ತುಂಬಿದವು.

ಯಂಗ್ ಡೆಮೋಕ್ರಾಟ್ಸ್ ಜಿಲ್ಲಾ ಜಂಟಿ ಕನ್‍ವೀನರ್ ಶರೀಫ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಶಬೀರ್ ಪೊಸೋಟ್ ಸ್ವಾಗತಿಸಿದರು. ಯಂಗ್ ಡೆಮೋಕ್ರಾಟ್ಸ್ ರಾಜ್ಯ ಸಂಘಟನಾ ಸಮಿತಿ ಕನ್‍ವೀನರ್ ಎಂ. ಎಂ. ತಾಹಿರ್ ವಿಷನ್ ಪೇಪರ್ ಮಂಡಿಸಿದರು. ಎಸ್ ಡಿ.ಪಿ ಐ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯುವಜನರ ಸಾಮಾಜಿಕ ಮತ್ತು ಪ್ರಜಾಸತ್ತಾತ್ಮಕ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವುದು, ಸಾರ್ವಜನಿಕ ಸಮಾಜದ ಸಮಸ್ಯೆಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಹಾಗೂ ಹೊಸ ನಾಯಕತ್ವವನ್ನು ಬೆಳೆಸುವುದು ಮುಂತಾದ ಉದ್ದೇಶಗಳೊಂದಿಗೆ ಯುವ ಕೌನ್ಸಿಲ್ ಆಯೋಜಿಸಲಾಯಿತು.

ಮಂಜೇಶ್ವರ ಮಂಡಲದಲ್ಲಿ ಯಂಗ್ ಡೆಮೋಕ್ರಾಟ್ಸ್‌ನ ಚಟುವಟಿಕೆಗಳನ್ನು ವಿಸ್ತರಿಸುವುದರ ಜೊತೆಗೆ, ಯುವಜನರನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ಕೌನ್ಸಿಲ್‌ನ ಉದ್ದೇಶವಾಗಿದೆ. ಸಂಘಟನೆಯ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ಯುವಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಯಂಗ್ ಡೆಮೋಕ್ರಾಟ್ಸ್ ಮಂಜೇಶ್ವರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ತಾಜು ಉಪ್ಪಳ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!