ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಸಾಧನೆ: ಬಡಾಜೆ ಶಾಲೆಯಲ್ಲಿ ಸಂಭ್ರಮದ ಮೆರವಣಿಗೆ

ಬಡಾಜೆ : ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಅರಬಿಕ್ ವಿಭಾಗದಲ್ಲಿ ರನ್ನರ್ಸ್ ಹಾಗೂ ಜನರಲ್ ವಿಭಾಗದಲ್ಲಿ ದ್ವಿತೀಯ ರನ್ನರ್ಸ್ ಪಡೆದ ಸಂಭ್ರಮವನ್ನು ಪಿ ಟಿ ಎ ಪದಾಧಿಕಾರಿಗಳ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿಜಯೋತ್ಸವ ಮೆರವಣಿಗೆ ಸಂಭ್ರಮದಲ್ಲಿ ಜರಗಿತು.

ವಿಜಯೋತ್ಸವ ಮೆರವಣಿಗೆಯ ಚಾಲನೆಯನ್ನು ಯಂಗ್ ಮೆನ್ಸ್ ಅಸೋಶಿಯೇಶನ್ಸ್ ಮಚ್ಚಂಪಾಡಿ ಇದರ ಅಧ್ಯಕ್ಷರಾದ ಮೊಯಿದಿನ್ ಕುಂಞ ಹಾಜಿ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಶೀರ್ ಕನಿಲ ನೆರವೇರಿಸಿದರು.

ಪಿ ಟಿ ಎ ಅಧ್ಯಕ್ಷರಾದ ಯಾಕೂಬ್ ಕೋಡಿ ಯವರ ಅಧ್ಯಕ್ಷತೆಯಲ್ಲಿ ಜರಗಿದ ವಿಜಯೋತ್ಸವ ಮೆರವಣಿಗೆಗೆ ವಿವಿಧ ಸಂಘ ಸಂಸ್ಥೆಗಳಾದ ದುರ್ಗಾ ಹುಲಿ ಚೌಕಿ, ನಝರ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಗೇರುಕಟ್ಟೆ, ಫ್ರೆಂಡ್ಸ್ ಸಿ ಯಂ ನಗರ,ಎಕ್ಸ್ ವೈ ಝಡ್ ಪುಚ್ಚತ್ತಬೈಲ್, ಯಂಗ್ ಮೆನ್ಸ್ ಅಸೋಶಿಯೇಶನ್ಸ್ ಮಚ್ಚoಪಾಡಿ, ಫ್ರೆಂಡ್ಸ್ ಸಿ ಯಂ ನಗರ್,ಮೊದಲಾದ ಸಂಘ ಸಂಸ್ಥೆಯವರು ಸಿಹಿತಿಂಡಿ ಹಾಗೂ ತಂಪು ಪಾನಿಯಗಳನ್ನು ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಹಳೆ ವಿದ್ಯಾರ್ಥಿಗಳಾದ ಸೌಮಿನಿ ಬಡಾಜೆ, ಶೋಭ ಬಡಾಜೆ, ಬಶೀರ್ ಬಡಾಜೆ,ಸಫ್ವಾನ,ನಳಿನಾಕ್ಷಿ,ಹಲಿಮಾ, ಝಕರಿಯ,ಅಖಿಫಾ, ಗೀತಾ, ರಹೀಮ್ ಪುಚ್ಚತ್ತಬೈಲ್, ಕೆಬೀರ್, ರಝಾಕ್, ಮೂಸ, ಶಶಿಕಲಾ, ದಯಾವತಿ ಮೊದಲಾವರು ಉಪಸ್ಥಿತರಿದ್ದರು.

ಶಾಲಾ ಶಿಕ್ಷಕ ವೃಂದದವರಾದ ಹರಿಣಾಕ್ಷಿ, ತಸ್ಲೀನಾ, ಅಶ್ವಿನಿ, ನಳಿನಿ, ಫೌಝಿಯ, ಫಾಯಿಝ ಮೊದಲಾದವರು ವಿಜಯೋತ್ಸವ ಮೆರವಣಿಗೆಯ ನೇತೃತ್ವ ವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿ, ಅಶೋಕ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!