ಭಾಷೆ ಬಳಕೆಯಿಂದ ಬೆಳೆಯುತ್ತದೆ – ಡಾ. ಇಂಚರ ನಾರಾಯಣ ಸ್ವಾಮಿ
ಕಾಸರಗೋಡು : ಗಡಿನಾಡಿನ ಕನ್ನಡಿಗರ ಭಾಂದವ್ಯವು ಪರಸ್ಪರ ಚಿರಕಾಲದ ಅನುಬಂಧವಾಗಬೇಕು. ನಮ್ಮ ಮಕ್ಕಳಿಗೆ ಅಂಕ ಶಿಕ್ಷಣದ ಜತೆಗೆ ಕನ್ನಡ ಸಂಸ್ಕೃತಿಯ ಶಿಕ್ಷಣವನ್ನೂ ನೀಡಬೇಕು. ಕನ್ನಡ ಭಾಷೆಯ ಬಳಕೆ ಹೆಚ್ಚಾದಾಗ ಭಾಷೆಯು ಸ್ವಯಂ ಜಾಗೃತಿಯಾಗಿ ಬೆಳೆಯುತ್ತದೆ’ ಎಂದು ಕೋಲಾರದ ರಂಗ ಇಂಚರ ಟ್ರಸ್ಟಿನ ಅಧ್ಯಕ್ಷ ಡಾ. ಇಂಚರ ನಾರಾಯಣ ಸ್ವಾಮಿ ಹೇಳಿದರು. ಅವರು ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ಶನಿವಾರ ಕಾಸರಗೋಡಿನ ಕನ್ನಡ ಭವನ, ಕನ್ನಡ ಭವನ…