ರೌಡಿಶೀಟರ್ ಟೊಪ್ಪಿ ನೌಫಲ್ ಹತ್ಯೆ ಪ್ರಕರಣದ ಸುತ್ತ ನೂರಾರು ಅನುಮಾನದ ಹುತ್ತ

ಮಂಗಳೂರು: ಉಪ್ಪಳ ರೈಲ್ವೆ ಗೇಟ್ ಬಳಿ ನಿಗೂಢವಾಗಿ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ರೌಡಿಶೀಟರ್ ಬಜಾಲ್ ನಿವಾಸಿ ಟೊಪ್ಪಿ ನೌಫಲ್ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆತನ ಶವವನ್ನು ಪೊಲೀಸರು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರಣೋತ್ತರ (ಪೋಸ್ಟ್ ಮಾರ್ಟಂ) ಪರೀಕ್ಷೆ ನಡೆಸಿ ಶವವನ್ನು ಮೃತನ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮೂಲಗಳ ಪ್ರಕಾರ ಟೊಪ್ಪಿಯ ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳು ಕಂಡು ಬಂದಿರುವುದರಿಂದ ಇದೊಂದು ವ್ಯವಸ್ಥಿತ ಕೊಲೆಯಾಗಿರುವ ಬಗ್ಗೆ, ಪೊಲೀಸರು ಅನುಮಾನಿಸಿದ್ದಾರೆ. ಶವದ ಪ್ಯಾಂಟ್…

Read More

ಕಾಸರಗೋಡಿನ ಕನ್ನಡಿಗರ ಮೇಲಿನ ಮಲತಾಯಿ ಧೋರಣೆಗೆ ಕೊನೆ ಯಾವಾಗ …. ?!

ಕಾಸರಗೋಡು ಒಂದು ಕಾಲದಲ್ಲಿ ಕರ್ನಾಟಕದ ನಾಡಿ ಮಿಡಿತವೇ ಆಗಿತ್ತು ಆದರೆ ಭಾಷಾವಾರು ಪ್ರಾಂತ್ಯದ ರಚನೆಯ ಸಂದರ್ಭದಲ್ಲಿ ತಾಯಿಯ ಮಡಿಲಿನಿಂದ ಮಗುವನ್ನು ಬೇರ್ಪಡಿಸಿದಂತೆ ಕಾಸರಗೋಡನ್ನು ಕನ್ನಡನಾಡಿನಿಂದ ಬೇರ್ಪಡಿಸಿದರು. ಆ ದಿನ ಬೇರ್ಪಡಿಸಿದ್ದು ಬರೀ ನೆಲವಾಗದೇ ಕನ್ನಡಮ್ಮನ ಆಸರೆಯಲ್ಲಿದ್ದ ಕನ್ನಡಿಗರ ಮೇಲೆ ಮಾಡಿದ ಅನ್ಯಾಯವೇ ಆಗಿತ್ತು. 1956 ನವೆಂಬರ್ 1 ರಂದು ಕಾಸರಗೋಡು ಜಿಲ್ಲೆಯು ತಿರಸ್ಕಾರದ ಭಾವದಿಂದ ಕೇರಳ ರಾಜ್ಯಕ್ಕೆ ಸೇರಿತ್ತು. ಕೇರಳ ರಾಜ್ಯಕ್ಕೆ ಸೇರಿದ ಮೇಲೆ ಶುರುವಾಯಿತು ಕನ್ನಡಿಗರಿಗೆ ವ್ಯಥೆ. ಅಂದು ಶುರುವಾದ ವ್ಯಥೆ ಇಂದಿಗೂ ಅನುಭವಿಸಿಕೊಂಡು ಬರುವುದು…

Read More

ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ವತಿಯಿಂದ ಬಲಿದಾನ ದಿವಸ ಪ್ರಯುಕ್ತ ರಕ್ತದಾನ ಶಿಬಿರ

02 ನವೆಂಬರ್ 1990 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಹೋರಾಟದ ಕರಸೇವೆಯಲ್ಲಿ ಪ್ರಾಣಾರ್ಪಣೆಗೈದ ಬಜರಂಗದಳದ ಕಾರ್ಯಕರ್ತರಾದ ರಾಮ್ ಕೊಠಾರಿ ಮತ್ತು ಶರದ್ ಕೊಠಾರಿ ಸಹೋದರರ ಬಲಿದಾನವನ್ನು ಸ್ಮರಿಸುವ ಸಲುವಾಗಿ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರಖಂಡದ ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇಲ್ಲಿ ರಕ್ತದಾನ ಶಿಬಿರ ನಡೆಯಿತು. ಹಿಂದೂ ಮುಖಂಡರಾದ ಮುರಳೀಕೃಷ್ಣ ಹಸಂತಡ್ಕ, ಖ್ಯಾತ ವೈದ್ಯರಾದ ಸುರೇಶ್ ಪುತ್ತೂರಾಯ ಸಹಿತ ಒಟ್ಟು 33 ಜನ ಕಾರ್ಯಕರ್ತರು ರಕ್ತದಾನ…

Read More

ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜು ಮಂಗಳೂರಿನಲ್ಲಿ “ಸಿನರ್ಜಿಯಾ 2025” ವಿಜ್ಞಾನ ಕೌಶಲ್ಯ ಮೇಳ … !

ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜು, ಮಂಗಳೂರು, “ಶೈನ್ ಫೌಂಡೇಶನ್” ಸಹಯೋಗದೊಂದಿಗೆ “ಸಿನರ್ಜಿಯಾ 2025” ಎಂಬ ರಾಷ್ಟ್ರೀಯ ಮಟ್ಟದ ಸೃಜನಾತ್ಮಕ ನವೋದ್ಯಮ ಮೇಳವು ನವೆಂಬರ್ 6ರಿಂದ 8ರವರೆಗೆ ನಡೆಯಲಿದ್ದು , ಈ ಕಾರ್ಯಕ್ರಮವು ವಿಜ್ಞಾನ, ತಂತ್ರಜ್ಞಾನ ಹಾಗೂ ಸೃಜನಶೀಲತೆಯ ಸಂಯೋಜನೆಯ ಮೂಲಕ ಸಾಮಾಜಿಕ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ವೇದಿಕೆಯಾಗಿ ಪರಿವರ್ತನೆಗೊಳ್ಳಲಿದೆ ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ತಿಳಿಸಿದರು . ಅವರು ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ…

Read More

ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವ ಸಾವು

ಬಂಟ್ವಾಳ: ತೆಂಗಿನಕಾಯಿ ಕೀಳುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ವಿಟ್ಲದ ಅಳಿಕೆಯಲ್ಲಿ ನಡೆದಿದೆ.ಅಳಿಕೆ ಗ್ರಾಮದ ಇಬ್ರಾಹಿಂ ಉಸ್ತಾದ್ ಅವರ ಪುತ್ರ ಇಸ್ಮಾಯಿಲ್(37) ಮೃತ ವ್ಯಕ್ತಿ. ಇಸ್ಮಾಯಿಲ್ ಕಬ್ಬಿಣದ ದೋಟಿ ಬಳಸಿ ತೆಂಗಿನ ಮರದಿಂದ ತೆಂಗಿನಕಾಯಿ ಕೀಳುತ್ತಿದ್ದ ವೇಳೆ ದೋಟಿ ವಿದ್ಯುತ್ ತಂತಿಗೆ ಸ್ಪರ್ಶಿಸಿದ್ದು, ಈ ವೇಳೆ ವಿದ್ಯುತ್ ಪ್ರವಹಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.ಮೃತರು ಪತ್ನಿ, ಪುತ್ರಿ, ಪುತ್ರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Read More

ಮಾಣಿ ಸಮೀಪದ ಕೊಡಾಜೆಯಲ್ಲಿ ಓಮ್ನಿ ಕಾರು ಪಲ್ಟಿ

ಬಂಟ್ವಾಳ: ಓಮ್ನಿ ಕಾರು ಪಲ್ಟಿಯಾದ ಘಟನೆ ಮಾಣಿ ಸಮೀಪದ ಕೊಡಾಜೆಯಲ್ಲಿ ನ.02ರಂದು ನಡೆದಿದೆ. ಕುಶಾಲನಗರ ಮೂಲದ ಕುಟುಂಬವಿದ್ದ ಓಮ್ನಿ ಕಾರು ಮಂಗಳೂರಿನಿಂದ ಬರುತ್ತಿದ್ದ ವೇಳೆ ಕೊಡಾಜೆಯಲ್ಲಿ ವೀಲ್ ತುಂಡಾಗಿ ರಸ್ತೆ ಸಮೀಪದ ಹೊಂಡಕ್ಕೆ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಐವರು ಪ್ರಯಾಣಿಕರಲ್ಲಿ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಗಂಭೀರ ಗಾಯವಾಗಿದ್ದು, ಇತರರು ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಅಪಘಾತದಿಂದಾಗಿ ಕಾರು ಜಖಂಗೊಂಡಿದ್ದು, ಕಾರಿನೊಳಗೆ ಸಿಲುಕಿದವರನ್ನು ಸ್ಥಳೀಯ ಯುವಕರ ಸಹಾಯದಿಂದ ಹೊರತೆಗೆಯಲಾಯಿತು. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು…

Read More

ಕಡು ಬಡತನ ಮುಕ್ತ ಕೇರಳ.”ಜನ ಸದಸ್ಸು

ಚಿಗುರುಪಾದೆ: ದೇಶದಲ್ಲೇ ಪ್ರಥಮ ಬಾರಿಗೆ ಕೇರಳ ರಾಜ್ಯವು ಕಡುಬಡತನ ಮುಕ್ತ ರಾಜ್ಯವಾಗಿ ಕೇರಳ ರಾಜ್ಯ ಸರಕಾರ ಘೋಷಿಸಿದ ಸಂಭ್ರಮಾಚರಣೆಯ ಭಾಗವಾಗಿ ಮೀಂಜ ಚಿಗುರು ಪಾದೆ ವಾರ್ಡ್ ಮಟ್ಟದ ಕಾರ್ಯಕ್ರಮವನ್ನು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಶ್ರೀ ಕೆ. ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿದರು. ಸಭೆಯಲ್ಲಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಶ್ರೀ ಡಿ.ಕಮಲಾಕ್ಷ, “ಮೀಂಜ_ಮಂಗಲ್ಪಾಡಿ” ಪಬ್ಲಿಕ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ, ಶ್ರೀ ರಾಮಚಂದ್ರ ಟಿ.ಉಪಸ್ಥಿತರಿದ್ದರು. ಶ್ರೀ ಉದಯ ಸಿ.ಹೆಚ್.ಸ್ವಾಗತಿಸಿದರು.

Read More

ಗಣಪತಿಯ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುವರ ಪರ ಸರ್ಕಾರ ನಿಲ್ಲುತ್ತದೆ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಮಂಗಳೂರು : ಗಣಪತಿಯ ವಿಸರ್ಜನೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುವರ ಪರ ಸರ್ಕಾರ ನಿಲ್ಲುತ್ತದೆ. ತಲ್ವಾರ್ ಗಳು ಪ್ರದರ್ಶನ ಮಾಡುವವರ ಮೇಲೆ ಕ್ರಮ ಇಲ್ಲ. ಕರ್ನಾಟಕದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸರಕಾರದ ವಿರುದ್ಧ ಗುಡುಗಿದರು. ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕರ್ನಾಟಕದಲ್ಲಿ 65 ಕ್ಕಿಂತ ಹೆಚ್ಚು ಮಹಿಳೆಯರ ಹತ್ಯೆಯಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಯಾದಗಿರಿ…

Read More

ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ ಹಕ್ಕುಗಳಿಗಾಗಿ ಹೋರಾಡುವುದು ನಮ್ಮ ಹಕ್ಕು: ಮುರಳೀಧರ ಬಳ್ಳಕುರಾಯ

ಕಾಸರಗೋಡು : ನಮ್ಮ ಹಕ್ಕುಗಳು ಮತ್ತು ಸಂವಿಧಾನಾತ್ಮಕ ಸವಲತ್ತುಗಳು ನಿರಾಕರಿಸಲ್ಪಟ್ಟಾಗ ಅವುಗಳನ್ನು ಮರಳಿ ಪಡೆಯಲು ಹೋರಾಡುವುದು ನಮ್ಮ ಹಕ್ಕು. ಕೇರಳ ಸರಕಾರ ಈ ಬಗ್ಗೆ ತಿಳಿದುಕೊಂಡು ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿದೆ ಎಂದು ಕರ್ನಾಟಕ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಮುರಳೀಧರ ಬಳ್ಳಕುರಾಯ ಹೇಳಿದರು. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ನಡೆದ ಕಾಸರಗೋಡು ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವದಾಖಲೆ ಸೃಷ್ಟಿಸಿದ ಶಾಸ್ತ್ರೀಯ ನೃತ್ಯ ಕಲಾವಿದೆ ಮಂಗಳೂರಿನ ರೆಮೊನಾ ಇವೆಟ್…

Read More

ಮಂಗಳೂರಿನ ನಟೋರಿಯಸ್ ರೌಡಿಶೀಟರ್ ನೌಫಲ್ ಅಲಿಯಾಸ್ ನೌಫ ಮರ್ಡರ್…!ಉಪ್ಪಳದ ರೈಲ್ವೇ ಹಳಿಯಲ್ಲಿ ಶವ ಪತ್ತೆ

ಮಂಗಳೂರಿನ ನಟ್ಟೋರಿಯಸ್ ರೌಡಿ ಶಿಟರ್ ನೌಫಲ್ ಅಲಿಯಾಸ್ ನೌಫನ ಶವ ಉಪ್ಪಳದ ರೈಲ್ವೇ ಹಳಿಯಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ. ಉಪ್ಪಳದ ರೈಲ್ವೆ ಟ್ರಾಕ್ ನಲ್ಲಿ ಶವ ಬಿದಿದ್ದು ಕೊಲೆಯಾಗಿರಬಹುದು ಎಂದು ಶಂಕೆಯಿದೆ. ಸ್ಥಳಕ್ಕೆ ಕೇರಳ ಪೋಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.ಕೊಲೆಯಾದ ನೌಫಲ್ ನ ವಿರುದ್ಧ ಮಂಗಳೂರು ಮತ್ತು ದ.ಕ ಜಿಲ್ಲೆಯಲ್ಲಿ ಅನೇಕ ಕೊಲೆ ಹಾಗೂ ಕೊಲೆಯತ್ನ ಪ್ರಕರಣಗಳಿವೆ.ಈತ ಮಂಗಳೂರಿನ ಫೈಸಲ್ ನಗರದ ನಿವಾಸಿ ಯಾಗಿರುತ್ತಾನೆ.

Read More
error: Content is protected !!