ಹಿರಿಯ ಚೇತನ ಇಂದಿರಾ ರೈ ಮಾಯಿಪ್ಪಾಡಿಗುತ್ತು ನಿಧನ: ಕಂಬನಿ ಮಿಡಿದ ಬಂಧುಮಿತ್ರರು

ಮಂಜೇಶ್ವರ : ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ, ಕಾಸರಗೋಡಿನ ಹಿರಿಯ ವ್ಯಕ್ತಿತ್ವ, ಮಾಜಿ ಸಂಸದ ಎಂ. ರಾಮಣ್ಣ ರೈ ಅವರ ಸಹೋದರಿ ಹಾಗೂ ಕುಂದ್ಲಾಜೆ ಪಂಚಾಯಿತಿಯ ಮಾಜಿ ಸದಸ್ಯೆ ಇಂದಿರಾ ರೈ ಮಾಯಿಪ್ಪಾಡಿಗುತ್ತು ಅವರು ಇಂದು ಬೆಳಿಗ್ಗೆ ಅಲ್ಪಕಾಲದ ಅನಾರೋಗ್ಯದ ಕಾರಣದಿಂದ ದೈವಾಧೀನರಾಗಿದ್ದಾರೆ. ​ಪುತ್ರಕಳ ದಿ. ರಾಘವ ರೈ ಅವರ ಧರ್ಮಪತ್ನಿಯಾಗಿದ್ದ ಇಂದಿರಾ ರೈ ಅವರು, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದರು.​ಮೃತರು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಪುತ್ರರಾದ ಕೂಡ್ಲು…

Read More

ಜೈಪುರ ಪ್ರತಿಭಟನೆಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಹಲ್ಲೆ

ನಿರುದ್ಯೋಗ ಹಾಗೂ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ವಿರೋಧಿಸಿ ಜೈಪುರದಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯ ವೇಳೆ ಜಿರಳೆ ಜನತಾ ಪಕ್ಷ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿನ ಭ್ರಷ್ಟಾಚಾರ, ನಿರುದ್ಯೋಗ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ವತಿಯಿಂದ ಪೊಲೀಸರ ಅನುಮತಿ ಪಡೆದು ಪ್ರತಿಭಟನೆ ಆಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಭಿಜೀತ್ ದೀಪ್ಕೆ…

Read More

ಕೊಲ್ಲೂರಿಗೆ ಬಿ.ವೈ. ವಿಜಯೇಂದ್ರ ಭೇಟಿ- ದೇವಿ ದರ್ಶನ ,ವಿಶೇಷ ಪೂಜೆ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ ದರ್ಶನ ಪಡೆದರು. ಈ ವೇಳೆ ದೇವಳದಲ್ಲಿ ನಡೆದ ಚಂಡಿಕಾ ಹೋಮದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು. ವಿಜಯೇಂದ್ರ ಅವರೊಂದಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು. ದೇವಿ ದರ್ಶನದ ಬಳಿಕ ಮುಖಂಡರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ವಿಜಯೇಂದ್ರ, ಪಕ್ಷದ ಸ್ಥಳೀಯ ಯುವ ನಾಯಕರನ್ನು ಭೇಟಿ ಮಾಡಿ ಸಂಘಟನಾ…

Read More

ದುರ್ಬಲಗೊಂಡ ಮುಂಗಾರು: ರಾಜ್ಯದಲ್ಲಿ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಕುಸಿತ

ಬೆಂಗಳೂರು, ಜೂ.16: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಾರುತಗಳು ತೀವ್ರ ದುರ್ಬಲಗೊಂಡ ಪರಿಣಾಮ ಜೂನ್ ತಿಂಗಳ ಮೊದಲ ಎರಡು ವಾರಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಇದರಿಂದ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳ ಬಗ್ಗೆ ಆತಂಕ ಹೆಚ್ಚಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಇದುವರೆಗೆ ಶೇ.21ರಷ್ಟು ಮಳೆ ಕೊರತೆ ದಾಖಲಾಗಿದ್ದು, ದೇಶಾದ್ಯಂತ ಶೇ.64ರಷ್ಟು ಮಳೆಯ ಅಭಾವ ಉಂಟಾಗಿದೆ. ಜೂನ್ 4ರಿಂದ 15ರವರೆಗಿನ ಅವಧಿಯಲ್ಲಿ ದೇಶದಲ್ಲಿ ವಾಡಿಕೆಯಂತೆ 53 ಮಿ.ಮೀ….

Read More

ಬಿಸಿರೋಡಿನ ನಾಗ ಕ್ಯಾಂಟೀನ್‌ನಲ್ಲಿ ಗ್ಯಾಸ್ ಸೋರಿಕೆ; ಸ್ವಲ್ಪದರಲ್ಲಿ ತಪ್ಪಿದ ಭಾರೀ ದುರಂತ

ಬಂಟ್ವಾಳ: ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ.ಬಿಸಿರೋಡಿನ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಇರುವ ನಾಗರಾಜ್ ಎಂಬವರಿಗೆ ಸೇರಿದ ನಾಗ ಕ್ಯಾಂಟೀನ್ ನ ಹಿಂಬದಿಯಲ್ಲಿ ದೋಸೆ ಮಾಡಲು ಇರಿಸಲಾಗಿದ್ದ ಅಡುಗೆ ಅನಿಲದಲ್ಲಿ ಸೋರಿಕೆ ಕಂಡು ಬಂದು ಬೆಂಕಿ ಕಾಣಿಸಿಕೊಂಡಿದೆ. ದೋಸೆ ಮಾಡುತ್ತಿದ್ದ ಕ್ಯಾಂಟೀನ್ ನ ಕೆಲಸಗಾರ ವಿಶ್ವನಾಥ ಎಂಬವರಿಗೆ ಅನಿಲ ಸೋರಿಕೆಯಿಂದ ತಗುಲಿಗೊಂಡ ಬೆಂಕಿಗೆ ಸ್ವಲ್ಪ ಮಟ್ಟಿಗೆ ಗಾಯವಾಗಿದೆ. ಇದರ ಜೊತೆಗೆ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಮಾಲಕನ…

Read More

ವಿಶ್ವಶಾಂತಿಗಾಗಿ ರಾಮಾಂಜಿ ಏಕಾಂಗಿ ಮೌನ ಪ್ರತಿಭಟನೆ

ಉಡುಪಿ: ಜಾಗತಿಕ ಯುದ್ಧದ ಮೂಲಕ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಕರ್ಮಿ, ಕನ್ನಡ ಉಪನ್ಯಾಸಕ ರಾಮಾಂಜಿ ನಮ್ಮ ಭೂಮಿ ಶನಿವಾರ ಮಣಿಪಾಲ ಟೈಗರ್ ಸರ್ಕಲ್ ಬಳಿ ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಮಣಿಪಾಲದ ಬ್ರಹ್ಮ ಡಾ. ಟಿ.ಎಂ.ಎ.ಪೈ ಅವರ ಪುತ್ತಳಿಗೆ ಪುಷ್ಪ ನಮನ ಅರ್ಪಿಸಿ, ಈ ಯುದ್ಧ ನೀತಿಗಳಿಂದ ಮಡಿದವರಿಗೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಮಾಂಜಿ, ಕಳೆದ…

Read More

ಧಾರ್ಮಿಕ-ಲೌಕಿಕ ಶಿಕ್ಷಣದ ಸಮನ್ವಯಕ್ಕೆ ದಾರುಲ್ ಖೈರ್ ಅಕಾಡೆಮಿ ಮಂಚಿಯಲ್ಲಿ ಚಾಲನೆ

ಬಂಟ್ವಾಳ ಮಂಚಿ: SKSM ಅಧೀನ ಸಂಸ್ಥೆಯಾದ ದಾರುಲ್ ಖೈರ್ ಎಜುಕೇಶನಲ್ ಅಕಾಡೆಮಿಯ ಹಿಫ್ಝ್ ಕಾಲೇಜು ಹಾಗೂ ಕಿಂಡರ್ ಗಾರ್ಟನ್ (ಕೆ.ಜಿ.) ವಿಭಾಗದ ಉದ್ಘಾಟನಾ ಸಮಾರಂಭವು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕಾಡಂಗಡಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಪವಿತ್ರ ಕುರ್‌ಆನ್ ಶಿಕ್ಷಣದೊಂದಿಗೆ ಗುಣಮಟ್ಟದ ಲೌಕಿಕ ವಿದ್ಯೆಯನ್ನು ಸಮನ್ವಯಗೊಳಿಸಿ, ಧಾರ್ಮಿಕ ಮೌಲ್ಯಗಳು ಹಾಗೂ ನೈತಿಕತೆಯ ಬೆಳಕಿನಲ್ಲಿ ಸಮಾಜಕ್ಕೆ ಆದರ್ಶ ಪ್ರಜೆಗಳನ್ನು ರೂಪಿಸುವ ಮಹತ್ತರ ಉದ್ದೇಶದೊಂದಿಗೆ ಶಿಕ್ಷಣ ಸಂಸ್ಥೆಯು ತನ್ನ ಪಯಣ ಆರಂಭಿಸಿದೆ. ಗುಣಮಟ್ಟದ ಶಿಕ್ಷಣದ ಭದ್ರ ಬುನಾದಿ;ಅಬ್ದುಲ್ ರಹಿಮಾನ್ ಮಠ ಉಪ್ಪಿನಂಗಡಿ…

Read More

ಬೆಂಗಳೂರು ಕನ್ನಡ ಸಾಂಸ್ಕೃತಿಕ ರಾಯಭಾರಿಗಳ ದುಂಡು ಮೇಜಿನ ಪರಿಷತ್ತು ಚಿಂತನಾ ಸಭೆ

ಕಾಸರಗೋಡು ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ರಾಜಧಾನಿ- ಬಿಡದಿಯ ಡಾ. ಶ್ರೀ ಮಠದ ನಾಗರಾಜು ಸ್ವಾಮೀಜಿ ಕೇರಳ -ಕರ್ನಾಟಕ ರಾಜ್ಯದ ಗಡಿನಾಡಿನಲ್ಲಿ ಸ್ಥಾಪನೆಗೊಂಡಿರುವ ಕಾಸರಗೋಡು ಕನ್ನಡ ಗ್ರಾಮದಲ್ಲಿ , ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ನೇತೃತ್ವದಲ್ಲಿ ತನ್ನ 36 ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ 2026 ನವಂಬರ್ 7 ಮತ್ತು 8ರಂದು ನಡೆಯುವ ಐತಿಹಾಸಿಕ ಕೇರಳ ರಾಜ್ಯ 8…

Read More

ಗ್ಯಾಸ್ ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ WIM ಪ್ರತಿಭಟನೆ

ಅಡುಗೆ ಅನಿಲ (ಗ್ಯಾಸ್) ಬೆಲೆ ಏರಿಕೆ, ಕೇಂದ್ರ ಸರ್ಕಾರದ ಜನವಿರೋಧಿ ಹಾಗೂ ವಿಳಂಬ ನೀತಿಗಳಿಂದ ಮಹಿಳೆಯರು, ಕೂಲಿ ಕಾರ್ಮಿಕರು ಮತ್ತು ಸಾಮಾನ್ಯ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ವಿಮೆನ್ ಇಂಡಿಯಾ ಮೂವ್‌ಮೆಂಟ್ (WIM) ವತಿಯಿಂದ ಮಂಗಳೂರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ವಿವಿಧ ಬೇಡಿಕೆಗಳನ್ನೊಳಗೊಂಡ ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ WIM ಮಂಗಳೂರು ನಗರ ಅಧ್ಯಕ್ಷೆ…

Read More

ಮಂಗಳೂರಿನಲ್ಲಿ ಎಸ್‌ಐಆರ್ ಸಹಾಯವಾಣಿ ಕೇಂದ್ರಕ್ಕೆ ಚಾಲನೆ; ಸಾರ್ವಜನಿಕರಿಗೆ ಮಾಹಿತಿ ನೀಡಲು ಐವನ್ ಡಿಸೋಜಾ ಮುಂದಾಳತ್ವ

ಮಂಗಳೂರು : ವಿಧಾನ ಪರಿಷತ್ ಸದಸ್ಯರು ಹಾಗೂ ಕೆ.ಪಿ.ಸಿ.ಸಿ. ಉಪಾಧ್ಯಕ್ಷರಾದ ಶ್ರೀ ಐವನ್ ಡಿ’ಸೋಜಾ ಅವರು ಇಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಶಾಸಕರ ಕಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಎಸ್‌ಐಆರ್ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್‌ಗಳಾದ ಭಾಸ್ಕರ್ ಮೊಯ್ಲಿ ಹಾಗೂ ಶಶಿಧರ್ ಹೆಗ್ಡೆ, ಮಂಗಳೂರು ದಕ್ಷಿಣ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಬ್ದುಲ್ ಸಲೀಂ ಹಾಗೂ ಪ್ರಕಾಶ್ ಬಿ….

Read More
error: Content is protected !!