ಕಾಸರಗೋಡು ನಗರಸಭೆ ಹಾಗೂ ಕಾಸರಗೋಡು ನಗರಸಭೆ ಆಯುರ್ವೇದ ಆಸ್ಪತ್ರೆ ನುಳ್ಳಿಪ್ಪಾಡಿ ಅಣoಗೂರು ಸಂಯುಕ್ತ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ಜುಲೈ 31ರಂದು ಉಚಿತ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ನಡೆಯಿತು.


ಕಾಸರಗೋಡು ನಗರಸಭಾ ಕೌನ್ಸಿಲರ್ ಶಾರದಾ ಬಿ. ಉದ್ಘಾಟಿಸಿದರು. ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕನ್ನಡ ಗ್ರಾಮದಲ್ಲಿ ಪ್ರತಿ ತಿಂಗಳ ಒಂದು ದಿನ ಕಾಸರಗೋಡು ನಗರ ಸಭೆ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ಮತ್ತು ಔಷಧಿಗಳನ್ನು ನೀಡಬೇಕೆಂದು ವಿನಂತಿಸಿದರು.


ಕನ್ನಡ ಗ್ರಾಮದಲ್ಲಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ 2026 ನವಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ನಡೆಯುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಮತ್ತು ಕೇರಳ -ಕರ್ನಾಟಕ ಉತ್ಸವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದುಎಂದು ಹೇಳಿದರು.

ಕಾಸರಗೋಡು ನಗರಸಭೆ ಆಯುರ್ವೇದ ಆಸ್ಪತ್ರೆಯ ಡಾ.ರಾಜು, ಡಾ .ಪ್ರವೀಣ ಕೆ., ಅವರು ಮೂಳೆ ಸಂಧಿ ನೋವು ,ಬೆನ್ನು ನೋವು ,ಕುತ್ತಿಗೆ ನೋವು ಹಾಗೂ ಇತರ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಉಚಿತ ಆಯುರ್ವೇದ ಪರೀಕ್ಷೆ ಮತ್ತು ಸಲಹೆಗಳನ್ನು ನೀಡಿ ನೂರಾರು ಸಂಖ್ಯೆಯ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ನಡೆಸಿ ಕೊಟ್ಟರು. ಕಾಸರಗೋಡು ನಗರಸಭಾ ಮಾಜಿ ಕೌನ್ಸಿಲರ್ ಶಂಕರ ಕೆ.ಜೆ.ಪಿ ನಗರ ಸ್ವಾಗತಿಸಿದರು. ಅನುರಾಜ್ ಧನ್ಯವಾದ ನೀಡಿದರು.ಕನ್ನಡ ಗ್ರಾಮ ಕುಶಲ ಕುಮಾರ ಕೆ. ಸಹಕರಿಸಿದರು. ಕಾಸರಗೋಡು ಕನ್ನಡ ಗ್ರಾಮದಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1.30 ರವರೆಗೆ ಕಾಸರಗೋಡು ನಗರ ಸಭೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಔಷಧಿಗಳನ್ನು ಸ್ವೀಕರಿಸಿದರು.


