ದಕ್ಷಿಣಕನ್ನಡದ ಹೆಸರು ಮಂಗಳೂರು ಎಂದಾಗಲಿ :- ಅಧಿವೇಶನದಲ್ಲಿ ಆಗ್ರಹಿಸಿದ ಶಾಸಕ ಕಾಮತ್

ಕೇವಲ ಒಂದೆರಡು ತಿಂಗಳಲ್ಲಿಯೇ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸಲು ತೋರಿದ ಉತ್ಸಾಹವನ್ನು ದಕ್ಷಿಣಕನ್ನಡದ ಹೆಸರನ್ನು ಮಂಗಳೂರು ಎಂದು ಬದಲಿಸುವಲ್ಲಿಯೂ ರಾಜ್ಯ ಸರ್ಕಾರ ತೋರಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ರವರು ಅಧಿವೇಶನದಲ್ಲಿ ಆಗ್ರಹಿಸಿದರು. ಗಮನ ಸೆಳೆಯುವ ವೇಳೆ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸಕರು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾಧಿಕಾರಿಗಳಿಂದ ವರದಿ ಬರಲು ಬಾಕಿ ಇದ್ದು ಪ್ರಸ್ತಾವನೆ ಸ್ವೀಕೃತಗೊಂಡಿರುವುದಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ಆ ಪ್ರಸ್ತಾವನೆ ಸಲ್ಲಿಕೆಯಾಗಲು ಸರ್ಕಾರದಿಂದ ಪೂರಕವಾದ ವಾತಾವರಣ…

Read More

ಸದನದಲ್ಲಿ ಯಶಸ್ವಿಯಾಗಿ ಕಲಾಪ ನಡೆಸಿಕೊಟ್ಟ ಶಾಸಕ ಮಂಜುನಾಥ ಭಂಡಾರಿ!

ಬೆಂಗಳೂರು: ಇಂದು ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರು ಸಭಾಪತಿ ಪೀಠದಲ್ಲಿ ಕುಳಿತು ಶೂನ್ಯ ವೇಳೆಯ ಚರ್ಚೆಯನ್ನು ಹಾಗೂ ವಿವಿಧ ವಿಧೇಯಕಗಳ ಅಂಗೀಕಾರದ ಮೇಲಿನ ಚರ್ಚೆಯನ್ನು ಬಹಳ ಸುಧೀರ್ಘವಾಗಿ ಹಾಗೂ ಅರ್ಥಗರ್ಭಿತವಾಗಿ ನಡೆಸಿಕೊಟ್ಟರು. ಶಾಸಕ ಭಂಡಾರಿ ಅವರು ಈ ಹಿಂದೆಯೂ ಅನೇಕ ಬಾರಿ ಯಶಸ್ವಿಯಾಗಿ ವಿಧಾನ ಪರಿಷತ್ ಕಲಾಪವನ್ನು ನಿರ್ವಹಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದಾರೆ.

Read More

ರಿಧಂ ಕಲ್ಚರಲ್ ವಿಂಗ್ ಮಂಜೇಶ್ವರ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ವಿಡಿಯೋ ಆಲ್ಬಮ್ ‘ಮಾ ತುಜೆ ಸಲಾಂ’ ಬಿಡುಗಡೆ:

ರಿಧಂ ಕಲ್ಚರಲ್ ವಿಂಗ್ ಮಂಜೇಶ್ವರದ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ವಿಡಿಯೋ ಆಲ್ಬಮ್ ‘ಮಾ ತುಜೆ ಸಲಾಂ’ ಬಿಡುಗಡೆ ನಮ್ಮ ಮೀಡಿಯಾ ಕಚೇರಿಯಲ್ಲಿ ಖ್ಯಾತ ಚಲನಚಿತ್ರ ,ನಾಟಕ ಹಾಸ್ಯ ನಟ ಸು ಫ್ರಮ್ ಸೋ ಚಿತ್ರದ ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ಬಿಡುಗಡೆಗೊಳಿಸಿದರು ಈ ಹಾಡಿಗೆ ಸಬಿ ತೆಕ್ಕೆಪುರಂ ,ಅಬ್ದುಲ್ ರಾಫಿ ,ಸತೀಶ್ ಕಯ್ಯಾರ್ ,ನಜೀರ ಎಂ.ಪಿ ಸಾಹಿತ್ಯವನ್ನು ನೀಡಿದ್ದು , ಧ್ವನಿ ಮುದ್ರಣವನ್ನು ರಾಜು ಉಪ್ಪಳ , ದಸ್ತಕೀರ್ ನಿರ್ವಾಹಿದ್ದಾರೆ , ಗಫೂರ್ ಪೆರ್ವಾಡ್ ಛಾಯಾಗ್ರಹಣದಲ್ಲಿ…

Read More

ಶಾರದಾ ಆರ್ಟ್ಸ್ ಕಲಾವಿದರು (ರಿ) ಮಂಜೇಶ್ವರ: ಹೊಚ್ಚ ಹೊಸ ನಾಟಕ “ಜೈ ಭಜರಂಗ ಬಲಿ” ನಾಟಕ ಪ್ರದರ್ಶನ. ಆ.16ರಂದು.

ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಐಸಿರಿ ತಂಡದ ಈ ವರ್ಷದ ಹೊಚ್ಚ ಹೊಸ ನಾಟಕ ಜೈ ಭಜರಂಗ ಬಲಿ ಆಗಸ್ಟ್ 16 ರ ಶನಿವಾರದಂದು ರಾತ್ರಿ 8 ಗಂಟೆಗೆ ಶ್ರೀ ಪಾಂಡುರಂಗ ಭಜನಾ ಮಂದಿರ ಮುದಂಗಾರು ಕಟ್ಟೆಯಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ. ‘ಸು ಫ್ರಮ್ ಸೊ’ ಚಿತ್ರದ ಭಾವ ಬಂದರು ಖ್ಯಾತಿಯ ಪ್ರಬುದ್ಧ ಕಲಾವಿದ ಪುಷ್ಪರಾಜ್ ಬೊಳ್ಳಾರ್ ,’ತುಳುನಾಡ ರಂಗ ಬೊಳ್ಳಿ’ ರವಿ ರಾಮ ಕುಂಜ ,’ಗಡಿನಾಡ ಅಭಿನಯ ರತ್ನ’ ಅನಿಲ್ ರಾಜ್ ಉಪ್ಪಳ ,’ರಂಗ ಚತುರ’…

Read More

ರೇಣುಕಾಸ್ವಾಮಿ ಹತ್ಯೆ ಕೇಸ್‌ – ಎಲ್ಲಾ ಜೈಲುಗಳಿಗೂ ಸುಪ್ರೀಂ ಎಚ್ಚರಿಕೆ

ನವದೆಹಲಿ, ಆ. 15 : ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪರಿಗಣಿಸುವಲ್ಲಿ ಗಂಭೀರ ಹಗರಣವಾಗಿದೆ ಎಂಬ ಕಾರಣದಿಂದ, ಸುಪ್ರೀಂಕೋರ್ಟ್ ಇಂದು ಗಂಭೀರ ತೀರ್ಪು ಪ್ರಕಟಿಸಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ ಮತ್ತು ಇತರರು ಜಾಮೀನಿನ ಹಿನ್ನಲೆಯಲ್ಲಿ ಹೊರಗಿದ್ದರೂ, ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಜಾಮೀನನ್ನು ರದ್ದುಗೊಳಿಸಿ ತೀರ್ಪು ನೀಡಿದೆ. “ಯಾರೂ ಕಾನೂನಿಗಿಂತ ಮೇಲಲ್ಲ. ಆರೋಪಿ ಎಷ್ಟೇ ಪ್ರಸಿದ್ಧ ವ್ಯಕ್ತಿಯಾದರೂ ಕೂಡ ಕಾನೂನಿನ ಮುಂದೆ ಎಲ್ಲರೂ ಸಮಾನರು,” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ….

Read More

ಮೂತ್ರ ವಿಸರ್ಜನೆ ವೇಳೆ ರಸ್ತೆ ಬದಿಯ ಮರದ ರೆಂಬೆ ತಲೆಗೆ ಬಿದ್ದು ಲಾರಿ ಚಾಲಕ ದಾರುಣ ಮೃತ್ಯು

ಪೆರ್ಲ: ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ಮರದಡಿಗೆ ತೆರಳಿದ ಚಾಲಕ ಮರದ ರೆಂಬೆ ಮುರಿದು ಬಿದ್ದು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ದ. ಕ. ಜಿಲ್ಲೆಯ ಬಂಟ್ವಾಳ ಪೆರಾಜೆ ಬಳಿಯ ಕುಡೇಲು ನಿವಾಸಿ ಕಾಂತಪ್ಪ ಗೌಡ – ಗೀತಮ್ಮ ದಂಪತಿ ಯ ಪುತ್ರ ಕೆ. ಜಗದೀಶ ಗೌಡ (50) ಮೃತ ವ್ಯಕ್ತಿಯಾಗಿದ್ದಾರೆ.ಬುಧವಾರ ಮುಂಜಾನೆ ಆರೂಕಾಲರ ವೇಳೆಗೆ ಪೆರ್ಲ- ಸೀತಾಂಗೋಳಿ ರಸ್ತೆಯ ಬೆದ್ರಂಪಳ್ಳದಲ್ಲಿ ಈ ಘಟನೆ ನಡೆಯಿತು. ಮೂಡಬಿದಿರೆಯಿಂದ ಕಾಸರಗೋಡಿಗೆ ಪಶು ಆಹಾರ ಸಾಗಿಸುತ್ತಿದ್ದ…

Read More

ರೇಣುಕಾಸ್ವಾಮಿ ಹತ್ಯೆ ಪ್ರಕರಣ – ಪವಿತ್ರಾ ಗೌಡ ಬಂಧನ

ಬೆಂಗಳೂರು, ಆ. 15 : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪವಿತ್ರಾ ಗೌಡ ಜಾಮೀನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ, ಬೆಂಗಳೂರು ಪೊಲೀಸರು ಪವಿತ್ರಾ ಅವರನ್ನು ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳ ಜಾಮೀನು ರದ್ದುಪಡಿಸಿದ ಬಳಿಕ, ಎಲ್ಲಾ ಆರೋಪಿಗಳನ್ನು ಪುನಃ ವಶಕ್ಕೆ ಪಡೆಯುವ ಕಾರ್ಯಾಚರಣೆ ಪ್ರಾರಂಭವಾಗಿದೆ. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸ್ಪಂದನೆ ನೀಡಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳು ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ನೇತೃತ್ವದ ದ್ವಿಸದಸ್ಯ ಪೀಠ, ಹೈಕೋರ್ಟ್…

Read More

ನಮ್ಮ ಕುಡ್ಲ ವಾಹಿನಿಯ ಬೊಳ್ಳಿ ಪರ್ಬ 2025 ಸಮಾರೋಪ ಮಾತೃಭಾಷೆಯಲ್ಲಿ ತುಳುವಾರ್ತೆ ಬಂದಾಗ ಬಾರೀ ಸಂತೋಷ : ಡಾ. ಡಿ. ವೀರೇಂದ್ರ ಹೆಗ್ಗಡೆ

ಮಂಗಳೂರು, ಆಗಸ್ಟ್ 13: ಧರ್ಮಸ್ಥಳದ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮಕುಡ್ಲ ಬೇಕೇ ಬೇಕು. ಶ್ರೀ ಕಾಂತರಾವ್ ರಂಥ ಅದ್ಭುತ ಟೀಮ್ ಇದೆ. ಮಾತೃಭಾಷೆ ನಮಗೆ ಬಹಳ ಪ್ರಿಯವಾದುದು. ಮಾತೃಭಾಷೆಯಲ್ಲಿ ತುಳುವಾರ್ತೆ, ಕಾರ್ಯಕ್ರಮ ಬಂದಾಗ ಭಾರೀ ಸಂತೋಷ ಎಂದು ರಾಜ್ಯಸಭಾ ಸದಸ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಮಂಗಳೂರಿನ ಪುರಭವನದಲ್ಲಿ ಆಗಸ್ಟ್ 12 ರಂದು ನಡೆದ ಪ್ರಥಮ ತುಳು ವಾರ್ತಾವಾಹಿನಿ ‘ನಮ್ಮಕುಡ್ಲ’ದ ಬೊಳ್ಳಿ ಪರ್ಬ 2025 ರ ಸಮಾರೋಪ ಸಮಾರಂಭದಲ್ಲಿ…

Read More

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ತಿದ್ದುಪಡಿ ಕುರಿತು ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಕಿಶೋರ್ ಕುಮಾರ್ ಪುತ್ತೂರು.

ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದ ಸೆಕ್ಷನ್ 64 ಪ್ರಕಾರ, ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಡ ಪರವಾನಿಗೆ ವಿತರಿಸುವ ಅಧಿಕಾರ ಗ್ರಾಮ ಪಂಚಾಯತಿಗಿದೆ. ಆದರೆ, ಸಬ್-ಸೆಕ್ಷನ್ 5-A ಪ್ರಕಾರ ಲೇಔಟ್ ಅನುಮೋದನೆ ಮತ್ತು ಕಟ್ಟಡ ಪರವಾನಿಗೆ ವಿತರಿಸುವ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳು ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961 ಅನ್ನು ಪಾಲಿಸಬೇಕಾದ ಕಾರಣ, ಗ್ರಾಮ ಪಂಚಾಯತಿಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ, ಶಾಸಕ ಕಿಶೋರ್ ಕುಮಾರ್ ಪುತ್ತೂರು…

Read More

ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಿ ಬಸ್ ಸಂಚಾರ ಆರಂಭಕಾಞಂಗಾಡು -ಮೂನಾಂಕಡವ್ – ಸುಳ್ಯ ರೂಟ್

ಕಾಸರಗೋಡು : ಬಂದಡ್ಕ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಕಾಞಂಗಾಡು -ಸುಳ್ಯ ರೂಟಿನಲ್ಲಿ ಕೇರಳ ಕೆಎಸ್ಸಾರ್ಟೀಸಸಿ ಯ ಲಿಮಿಟೆಡ್ ಸ್ಟಾಪ್ ಆ. 14ರಂದು ಸಂಚಾರ ಆರಂಭಿಸಿತು‌. ಕಾಞಂಗಾಡು, ಪೆರಿಯ, ಮೂನಾಂಕಡವ್, ಕುಂಡಾಂಗುಳಿ, ಬಂದಡ್ಕ ದಾರಿಯಾಗಿ ಸುಳ್ಯಕ್ಕೆ ಸರ್ವೀಸ್ ನಡೆಸುವ ಬಸ್ ಸಂಚಾರವನ್ನು ಶಾಸಕ ಸಿ. ಎಚ್. ಕುಂಞಂಬು ಇಂದು ಬೆಳಿಗ್ಗೆ ಕುತ್ತಿಕ್ಕೋಲ್ ನಲ್ಲಿ ಸಂಚಾರ ಉದ್ಘಾಟಿಸಿದರು.ಮಲೆನಾಡು ಪ್ರದೇಶವಾದ ಕುತ್ತಿಕೋಲ್, ಬೇಡಗಂ ಪಂಚಿಯತಿನ ಜನತೆಗೆ ಈ ಬಸ್ ಸಂಚಾರದ ಮೂಲಕ ಅತಿ ಸುಲಭದಲ್ಲಿ ಸುಳ್ಯವನ್ನು ಸಂಪರ್ಕಿಸಬಹುದಾಗಿದೆ. ಚಿಕಿತ್ಸೆ, ಉನ್ನತಶಿಕ್ಷಣ,…

Read More
error: Content is protected !!