ಔಷಧ ಎಂದು ಇಲಿ ಪಾಷಾಣ ಸೇವನೆ- ಹೆಡ್ ಕಾನ್‌ಸ್ಟೆಬಲ್ ಸಾವು

ಮಂಗಳೂರು:ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಇಲಿ ಪಾಷಾಣವನ್ನು ಔಷಧಿ ಎಂದು ತಪ್ಪಾಗಿ ಭಾವಿಸಿ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಮೃತರನ್ನು ಸುರತ್ಕಲ್ ಬಳಿಯ ಚೆಲಾರು ನಿವಾಸಿ ಮತ್ತು ಹರೇಕಳ ಮೂಲದ ಮಂಜುನಾಥ ಹೆಗ್ಡೆ (44) ಎಂದು ಗುರುತಿಸಲಾಗಿದೆ. ಅವರು ಆರೋಗ್ಯ ಸಮಸ್ಯೆಗೆ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಆಕಸ್ಮಿಕವಾಗಿ ಅವರು ಔಷದ ಎಂದು ಇಲಿ ವಿಷ ಸೇವಿಸಿದ್ದಾರೆ.ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಅವರು ಪತ್ನಿ…

Read More

ಕಡಬ ಪಟ್ಟಣ ಪಂಚಾಯಿತಿ ಚುನಾವಣೆ;ನೀತಿ ಸಂಹಿತೆ ಜಾರಿಚುನಾವಣಾದಿಕಾರಿಗಳ ನೇಮಕ;ರಾಜಕೀಯ ಪಕ್ಷಗಳ ಪ್ರಮುಖರ ಸಭೆ

ಕಡಬ ಪಟ್ಟಣ ಪಂಚಾಯಿತಿ ಚುನಾವಣೆಗೆ ಅದಿಸೂಚನೆ ಪ್ರಕಟವಾಗಿದ್ದು, ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಮಂಗಳವಾರದಿoದಲೇ (ಜು. ೨೯ ) ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ.ಚುನಾವಣಾ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡುವ ಸಲುವಾಗಿ ಮಂಗಳವಾರ ಸಂಜೆ ಕಡಬ ತಾಲೂಕು ಆಡಳಿತ ಸೌಧದಲ್ಲಿ ತಹಶೀಲ್ದಾರ್ ಪ್ರಭಾಕರ ಖಜೂರೆ ಅವರು ಪ್ರಮುಖ ರಾಜಕೀಯ ಪಕ್ಷಗಳ ಸಭೆ ನಡೆಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈಗಾಗಲೇ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕಡಬ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಾಮಪತ್ರ…

Read More

ಪಾವೂರು ವನದುರ್ಗಾ ನಾಗಬ್ರಹ್ಮ ಶಾಸ್ತಾರ ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗ ತಂಬಿಲ ಪೂಜೆ

ಮಂಜೇಶ್ವರ :ಪಾವೂರು ವನದುರ್ಗಾ ನಾಗಬ್ರಹ್ಮ ಶಾಸ್ತಾರ ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗ ತಂಬಿಲ ಪೂಜೆ ಶ್ರೀ ಕುಂಟ್ಟಾರು ರವೀಶ್ ತಂತ್ರಿ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಷೆತ್ರದ ಅಧ್ಯಕ್ಷರಾದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಉಪಾಧ್ಯಕ್ಷರಾದ ಶ್ರೀ ಗಣೇಶ್ ಪಾವೂರು ಕಾರ್ಯದರ್ಶಿ ಕಮಲಾಕ್ಷ ವಕೀಲರು ಮಂಗಳೂರು ಖಜಾಂಚಿ ಕೋಟಿಯಪ್ಪ ಪೂಜಾರಿ ಜಯರಾಮ ಪಾವೂರು ಉಮೇಶ ಪಾವೂರು ಗೋಪಾಲ ಕುಂಡಾಪು ಹಾಗೂ ಕ್ಷೆತ್ರದ ಪದಾಧಿಕಾರಿಗಳು ಭಕ್ತರು ಉಪಸ್ಥಿತರಿದ್ದರು ಹಾಗೂ ಪಾವೂರು ಶ್ರೀ ಚಾಮುಂಡೇಶ್ವರಿ ಕ್ಷೆತ್ರದ ಸೇವಾ ಸಮಿತಿ…

Read More

ಭೂ ಸರ್ವೇ ಕ್ಷಣಕ್ಕಾಗಿ ನಿಸಾರ್‌ ಉಪಗ್ರಹ ಇಂದು ಶ್ರೀಹರಿಕೋಟೆಯಿಂದ ನಭಕ್ಕೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ನಿಸಾರ್ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಗೆ ಸಜ್ಜಾಗಿದೆ. ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5:40ಕ್ಕೆ ಇಸ್ರೋದ GSLV-F16 ಉಪಗ್ರಹದ ಬೆನ್ನೇರಿ ಬಾಹ್ಯಾಕಾಶಕ್ಕೆ ತೆರಳಲಿದೆ. ಈ ಉಪಗ್ರಹವು ಶ್ರೀಹರಿಕೋಟದಿಂದ ಉಡಾವಣೆ ಆಗುತ್ತಿರುವ 102ನೇ ಉಪಗ್ರಹವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಿಗೆ ಅಮೂಲ್ಯವಾದ ಮಾಹಿತಿ ಒದಗಿಸಲಿದೆ. ಅಲ್ಲದೇ ನಿರ್ಗಲ್ಲು,…

Read More

ಭೂಗತ ಕೇಬಲ್ ಮಾರ್ಗ ಅಳವಡಿಕೆ

ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ( ಮೆಸ್ಕಾಂ ) ಉಡುಪಿ ಉಪವಿಭಾಗದ ನಿಟ್ಟೂರು-ಮಲ್ಪೆ 33 ಕೆವಿ ಎ.ಬಿ ಕೇಬಲ್ ಮಾರ್ಗಕ್ಕೆ ಹೆಚ್ಚುವರಿಯಾಗಿ ಪಾಳೆಕಟ್ಟೆಯಿಂದ ಮಲ್ಪೆ 33/11ಕೆವಿ ವಿದ್ಯುತ್ ಉಪಕೇಂದ್ರದ ತನಕ 33ಕೆವಿ ಯು.ಜಿ ಕೇಬಲ್‌ಅಳವಡಿಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಯಾವುದೇ ಕ್ಷಣದಲ್ಲಿ 2.2 ಕಿ.ಮೀ ಉದ್ದದ 33ಕೆವಿ ಭೂಗತ ಕೇಬಲ್ ಮಾರ್ಗವನ್ನು ಜು.30 ರ ನಂತರ ಚಾಲನೆಗೊಳಿಸಲಿದೆ. ಅದುದರಿಂದ ಪಾಳೆಕಟ್ಟೆ, ತೆಂಕನಿಡಿಯೂರು ಜಂಕ್ಷನ್, ವೈಷ್ಣವಿ ಲೇ ಔಟ್, ಉದ್ದಿನ ಹಿತ್ತು, ವಡಬಾಂಡೇಶ್ವರ ಪ್ರದೇಶಗಳಲ್ಲಿ ಯಾವುದೇ ರೀತಿಯ…

Read More

ವಿಟ್ಲ: ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ ಬೈಕ್ ಗೆ ಡಿಕ್ಕಿ: ಬೈಕ್‌ ಸವಾರ ಗಂಭೀರ

ವಿಟ್ಲ : ಖಾಸಗಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಚಂದಳಿಕೆ ಎಂಬಲ್ಲಿ ಜು.೨೯ರಂದು ರಾತ್ರಿ ನಡೆದಿದೆ.ಗಾಯಗೊಂಡ ಬೈಕ್ ಸವಾರನನ್ನು ಪೆರುವಾಯಿ ನಿವಾಸಿ ಅರ್ಚಕ ಹರ್ಷ ಭಟ್ ಎಂದು ಗುರುತಿಸಲಾಗಿದೆ. ವಿಟ್ಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಪೂರ್ಣಿಮಾ ಹೆಸರಿನ ಖಾಸಗಿ ಬಸ್ ನ ಚಾಲಕ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪುತ್ತೂರು ಕಡೆಯಿಂದ ಬರುತ್ತಿದ್ದ ಬೈಕ್‌ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ಗಂಭೀರ ಗಾಯ…

Read More

ಧರ್ಮಸ್ಥಳ ಪ್ರಕರಣ – ಉತ್ಖನನ ಆರಂಭ, ಕಾಣ ಸಿಗುತ್ತಿಲ್ಲ‌ ಕಳೇಬರ ಅವಶೇಷ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆ ಮುಂದುವರಿಸಿದ್ದು, ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಪೊಲೀಸ್ ಬಿಗು ಭದ್ರತೆಯೊಂದಿಗೆ ಇಂದು ಆರಂಭಗೊಂಡಿದೆ. ಈ ಪ್ರಕರಣದ ದೂರುದಾರ ವ್ಯಕ್ತಿಯೂ ಮುಸುಕು ಧರಿಸಿ ಸ್ಥಳದಲ್ಲಿದ್ದನು. ೧೩ ಮಂದಿ ಕಾರ್ಮಿಕರು ಅಗೆಯುವ ಕೆಲಸದಲ್ಲಿ ತೊಡಗಿದ್ದಾರೆ.ಧರ್ಮಸ್ಥಳದ ಸ್ನಾನ ಘಟ್ಟದ ಸಮೀಪದ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನಲಾದ ಜಾಗವನ್ನು ಕಾರ್ಮಿಕರು…

Read More

ತುಳುನಾಡ ಹೆಗ್ಗುರುತು ಚಂದ್ರಗಿರಿ ಕೋಟೆಯ ಕಥೆ ವ್ಯಥೆ

ಉತ್ತರ ಕೇರಳದ ಇತಿಹಾಸ ಅರಿಯುವುದು ಸುಲಭದ ಮಾತಲ್ಲ . ಈ ಭಾಗದ ಇತಿಹಾಸವನ್ನು ತಿಳಿಯುವಲ್ಲಿ ಬರಹಗಳ ಹೊರತಾಗಿ ಇಲ್ಲಿನ ಪುರಾತತ್ವ ವಸ್ತು ಆಧಾರಗಳು ಸಾಕಷ್ಟು ಸಹಕಾರಿಯಾಗಿದೆ. ಅವುಗಳು ಸತ್ಯ ಇತಿಹಾಸಕ್ಕೆ ಕೈ ಕನ್ನಡಿಯಂತಿವೆ. ಅವುಗಳಲ್ಲಿ ಶಾಸನಗಳು , ಕೋಟೆಗಳು , ದೇವಾಲಯಗಳು , ನಾಣ್ಯಗಳು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತವೆ. ಅವು ಇತಿಹಾಸದ ಪುನರ್ ರಚನೆಗೆ ಸಹಕಾರಿಯಾಗುತ್ತವೆ. ಈ ನಾಡಿನ ಸಂಸ್ಕೃತಿಯ ನಾಡಿಮಿಡಿತದಂತಿರುವ ಕೋಟೆ ಕೊತ್ತಲಗಳ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಲೇಬೇಕು . ಕಾಸರಗೋಡನ್ನು ಕೋಟೆಗಳ ನಾಡೆಂದು ಕರೆಯುತ್ತಾರೆ. ಯಾಕೆಂದರೆ…

Read More

ಯುವಕನನ್ನು ಅಪಹರಿಸಿ ಕೊಲೆಗೈದುಶವವನ್ನು ಉಪೇಕ್ಷಿಸಿದ ಪ್ರಕರಣ – 10 ನೇ ಆರೋಪಿಯನ್ನು ಬಂಧಿಸಿದ ಪೊಲೀಸ್

ಮಂಜೇಶ್ವರ: ಕೊಲ್ಲಿ ಉದ್ಯೋಗಿ ಯುವಕನನ್ನುಅಪಹರಣಗೈದು ಹಿಗ್ಗಾ ಮಗ್ಗಾ ಥಳಿಸಿ ಕೊಲೆಗೈದ ಬಳಿಕ ಶವವನ್ನು ಕಾರಿನಲ್ಲಿ ಕೊಂಡೊಯ್ದು ಖಾಸಗಿ ಆಸ್ಪತ್ರೆಯಲ್ಲಿ ಉಪೇಕ್ಷಿಸಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾಡನ್ನು ನಡುಗಿಸಿದ ಈ ಪ್ರಕರಣದ 10ನೇ ಆರೋಪಿಯಾದ ಮಂಜೇಶ್ವರ ಆಚೆಕೆರೆಯ ಅಶರ್ ಅಲಿ (27) ಎಂಬಾತನನ್ನು ಕಾಸರಗೋಡು ಕ್ರೈಂಬ್ರಾಂಚ್ ತಂಡ ಬಂಧಿಸಿದೆ. ಕೊಲ್ಲಿ ರಾಷ್ಟ್ರದಿಂದ ಊರಿಗೆ ಮರಳುತ್ತಿದ್ದ ವೇಳೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಈತ ನನ್ನು ಬಂಧಿಸಲಾಗಿದೆ. ಕಾಸರಗೋಡಿಗೆ ತಲುಪಿಸಿದ ಆರೋಪಿಯನ್ನು ಸಮಗ್ರ ವಾಗಿ ತನಿಖೆಗೊಳಪಡಿಸಿದ ಬಳಿಕ…

Read More

ಹೊಸಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಮಂತ್ರಣ ಪತ್ರಿಕೆ ಬಿಡುಗಡೆ .

ಮಂಜೇಶ್ವರದ ಹೊಸಂಗಡಿಯ 45 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಇತ್ತೀಚೆಗೆ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು.ಮಂಜೇಶ್ವರ ಸರ್ವಿಸ್ ಕೊ_ಓಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ನಿರ್ದೇಶಕರಾದ ಸಿ.ಎಚ್. ಗಣೇಶ್ ಬಿಡುಗಡೆಗೊಳಿಸಿದರು. ಪದ್ಮನಾಭ ಕಡಪ್ಪರ ,ಹರೀಶ್ ಮಾಡ , ನ್ಯಾಯವಾದಿ ನವೀನ್ ರಾಜ್,ದಿನಕರ ಹೊಸಂಗಡಿ,ಆದರ್ಶ್ ಬಿ ಎಂ , ಅವಿನಾಶ್ ಮಂಜೇಶ್ವರ ,ಭಾಸ್ಕರ ಮಂಜೇಶ್ವರ ,ರತನ್ ಹೊಸಂಗಡಿ ,ಚಿನ್ಮಯಾನಂದ ಹೊಸಂಗಡಿ ಮುಂತಾದವರು ಉಪಸ್ಥಿತರಿದ್ದರು. ಆಗಸ್ಟ್ 27 ರಿಂದ 30 ರ ತನಕ ವಿವಿಧ…

Read More
error: Content is protected !!