ಮೂರು ತಿಂಗಳ ಹಸುಗೂಸಿನ ತಾಯಿಯೊಬ್ಬಳು ಗಂಡನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ

ಮಂಜೇಶ್ವರ : ಮೂರು ತಿಂಗಳ ಹಸುಗೂಸಿನ ತಾಯಿಯೊಬ್ಬಳು ಗಂಡನ ಮನೆಯಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಉಪ್ಪಳ ಸೋಂಕಾಲ ಕೊಡಂಗೆ ರಸ್ತೆ ನಿವಾಸಿ ಮೊಯ್ದಿನ್ ಸವಾದ್‌ ಎಂಬವರ ಪತ್ನಿ ಫಾತಿಮತ್ ನಬೀನಾ (25) ಸಾವನ್ನಪ್ಪಿದ ದುರ್ದೈವಿ. ಈಕೆ ಮಲಗುವ ಕಿಟಿಕಿಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂದು ವ್ಯಕ್ತವಾಗಿಲ್ಲ. ಪ್ರಕರಣ ದಾಖಲಿಸಿ ಮಂಜೇಶ್ವರ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.

Read More

ತ್ರಿಸ್ತರ ಚುನಾವಣೆ ಜಿಲ್ಲೆಯಲ್ಲಿ 74.89ಶೇ. ಮತದಾನ

ಮಂಜೇಶ್ವರ : ನಿನ್ನೆ ನಡೆದ ತ್ರಿಸ್ತರ ಚುನಾವಣೆಯಲ್ಲಿ ಮತದಾರರು ಬಿರುಸಿನಿಂದ ಮತದಾನಗೃದಿದ್ದಾರೆ, ಸಂಜೆ 6ಗಂಟೆಯ ತನಕ ಜಿಲ್ಲೆಯಲ್ಲಿ 74.89ಶೇ. ಮತದಾನ ನಡೆದಿದೆ. ಅನೇಕ ಮತಗಟ್ಟೆಗಳಲ್ಲಿ ಮತಯಂತ್ರಗಳ ತೊಂದರೆಯಿಂದಾಗಿ ಮತ್ತು ಮತದಾರರ ಸರದಿ ಸಾಲುಗಳಿದ್ದ ಕಾರಣ 6ಗಂಟೆ ದಾಟಿಯೂ ಮತದಾನ ಮುಂದುವರಿದಿದೆ. ಕೆಲವೊಂದು ವಾರ್ಡ್ ಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದರೂ ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.ಜಿಲ್ಲೆಯಲ್ಲಿ ಪ್ರಸಕ್ತ ವರದಿಯಂತೆ 814997 ಮಂದಿ ಮತದಾನ ಗೈದರು. ಈಪೈಕಿ 366957 ಪುರುಷರು ಮತ್ತು 448038…

Read More

ಶ್ರೀ ಅಯ್ಯಪ್ಪ ಭಜನಾ ಮಂದಿರ, ಬಾಳ್ಳೂರು – ವಾರ್ಷಿಕ ಮಹೋತ್ಸವ

ಶ್ರೀ ಅಯ್ಯಪ್ಪ ಭಜನಾ ಮಂದಿರ ಬಾಳ್ಳೂರಿನ ವಾರ್ಷಿಕ ಮಹೋತ್ಸವವು 13-12-2025 (ಶನಿವಾರ) ರಿಂದ 14-12-2025 (ಆದಿತ್ಯವಾರ)ದ ವರೆಗೆ ದಡ್ಡಂಗಡಿ ವೇದಮೂರ್ತಿ ಬಾಲಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ, ಕೊಂಡೆವೂರು ಮಠ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಜರಗಲಿದೆ. ಈ ಸಂದರ್ಭದಲ್ಲಿ 13ನೇ ವರ್ಷದ ಏಕಾಹ ಭಜನೆ, 36ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ಬಯಲಾಟ ಸೇರಿದಂತೆ ವಿವಿಧ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Read More

ಭಯದ ವಾತಾವರಣ ಸೃಷ್ಟಿಸಿದ ನಾಗರಾಹಾವು: ಸೆರೆ ಹಿಡಿದು ಮಾನವೀಯತೆ ಮೆರೆದ ಉರಗ ತಜ್ಞ ರಾಜು ಕಿದೂರು

ಕುಂಬ್ಳೆ : ಎರಡು ದಿನಗಳಿಂದ ಬಂಬ್ರಾಣ ಬತ್ತೆರಿ ನಿವಾಸಿ ನಾರಾಯಣ ಅವರ ಮನೆ ಅಂಗಳದಲ್ಲಿ ಸುತ್ತಾಡುತ್ತಿದ್ದ ನಾಗರ ಹಾವೊಂದು ಮನೆ ಮಂದಿಗೆ ಭಯದ ವಾತಾವರಣ ಸೃಷ್ಟಿಸಿತ್ತು. ಇದೀಗ ಕೊನೆಗೂ ಇಂದು ಮುಂಜಾನೆ 7 ಗಂಟೆಯ ಸುಮಾರಿಗೆ ಹೊಲಿ ಫ್ಯಾಮಿಲಿ ಶಾಲಾ ಅಧ್ಯಾಪಕರು ಹಾಗೂ ನುರಿತ ಉರಗ ತಜ್ಞರಾದ ರಾಜು ಕಿದುರ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೂ ಮನೆ ಹಾಗೂ ಊರ ಮಂದಿ ನಿಟ್ಟುಸಿರು ಬಿಡುವಂತಾಗಿದೆ. ಈ ಸಂಧರ್ಭದಲ್ಲಿ ಉರಗ ತಜ್ಞರಾದ ರಾಜು…

Read More

ಸ್ವಸ್ತಿಕ್ ಕಲಾಕೇಂದ್ರ ( ರಿ) ಜಲ್ಲಿಗುಡ್ಡೆ .ಯಕ್ಷರಂಗದ ಧೀಮಂತ ಪ್ರತಿಭೆ ಬಾಬು ಕುಡ್ತಡ್ಕ ಪ್ರಶಸ್ತಿ ಪ್ರಧಾನ ಸಮಾರಂಭ

ಸ್ವಸ್ತಿಕ್ ಕಲಾಕೇಂದ್ರ ( ರಿ) ಜಲ್ಲಿಗುಡ್ಡೆ ಇದರ ವತಿಯಿಂದ ರಾಮಕೃಷ್ಣ ಮಿಷನ್ ಮಂಗಳೂರು ಇಲ್ಲಿನ ವಿವೇಕಾನಂದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಯಕ್ಷರಂಗದಲ್ಲಿ 33 ವರ್ಷಗಳಿಗೂ ಹೆಚ್ಚು ಕಾಲ ಕಲಾದೇವಿಯನ್ನು ಆರಾಧಿಸಿ ಸವ್ಯಸಾಚಿ ಎನಿಸಿದ ಕುಮಾರ ಗೌಡ ಪುತ್ತಿಗೆ ಇವರಿಗೆ 25-26 ರ ಸಾಲಿನ ಬಾಬು ಕುಡ್ತಡ್ಕ ಪ್ರತಿಷ್ಟಿತ ಬಾಬು ಕುಡ್ತಡ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಗೆ ಸ್ಪಂದಿಸಿ ಮಾತನಾಡಿದ ಅವರು ಬಾಬು ಕುಡ್ತಡ್ಕ ರು ಬದುಕಿದ್ದಾಗ ಅವರು ನಾನು ಒಂದೇ ಮೇಳದಲ್ಲಿದ್ದೆವು ನನ್ನ.ತಪ್ಪುಗಳನ್ನು ತಿದ್ದಿ ನನಗೆ ಮೂರ್ತಿ…

Read More

ಬೆಂಗಳೂರಿನಲ್ಲಿ ರಸ್ತೆ ಅಪಘಾತ: ಬಂಟ್ವಾಳ ಮೂಲದ ಯುವಕ ಕೊನೆಯುಸಿರು … !

ಬಂಟ್ವಾಳ :ಬೆಂಗಳೂರಿನ ಕೊಡ್ಲುಗೇಟ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ನವ ವಿವಾಹಿತ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಪೆರಿಯಪಾದೆ ಜಮಾಅತಿಗೊಳಪಟ್ಟ ಕುಂಟಾಲಪಳಿಕೆ-ಕೆಳಗಿನ ಮನೆ ನಿವಾಸಿ ದಿವಂಗತ ಅಹಮದ್ ಎಂಬವರ ಪುತ್ರ ಮುಹಮ್ಮದ್ ಹಾರಿಸ್ (27) ಎಂದು ಹೆಸರಿಸಲಾಗಿದೆ. ಬೆಂಗಳೂರಿನ ಎಸಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಹಾರಿಸ್ ಡಿ 9 ರಂದು ಕೆಲಸದ ನಿಮಿತ್ತ ತನ್ನ ಸಹೋದ್ಯೋಗಿ ಜೊತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಟಾಟಾ ಏಸ್ ಗೂಡ್ಸ್…

Read More

ಟಯರ್ ಸ್ಪೋಟಗೊಂಡು ಟೆಂಪೋ ಪಲ್ಟಿ – ಕಾರ್ಮಿಕ ಮಹಿಳೆ ದುರಂತ ಅಂತ್ಯ …. !

ಉಡುಪಿ: ಕಾಂಕ್ರೀಟ್ ಕೆಲಸಕ್ಕೆ ಸಾಗುತ್ತಿದ್ದ ಟೆಂಪೋ ವೊಂದರ ಟಯರ್ ಸ್ಫೋಟಗೊಂಡು ಮಗುಚಿ ಬಿದ್ದ ಪರಿಣಾಮ ಮಹಿಳಾ ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ. 66ರಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.ಮೃತಪಟ್ಟ ಮಹಿಳೆಯನ್ನು ಪಾರ್ವತಿ (30) ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, ಮಹಂತೇಶ್ ಸಹಿತ 7 ಜನರು ಗಾಯಗೊಂಡಿದ್ದಾರೆ. ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳೆಯರಿದ್ದರು. ವೇಗವಾಗಿ ಸಾಗುತ್ತಿದ್ದ ವಾಹನದ…

Read More

ಸೌಜನ್ಯ ಹೋರಾಟಕ್ಕೆ ನ್ಯಾಯದ ಆಶೀರ್ವಾದ ಮಾಡಿರೋ ಶ್ರೀಗಳ ಫೋಟೋಗಳು ಎಲ್ಲೆಡೆ ವೈರಲ್…. ! ಅಷ್ಟಕ್ಕೂ ಯಾರು ಈ ಗುರುಗಳು… ?

ಮಂಗಳೂರು: ಶ್ರೀ ನಿರ್ಮಲಾನಂದ ಗುರುಗಳು ಚಿನ್ನಯ್ಯನಿಗೆ ಮತ್ತು ಹೋರಾಟಗಾರರಿಗೆ ಒಕ್ಕಲಿಗ ಮಹಾಸಂಸ್ಥಾನದಲ್ಲಿ ಕಾಲಭೈರವ ದರ್ಶನ ನಂತರ ತಮ್ಮ ಪೀಠದಲ್ಲಿ ಕುಳಿತು ಸೌಜನ್ಯ ಹೋರಾಟಕ್ಕೆ ನ್ಯಾಯದ ಆಶೀರ್ವಾದ ಮಾಡಿರೋ ಫೋಟೋಗಳು ಲಭ್ಯವಾಗಿದೆ. ಸೌಜನ್ಯ ಅತ್ಯಾಚಾರ – ಕೊಲೆ ಅಷ್ಟೇ ಅಲ್ಲ, ಧರ್ಮಸ್ಥಳದಲ್ಲಿ ತಾನು ಅತ್ಯಾಚಾರ ಕೊಲೆಯಾಗಿ ಶವವಾದ ಅನೇಕ ದೇಹಗಳನ್ನು ಅಕ್ರಮವಾಗಿ ಹೂತು ಹಾಕಿದ ವಿವರಗಳನ್ನು ಚಿನ್ನಯ್ಯ ಸ್ವತಃ ನಿರ್ಮಲಾನಂದ ಶ್ರೀಗಳ ಎದುರು ಎಳೆ ಎಳೆಯಾಗಿ ಬಿಚ್ಚಿಟ್ಟಾಗ ದಂಗಾಗಿ ಹೋಗಿದ್ದರು. ಮೃತ ಸೌಜನ್ಯ ಒಕ್ಕಲಿಗ ಹೆಣ್ಣು ಮಗು, ಅವಳಿಗಷ್ಟೇ…

Read More

ವಿಟಮಿನ್ ಕೊರತೆ ಮತ್ತು ಬಾಯಿ ಹುಣ್ಣು

ಬಾಯಿ ಹುಣ್ಣುಗಳು ಚಿಕ್ಕ ವಿಷಯವಾಗಿ ಕಾಣಿಸಬಹುದು, ಆದರೆ ಅವು ವಿಟಮಿನ್ ಕೊರತೆಯಿಂದ ಹಿಡಿದು ಬಾಯಿಯ ಕ್ಯಾನ್ಸರ್‌ವರೆಗಿನ ಹೆಚ್ಚು ಗಂಭೀರ ಆರೋಗ್ಯ ಸಮಸ್ಯೆಗಳ ಆರಂಭಿಕ ಸೂಚಕಗಳಾಗಿರಬಹುದು. ನಿಮ್ಮ ಬಾಯಿ ನಿಮಗೆ ಹೇಳುವುದನ್ನು ಕೇಳುವುದು ನೀವು ಅರಿತುಕೊಳ್ಳುವುದಕ್ಕಿಂತ ಹೆಚ್ಚು ಮುಖ್ಯವಾಗಬಹುದು. ಎಲ್ಲಾ ಹುಣ್ಣುಗಳು ಒಂದೇ ಆಗಿರುವುದಿಲ್ಲ ಬಾಯಿ ಹುಣ್ಣು ಸಾಮಾನ್ಯವಾಗಿ ದುಂಡಗಿನ ಅಥವಾ ಅಂಡಾಕಾರದ ಆಕಾರದಲ್ಲಿರುತ್ತದೆ, ಬಿಳಿ ಅಥವಾ ಹಳದಿ ಮಧ್ಯಭಾಗ ಮತ್ತು ಕೆಂಪು ಅಂಚನ್ನು ಹೊಂದಿರುತ್ತದೆ. ಅವು ಸಾಮಾನ್ಯವಾಗಿ ಕೆನ್ನೆಯ ಒಳಗೆ, ತುಟಿಗಳ ಮೇಲೆ ಅಥವಾ ನಾಲಿಗೆಯ ಮೇಲೆ…

Read More
error: Content is protected !!