“ಚಿನ್ನ ಖರೀದಿ ಮಾಡಬೇಡಿ” ಹೇಳಿಕೆ ಬಾಲಿಶತನದ್ದು: ಪ್ರಧಾನಿ ವಿರುದ್ಧ ಹರೀಶ್ ಕುಮಾರ್ ವಾಗ್ದಾಳಿ

ಮಂಗಳೂರು: ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ, ವಾಹನಗಳಲ್ಲಿ ನಿಯಮಿತವಾಗಿ ಓಡಾಡಿ ಎಂದು ಕರೆ ನೀಡಿರುವುದು ನಾಚಿಕೆಗೇಡು. ಇದು ಕುಣಿಯಲಾಗದವ ಅಂಗಣ ಡೊಂಕು ಹೇಳಿದಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ದೇಶಾದ್ಯಂತ ವಾಣಿಜ್ಯ ಗ್ಯಾಸ್‌ಗಳ ದರ 993ರೂ. ಏರಿಕೆ ಮಾಡಲಾಗಿದೆ. ದಿನಬಳಕೆ ವಸ್ತುಗಳು ದರ ಗಗನಕ್ಕೇರಿದೆ. ಒಂದೆಡೆ ಆತ್ಮ ನಿರ್ಭರ್ ಭಾರತ್, ವಾಹನ ಕೈಗಾರಿಕೆ, ಉದ್ಯಮ ವಲಯಕ್ಕೆ ಪ್ರೋತ್ಸಾಹಿಸಿ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಇನ್ನೊಂದೆಡೆ…

Read More

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಹೆಮ್ಮರವಾಗಿ ಬೆಳೆಸಿ – ರೆ.ಫಾ.ಜಾನ್ಸನ್ ಪಿಂಟೋ

ಮನುಷ್ಯ ಹುಟ್ಟಿನಿಂದಲೇ ಒಂದಲ್ಲ ಒಂದು ರೀತಿಯ ಪ್ರತಿಭೆಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುತ್ತಾನೆ.ಇಂತಹ ಪ್ರತಿಭೆಗಳನ್ನು ಎಳೆಯ ಪ್ರಾಯದಲ್ಲಿಯೇ ಗುರುತಿಸಿ, ಪ್ರೋತ್ಸಾಹಿಸಿ ಅದನ್ನು ಹೆಮ್ಮರವಾಗಿ ಬೆಳೆಸುವಂತೆ ಮಕ್ಕಳ ಹೆತ್ತವರು ಸೇರಿದಂತೆ ಸಮಾಜದ ಪ್ರತಿಯೊಬ್ಬ ನಾಗರಿಕರು ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಸಂತ ಅಲೋಶಿಯಸ್ ಹೈಸ್ಕೂಲ್ ನ ಮುಖ್ಯೋಪಾಧ್ಯಾಯರಾದ ರೆ.ಫಾ.ಜಾನ್ಸನ್ ಪಿಂಟೋ ಎಸ್ ಜೆ ಯವರು ಅಭಿಪ್ರಾಯಪಟ್ಟರು. ಅವರು ಚಿಣ್ಣರ ಚಾವಡಿ ಮಂಗಳೂರು ಹಾಗೂ ಸಂತ ಮದರ್ ತೆರೇಸಾ ವಿಚಾರ ವೇದಿಕೆಗಳ ಜಂಟಿ ಆಶ್ರಯದಲ್ಲಿ ಸಂತ ಅಲೋಶಿಯಸ್ ಹೈಸ್ಕೂಲ್ ನ ಸಹಕಾರದೊಂದಿಗೆ 6…

Read More

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರಾಜಕಾಲುವೆಗೆ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ

ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕೊಡಿಯಾಲ್ ಬೈಲ್ ವಾರ್ಡಿನ ತಾಳಿಪಾಡಿ ಮನೆ ಎದುರಿನ ಶರಾವತಿ ಅಪಾರ್ಟ್ಮೆಂಟ್ ಬಳಿಯ ರಾಜಕಾಲುವೆಗೆ ಸುಮಾರು 30 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಶಿಲನ್ಯಾಸವು ನಡೆಯಿತು ಈ ವೇಳೆ ಮಾತನಾಡಿದ ಶಾಸಕರು, ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ರಾಜ ಕಾಲುವೆಯಲ್ಲಿ ನೀರು ಉಕ್ಕಿ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿತ್ತು. ಆದ ಕಾರಣ ಸ್ಥಳೀಯರ ಬೇಡಿಕೆಯಂತೆ ಈ ಪ್ರಮುಖ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿ ಎಂದು ಆಶಿಸುತ್ತೇನೆ….

Read More

ಪ್ರಧಾನಿ ಮೋದಿ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆ; ಎನ್‌ಐಎ ತನಿಖೆ ಆರಂಭ

ಬೆಂಗಳೂರು: ನಗರದ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಂಚಾರ ಮಾರ್ಗದ ಬಳಿ ಸ್ಫೋಟಕ ಪತ್ತೆಯಾಗಿರುವ ಘಟನೆ ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ National Investigation Agency (ಎನ್‌ಐಎ) ತನಿಖೆಗೆ ಇಳಿದಿದ್ದು, ಭದ್ರತಾ ಲೋಪದ ಕುರಿತು ಸವಿಸ್ತಾರ ಪರಿಶೀಲನೆ ಆರಂಭಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎನ್‌ಐಎ ಅಧಿಕಾರಿಗಳ ತಂಡವು ಸ್ಫೋಟಕ ಪತ್ತೆಯಾದ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಬೆಂಗಳೂರು ದಕ್ಷಿಣ ವಿಭಾಗದ ಎಸ್‌ಪಿ ಶ್ರೀನಿವಾಸ ಗೌಡರಿಂದ ಪ್ರಾಥಮಿಕ ತನಿಖಾ ವರದಿ…

Read More

ಕುಗ್ರಾಮದಿಂದ ಅಭಿವೃದ್ಧಿಯ ಹೆಜ್ಜೆ ಗುರುತುಗಳತ್ತ ಕುಳಾಲು,ಬಂಡಮುಗೇರು ಕಾಂಕ್ರೀಟ್ ರಸ್ತೆ ಉದ್ಘಾಟನೆಯ ಮೂಲಕ ಲೋಕಾರ್ಪಣೆ

ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನ ಮೇರೆಗೆ ಕರಾವಳಿ ಪ್ರಾಧಿಕಾರ ಹಾಗೂ ಪಂಚಾಯತ್ ರಾಜ್ ಗ್ರಾಮೀಣಾಭಿವೃದ್ಧಿ ಇಲಾಖೆ ವತಿಯಿಂದ ಕೊಳ್ನಾಡು ಗ್ರಾಮದ ಕುಳಾಲು–ಬಂಡಮುಗೇರ್ ಭಾಗದ ಬಹು ಉದ್ದದ ಡಾಮಾರು ರಸ್ತೆಯನ್ನು ಪುನರ್ ಕಾಂಕ್ರೀಟೀಕರಣಗೊಳಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಯಿತು. ವರ್ಷಗಳ ಕಾಲ ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದ ಸ್ಥಳೀಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ ಈ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಈ ರಸ್ತೆ ಅಭಿವೃದ್ಧಿ ಕಾರ್ಯವು ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ನಿರಂತರ ಮನವಿಗೆ ಸ್ಪಂದಿಸಿ ಶಾಸಕ ಮಂಜುನಾಥ…

Read More

ಉಡುಪಿ ಟ್ರಾಫಿಕ್ ಸಮಸ್ಯೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಆಗ್ರಹ

ಉಡುಪಿ: ಉಡುಪಿಯಲ್ಲಿ ದಿನ ನಿತ್ಯ ಟ್ರಾಫಿಕ್ ಸಮಸ್ಯೆ ಮಿತಿ ಮೀರುತ್ತಿದ್ದು, ರಸ್ತೆಯುದ್ದಕ್ಕೂ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ನಗರದಲ್ಲಿ ಉಂಟಾಗಿರುವ ಸಂಚಾರ ನಿಯಂತ್ರಿಸಲು ನಗರಸಭೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಉಡುಪಿ ನಾಗರಿಕರ ಕಲ್ಯಾಣ ವೇದಿಕೆ ಒತ್ತಾಯಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸದಾಶಿವ ರಾವ್ ಅವರು, ಉಡುಪಿ ನಗರಸಭೆಯು ನಗರದ ಹಳೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಧೂಮಾವತಿ ದೈವಸ್ಥಾನದ ಸುತ್ತಲಿದ್ದ ಕಟ್ಟಡಗಳನ್ನು ನೆಲಸಮಗೊಳಿಸಿದೆ. ಉಡುಪಿಯ ಮಧ್ಯಭಾಗದಲ್ಲಿರುವ,…

Read More

ಕಾಸರಗೋಡು: ಅಕ್ರಮ ಮರಳು ಸಾಗಾಟ – ಟಿಪ್ಪರ್ ಲಾರಿ ಚಾಲಕ ಬಂಧನ

ಕಾಸರಗೋಡು ಜಿಲ್ಲೆಯ ವರ್ಕಾಡಿ ಸಮೀಪದ ಕುಳಾಯಿ ನದಿಯಿಂದ ಅಕ್ರಮವಾಗಿ ಮರಳು ಕಳವು ಮಾಡಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಚಾಲಕನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಲಾರಿ ಹಾಗೂ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬಂಧಿತನನ್ನು ಬಂಟ್ವಾಳ ತಾಲೂಕಿನ ಪಜೀರ್ ಸಮೀಪದ ವೋಂಡ ಮಜಲ್ ನಿವಾಸಿ ರಾಶಿದ್ (19) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ ಸುಮಾರು 9.30ರ ವೇಳೆಗೆಕುಳಾಯಿ ಬಯಲು ಪ್ರದೇಶದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ಕೆ.ಜಿ. ರತೀಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದ…

Read More

ಅಮ್ಮ ಮಂಗಳೂರಿನಲ್ಲಿ ಅಮೃತಸಂಗಮ 2026 ಪ್ರಚಾರ ಪೋಸ್ಟರ್ ಬಿಡುಗಡೆ

ವಿಶ್ವದ ಅಗ್ರಗಣ್ಯ ಆಧ್ಯಾತ್ಮಿಕ ನೇತಾರರೂ ಕೋಟ್ಯಾಂತರ ಭಕ್ತರ ಆರಾಧ್ಯಮಾತೆಯೂ ಆಗಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿಗೆ ಆಗಮಿಸುವ ಪ್ರಯುಕ್ತ ನಡೆಯಲಿರುವ ಬ್ರಹ್ಮಸ್ಥಾನಂ ಮಹೋತ್ಸವ- ಅಮೃತಸಂಗಮ 2026 ಕಾರ್ಯಕ್ರಮದ ಪ್ರಚಾರಾರ್ಥ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು. ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿ ,ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿನ ಈ ಹಿಂದಿನ ಕಾರ್ಯಕ್ರಮದಲ್ಲಿ ದಾಖಲೆಯ…

Read More

ಭಾರತ-ಬಾಂಗ್ಲಾದೇಶ ಗಡಿ ಭದ್ರತೆಗೆ ಹೊಸ ಸರ್ಕಾರದ ಬಿಗಿ ಕ್ರಮ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಗಡಿ ಭದ್ರತೆಗೆ ಸಂಬಂಧಿಸಿದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.ಮುಖ್ಯಮಂತ್ರಿ Suvendu Adhikari ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾರತ–ಬಾಂಗ್ಲಾದೇಶ ಅಂತರಾಷ್ಟ್ರೀಯ ಗಡಿಯಲ್ಲಿ ಫೆನ್ಸಿಂಗ್ ಕಾಮಗಾರಿಗಾಗಿ ಗಡಿ ಭದ್ರತಾ ಪಡೆಗೆ (ಬಿಎಸ್ಎಫ್) ಸುಮಾರು 105 ಎಕರೆ ಭೂಮಿಯನ್ನು ಹಸ್ತಾಂತರಿಸಲು ಸಂಪುಟ ಅನುಮೋದನೆ ನೀಡಿದೆ. ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಮೇ 11ರಿಂದ ಭೂ ಹಸ್ತಾಂತರ ಪ್ರಕ್ರಿಯೆ ಆರಂಭವಾಗಲಿದ್ದು,…

Read More

ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಹಾಗೂ ಕಾರು ನಡುವೆ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ಇಂದು ನಡೆದಿದೆ. ಕೊಕ್ಕಡದಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಕಾರಿನ ನಡುವೆ ಗೋಳಿತ್ತೊಟ್ಟು ಜಂಕ್ಷನ್‌ನಲ್ಲಿ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರೆ ಗಂಭೀರ ಗಾಯಗೊಂಡಿದಾರೆ. ಮೃತಪಟ್ಟ ಬೈಕ್ ಸವಾರ ಅರಸಿನಮಕ್ಕಿ ನಿವಾಸಿ ಎಂದು ತಿಳಿದುಬಂದಿದ್ದು…

Read More
error: Content is protected !!