ಧಾರಾಕಾರ ಮಳೆಗೆ ಮೀಯಪದವುನಲ್ಲಿ ಗುಡ್ಡೆ ಕುಸಿದು ಆವರಣಗೋಡೆ ಹಾನಿ,ಮನೆ ಅಪಾಯದಂಚಿನಲ್ಲಿ ಆತಂಕದ ಸ್ಥಿತಿ
ಮಂಜೇಶ್ವರ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೀಂಜ ಪಂಚಾಯತ್‌ನ ಮೀಯಪದವು ವಿದ್ಯಾವರ್ಧಕ ಹೈಸ್ಕೂಲ್‌ನ ಹಿಂಭಾಗದಲ್ಲಿರುವ ಕೃಷಿಕ ಬಾಬು ಎಂಬವರ ಮನೆ ಬಳಿಯಲ್ಲಿನ ಕೆಳಭಾಗದಲ್ಲಿ ಗುಡ್ಡೆ ಕುಸಿದು ಯಾವುದೇ ಕ್ಷಣದಲ್ಲಿ ಮನೆ ಧಾರಾಶಾಹಿಗೊಳ್ಳು ಭೀತಿ ಉಂಟಾಗಿದೆ. ಸೋಮವಾರದಂದು ಈ ಘಟನೆ ನಡೆದಿದೆ. ಇದರಿಂದ ಮನೆಯ ಸುತ್ತು ಕಲ್ಲಿನ ಆವರಣಗೋಡೆ ಸಂಪೂರ್ಣ ಕುಸಿದು ಹೋಗಿ ಮನೆ ಅಡಿಪಾಯ ಬಳಿ ತನಕ ತಲುಪಿದ್ದು, ಇದೀಗ ಕುಟುಂಬ ಸ್ಥಳಾಂತರಗೊಂಡಿದ್ದಾರೆ. ಇದೇ ವೇಳೆ ತೋಟದಲ್ಲಿರುವ ಬಾವಿ, ಮೋಟಾರ್ ಪಂಪು ಸಹಿತ ಅಡಿಕೆ,ತೆಂಗು,…