ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪೂರಕವಾಗಿದೆ: ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ
ಕುಂಬಳೆ: ಸೀನಿಯರ್ ಟೀಚರ್ಸ್ ಆಯೋಜಿಸಿದ ಕ್ರಿಕೆಟ್ ಸೀನಿಯರ್ ಟೀಚರ್ಸ್ ಪ್ರೀಮಿಯರ್ ಲೀಗ್ ಪಂದ್ಯಾಟ ಇತ್ತೀಚೆಗೆ ಕುಂಬಳೆ ಶೇಡಿಕಾವು ಮೈದಾನದಲ್ಲಿ ಜರುಗಿತು. ನಿವೃತ್ತ ದೈಹಿಕ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ ಕ್ರೀಡಾ ಕೂಟ ಉದ್ವಾಟಿಸಿ ಮಾತನಾಡಿ ‘ದೈಹಿಕ ಆರೋಗ್ಯದ ಕ್ಷಮತೆಯನ್ನು ಹೆಚ್ಚಿಸುವ ಈ ಅಧ್ಯಾಪಕರ ಪಂದ್ಯಾಟವು ಪ್ರಶಂಸನೀಯವಾಗಿದೆ. ಕ್ರಿಯಾತ್ಮಕ ಕಲಿಕೆಯ ಜೊತೆ ಜೊತೆಗೆ ಮಕ್ಕಳ ಜೊತೆ ಬೆರೆಯುವ ಅಧ್ಯಾಪಕರೆಲ್ಲರು ಒಂದು ಕಡೆ ಒಟ್ಟು ಸೇರಿ ಕ್ರೀಡೆಯಲ್ಲಿ ಭಾಗವಹಿಸುವುದು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಇದು ಪೂರಕವಾಗಿದೆ’ ಎಂದು ನುಡಿದರು….
