ನಡಕೊಂಡು ಹೋಗುತ್ತಿದ್ದಯುವಕ ಶೂಟೌಟ್ ತಗುಲಿ ಗಂಭೀರ

ಮಂಜೇಶ್ವರ : ದಾರಿಯಲ್ಲಿ ನಡಕೊಂಡು ಹೋಗುತ್ತಿದ್ದ ಯುವ ಅಡಿಕೆ ವ್ಯಾಪಾರಿಗೆ ಗುಂಡೇಟು ತಗಲಿರುವ ಘಟನೆ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ. ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್ (20) ಎಂಬಾತ ಶೂಟೌಟ್ ತಗುಲಿ ಗಾಯಗೊಂಡವರು. ನಿನ್ನೆ ಸಂಜೆ ವೇಳೆ ಕಾಡಿನ ನಡುವೆ ದಾರಿಯಲ್ಲಿ ತೆರಳುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಕಾಲಿಗೆ ಗಂಭೀರ ಗಾಯಗೊಂಡ ಸಾವಾದ್ ನನ್ನು ತಕ್ಷಣ ಆಸ್ಪತ್ರೆಗೆ…

Read More

ಕೇಂದ್ರ ಸರಕಾರದ ವಕ್ಸ್ ತಿದ್ದುಪಡಿ ಕಾಯ್ದೆಯ ವಿರುದ್ಧ ಬೃಹತ್‌ ಪ್ರತಿಭಟನಾ ಮೆರವಣಿಗೆ

ಮಂಜೇಶ್ವರ : ಕೇಂದ್ರ ಸರಕಾರದ ವಕ್ಸ್ ತಿದ್ದುಪಡಿಕಾಯ್ದೆಯ ವಿರುದ್ಧ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಎಲ್ಲಾ ಮುಸ್ಲಿಂ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ರಾಷ್ಟ್ರಾದ್ಯಂತ ಭಾರೀ ಆಕ್ರೋಶಕ್ಕೆ ಗುರಿಯಾಗಿರುವ ವಕ್ಫ್ ತಿದ್ದುಪಡಿ ವಿಧೇಯಕ 25ನ್ನು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ವಕ್ಫ್ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕುಂಜತ್ತೂರಿನಿಂದ ಹೊಸಂಗಡಿ ತನಕ ಶುಕ್ರವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾ ಮೆರವಣಿಗೆಗೂ ಮುನ್ನ ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಅಮಾನುಷ ಕೃತ್ಯವನ್ನು ಖಂಡಿಸಿ ಹುತಾತ್ಮರಾದವರ ಆತ್ಮಕ್ಕೆ ಶಾಂತಿಗಾಗಿ ಒಂದು ನಿಮಿಷದ ಮೌನ…

Read More

ಅನಧಿಕೃತವಾಗಿ ಸಾಗಿಸುತಿದ್ದ ಅರ್ಧ ಕಿಲೋ ಚಿನ್ನ ವಶಪಡಿಸಿಕೊಂಡ ಪೊಲೀಸರು

ಮಂಜೇಶ್ವರ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿಅನಧಿಕೃತವಾಗಿ ಸಾಗಾಟ ಮಾಡುತಿದ್ದ ಅರ್ಧ ಕಿಲೋ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಒಬ್ಬನನ್ನು ಸೆರೆ ಹಿಡಿಯಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಪ್ರಯಾಣಿಕನಾದ ರಾಜಸ್ಥಾನ ಮೂಲದ ಚೆಗನ್‌ಲಾಲ್ ಎಂಬಾತನಿಂದಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಜೇಶ್ವರ ವಾಮಂಜೂರು ಅಬಕಾರಿ ಚೆಕ್ ಪೋಸ್ಟ್ ನಲ್ಲಿ ನಡೆಸಿದ ವಾಹನ ತಪಾಸಣೆಯ ಸಂದರ್ಭದಲ್ಲಿ ದಾಖಲೆಗಳಿಲ್ಲದೆ ಕಳ್ಳಸಾಗಣೆ ಮಾಡುತ್ತಿದ್ದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕ ಗಂಗಾಧರನ್, ಪ್ರಿವೆಂಟಿವ್ ಆಫೀಸರ್ ಎಂ.ವಿ. ಜಿಜಿನ್, ಗ್ರೇಸ್ ಪ್ರಿವೆಂಟಿವ್ ಆಫೀಸರ್ಸ್ ವಿಜಯನ್,ಬಾಬುರಾಜ್ ಮತ್ತು ಸಿಇಒ…

Read More

ಪಹಲ್ ಗಾಂವ್ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ, ಅದೃಷ್ಟವಶಾತ್ ಪಾರಾದ ಕಾಸರಗೋಡಿನ ಕುಟುಂಬ

ಪಹಲ್ಲಾಂನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ಕಾಸರಗೋಡಿನ ಪರಪ್ಪದ ಎಂಟು ಜನರ ಕುಟುಂಬವೊಂದು ಅದೃಷ್ಟವಶಾತ್ ಪಾರಾಗಿದೆ. ಪರಪ್ಪದಲ್ಲಿರುವ ಸಪ್ಪಾ ಟೆಸ್ಟೈಲ್ಸ್ ಮಾಲೀಕ ನಿಸಾರ್, ಅವರ ಸಂಬಂಧಿ ಕೆ.ಪಿ. ಸುಹೇಲ್ ಮತ್ತು ಅವರ ಕುಟುಂಬ ಅದೃಷ್ಟವಶಾತ್ ಪಾರಾಯಿತು. ಭಯೋತ್ಪಾದಕ ದಾಳಿ ನಡೆದ ಅದೇ ಸಮಯದಲ್ಲಿ ಅವರು ಪಹಲ್ಲಾಮ್‌ನ ಬೈಸರನ್ ತಲುಪಬೇಕಿತ್ತು. ಹವಾಮಾನದಲ್ಲಿನ ಬದಲಾವಣೆಯಿಂದಾಗಿ ಅವರು ಭಾನುವಾರ ಬೈಸರನ್‌ಗೆ ಭೇಟಿ ನೀಡುತ್ತಿದ್ದರು. ಬೈಸಾರನ್‌ಗೆ ಬರುವ ಎಲ್ಲಾ ಪ್ರವಾಸಿಗರು ವಿಶ್ರಾಂತಿ ಪಡೆದು ಊಟ ಮಾಡುವ ವಿಶಾಲವಾದ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ಪ್ರವಾಸಿಗರ…

Read More

ಪ್ರವಾಸಿಗರಿಂದ ತುಂಬಿತುಳುಕುತ್ತಿದ್ದ ಪಹಲ್ಗಾಮ್ ನಲ್ಲಿ ಈಗ ನೀರವ ಮೌನ; ಹೊಟೇಲ್, ಡಾಬ್ಬಾವಾಲಾಗಳ ಭವಿಷ್ಯ ಕತ್ತಲು…

ಶ್ರೀನಗರ: ಪ್ರವಾಸಿಗರು ಮತ್ತು ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಿಂದ ತುಂಬಿ ತುಳುಕುತ್ತಿದ್ದ ಜಮ್ಮು-ಕಾಶ್ಮೀರದ ನೆಚ್ಚಿನ ಪಹಲ್ಗಾಮ್ ಪ್ರವಾಸಿ ತಾಣ ಕಳೆದ ಮಂಗಳವಾರ ನಡೆದ ಭಯೋತ್ಪಾದಕ ದಾಳಿಗೆ ಅಕ್ಷರಶಃ ನಲುಗಿ ಹೋಗಿದೆ. ಸ್ಥಳೀಯರೊಬ್ಬರು ಸೇರಿದಂತೆ ಕನಿಷ್ಠ 26 ಜನರು ಮೃತಪಟ್ಟು ಭೂಲೋಕದ ಸ್ವರ್ಗದಂತಿದ್ದ ಪ್ರದೇಶ ಈಗ ನೀರವ ಮೌನವಾಗಿದೆ. ಇಲ್ಲಿ ಯಾವಾಗಲೂ ಪ್ರವಾಸಿಗರು ತುಂಬಿತುಳುಕುತ್ತಿದ್ದರಿಂದ ಊಟ ಮತ್ತು ಇತರ ತಿಂಡಿ ತಿನಿಸುಗಳ ಹೊಟೇಲ್ ಮಾಲೀಕರಿಗೆ, ಡಬ್ಬಾವಾಲಾಗಳಿಗೆ ಬಿಡುವಿಲ್ಲದ ಕೆಲಸವಿತ್ತು. ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಆದರೆ ಈಗ ಪ್ರವಾಸಿಗರಿಲ್ಲದೆ ಬಣಗುಡುತ್ತಿದ್ದು, ಹೊಟೇಲ್,…

Read More

‘ನಿಮ್ಮ ರಾಜ್ಯಗಳಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ’: ಮುಖ್ಯಮಂತ್ರಿಗಳಿಗೆ ಗೃಹ ಸಚಿವ ಅಮಿತ್ ಶಾ ಸೂಚನೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಶಿಕ್ಷೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಈ ವಿಷಯದಲ್ಲಿ ರಾಜ್ಯಗಳು ಸಮನ್ವಯ ಸಾಧಿಸಲು ಕೇಳಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತಿದ್ದು, ಆಯಾ ರಾಜ್ಯಗಳಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರು ಪಾಕಿಸ್ತಾನಕ್ಕೆ ಶೀಘ್ರ ಮರಳುವಂತೆ ಸೂಚಿಸಲು ಕೇಳಿಕೊಳ್ಳುತ್ತಿದ್ದಾರೆ. ಬಹುತೇಕ ಪ್ರವಾಸಿಗರು ಸೇರಿದಂತೆ 26 ಮಂದಿಯನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ,…

Read More

ಪಹಲ್ಗಾಮ್ ಉಗ್ರರ ದಾಳಿ: ಗುಪ್ತಚರ ವೈಫಲ್ಯವೇ ಕಾರಣ, ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡಬೇಕು-ಮಾಜಿ ಸೇನಾ ಮುಖ್ಯಸ್ಥ

ಕೋಲ್ಕತ್ತಾ: ಪಹಲ್ಗಾಮ್ ಉಗ್ರರ ದಾಳಿಗೆ ಗುಪ್ತಚರ ವೈಫಲ್ಯಯೇ ಕಾರಣ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಶಂಕರ್ ರಾಯ್ ಚೌಧರಿ ಶುಕ್ರವಾರ ಹೇಳಿದ್ದಾರೆ. ಪಿಟಿಐ ಜೊತೆ ಮಾತನಾಡಿದ ದೇಶದ 18 ನೇ ಸೇನಾ ಮುಖ್ಯಸ್ಥ ರಾಯ್‌ ಚೌಧರಿ, ಉಗ್ರ ದಾಳಿಗೆ ಗುಪ್ತಚರ ವೈಫಲ್ಯವೇ ಪ್ರಮುಖ ಕಾರಣವಾಗಿದೆ. ಲೋಪದೋಷಗಳಿಗೆ ಯಾರಾದರೂ ಉತ್ತರಿಸಬೇಕು. ನಿರ್ಲಕ್ಷ್ಯಕ್ಕೆ ಖಂಡಿತವಾಗಿಯೂ ಯಾರಾದರೂ ಜವಾಬ್ದಾರರಾಗಿರುತ್ತಾರೆ ಮತ್ತು ಪರಿಣಾಮಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದರು. ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ISI…

Read More

ಜಮ್ಮು-ಕಾಶ್ಮೀರದಲ್ಲಿ LET ಟಾಪ್ ಕಮಾಂಡರ್​ ಹತ್ಯೆ: ಬಂಡಿಪೋರಾ ಎನ್ ಕೌಂಟರ್ ನಲ್ಲಿ ಅಲ್ತಾಫ್ ಲಲ್ಲಿ ಫಿನಿಶ್

ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಸಿಕ್ಕ ಮೇರೆಗೆ, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಡಿಪೋರಾದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಸಂಘಟನೆಯ ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ, ಉಗ್ರರನ್ನು ಸೆದೆಬಡಿಯುವ ಕೆಲಸದಲ್ಲಿ ಭಾರತೀಯ ಸೇನೆ…

Read More

RCB vs RR: ಸೋಲುವ ಪಂದ್ಯ ಗೆಲ್ಲಿಸಿದ ಹ್ಯಾಜಲ್​ವುಡ್​! ತವರಿನಲ್ಲಿ ಕೊನೆಗೂ ಸೋಲಿನ ಸರಪಳಿ ಕಳಚಿದ ಆರ್​​ಸಿಬಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಗೂ ಜಯದ ನಗೆ ಬೀರಿದೆ. 2025ರಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡು ತವರಿನ ಅಭಿಮಾನಿಗಳ ಮುಂದೆ ನಿರಾಶೆಯನುಭವಿಸಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್​ಗಳ ರೋಚಕ ಜಯ ಸಾಧಿಸಿದೆ. ಕೊನೆಯ 12 ಎಸೆತಗಳಲ್ಲಿ ರಾಜಸ್ಥಾನ್​ ತಂಡಕ್ಕೆ ಗೆಲ್ಲಲು 18 ರನ್​ಗಳ ಅಗತ್ಯವಿತ್ತು. ಆದರೆ ಜೋಸ್ ಹ್ಯಾಜಲ್​ ವುಡ್​ 19ನೇ ಓವರ್​​ನಲ್ಲಿ ಕೇವಲ 1 ರನ್​ ನೀಡಿ ಪಂದ್ಯದ ಗತಿಯನ್ನೇ ಬದಲಿಸಿದರು. ಕೊನೆಯ ಓವರ್​​ನಲ್ಲಿ ಯಶಸ್​ ದಯಾಳ್​​…

Read More

ಪದ್ಮವಿಭೂಷಣ ಪುರಸ್ಕೃತ, ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನಿಧನ!

ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪುರಸ್ಕೃತ, ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ (Kasturi Rangan) ನಿಧನರಾಗಿದ್ದಾರೆ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. 84 ವರ್ಷದ ಕಸ್ತೂರಿ ರಂಗನ್​ ಅವರು ಬೆಂಗಳೂರಿನಲ್ಲಿ (Bengaluru) ಕೊನೆಯುಸಿರೆಳೆದಿದ್ದಾರೆ. ಕಸ್ತೂರಿ ರಂಗನ್ ಅವರು 9 ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಅಪಾರ ಕೊಡುಗೆ ನೀಡಿದ್ದಾರೆ. 

Read More
error: Content is protected !!