ಕೇವಲ ವಾರದ ಮಳೆಗೆ ಅಡಿಕೆ ತೋಟಗಳಲ್ಲಿ ಕೊಳೆರೋಗ; ರೈತರಲ್ಲಿ ಮತ್ತೆ ಆತಂಕ
ಬಂಟ್ವಾಳ: ಈ ವರ್ಷ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿದ್ದರೂ, ಕೇವಲ ಒಂದು ವಾರ ಸುರಿದ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗಗಳ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಳ್ಳಲು ಆರಂಭಿಸಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.ಕಳೆದ ವರ್ಷ ಅವಧಿಗೂ ಮುನ್ನ ಆರಂಭವಾದ ಭಾರೀ ಮಳೆ ಮತ್ತು ನಿರಂತರ ಮಳೆಯ ಪರಿಣಾಮ ತಾಲೂಕಿನ ಬಹುತೇಕ ಅಡಿಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಕವಾಗಿ ಹರಡಿತ್ತು. ಇದರಿಂದ ರೈತರು ಭಾರೀ ಆರ್ಥಿಕ ನಷ್ಟ ಅನುಭವಿಸಿದ್ದರು. ನಿರಂತರ ಮಳೆಯಿಂದಾಗಿ ತೋಟಗಳಿಗೆ ತೆರಳಿ ಬೋರ್ಡ್ ದ್ರಾವಣ ಸಿಂಪಡಣೆ…
