“ಆದಿದ್ರಾವಿಡವು ಪ್ರತ್ಯೇಕ ಜಾತಿಯಲ್ಲ ಎಂಬ ಹೇಳಿಕೆಯಿಂದ ಅಸಮಾಧಾನ”: ಅನಿಲ್ ಕುಮಾರ್
ಮಂಗಳೂರು: ನ್ಯಾಯಮೂರ್ತಿ ನಾಗ್ ಮೋಹನ್‌ದಾಸ್ ಅವರು “ಆದಿದ್ರಾವಿಡವು ಪ್ರತ್ಯೇಕ ಜಾತಿಯಲ್ಲ, ಜಾತಿಗಳ ಗುಂಪು” ಎಂದು ನೀಡಿರುವ ಹೇಳಿಕೆಯಿಂದ ಸಮುದಾಯದಲ್ಲಿ ಅಸಮಾಧಾನ ಉಂಟಾಗಿದೆ ಎಂದು ಆದಿದ್ರಾವಿಡ ಸಮುದಾಯದ ಮುಖಂಡ ಹಾಗೂ ಸಮಿತಿಯ ಸಲಹೆಗಾರ ಅನಿಲ್ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ಕ್ರಮದಲ್ಲಿ ಹಿಂದಿನ 101 ಜಾತಿಗಳನ್ನು ಪ್ರವರ್ಗ ಎ, ಬಿ, ಸಿ ಎಂದು ಮರುವರ್ಗೀಕರಿಸಿರುವುದರಿಂದ ಹಲವು ಗೊಂದಲಗಳು ಉಂಟಾಗಿವೆ ಎಂದು ಹೇಳಿದರು. ಹಲವು ದಶಕಗಳಿಂದ ಸರ್ಕಾರವೇ…
