ಫೆ. 22 ರಂದು ಜಪ್ಪುಗುಡ್ಡೆಚಾವಡಿ ಗೃಹ ಪ್ರವೇಶ ಮತ್ತು ಪಂಚದಿನಗಳ ಧಾರ್ಮಿಕ ಉತ್ಸವ … !

ಮಂಗಳೂರು ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಜಪ್ಪುಗುಡ್ಡೆಚಾವಡಿಯ ಪುನರ್ನವೀಕರಣಗೊಂಡ ಮನೆಯ ಪ್ರವೇಶೋತ್ಸವ ಮತ್ತು ಧರ್ಮನೇಮವು ಫೆಬ್ರವರಿ 20 ರಿಂದ 25ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ತಿಳಿಸಿದರು. ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಿಯಾಲಗುತ್ತು, ಜಪ್ಪುಗುಡ್ಡೆಗುತ್ತು ಮತ್ತು ಬಡಿಲಗುತ್ತು ಮನೆತನಗಳು ತುಳುನಾಡಿನ ಕಟ್ಟು ಕಟ್ಟಳೆಗಳನ್ನು ಮತ್ತು ದೈವದೇವರ ಆರಾಧನಾ ಕ್ಷೇತ್ರಗಳ ಸೇವೆಗಳನ್ನು ಸತ್ಯ-ಧರ್ಮದ ಹಾದಿಯಲ್ಲಿ ನಡೆಸಿಕೊಂಡು ಬರುತ್ತಿರುವ ಜವಾಬ್ದಾರಿಯುತ ಮನೆತನಗಳಾಗಿವೆ ಎಂದು ಹೇಳಿದರು….

Read More

ಮೀಯಪದವು ವಿದ್ಯಾವರ್ಧಕ ಶಾಲೆಯಲ್ಲಿ ಸಂಭ್ರಮದ ವಾರ್ಷಿಕೋತ್ಸವ

ಮೀಯಪದವು: ಇಲ್ಲಿನ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 13ರ ಶುಕ್ರವಾರದಂದು ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ 9.30ಕ್ಕೆ ಶಾಲಾ ಸಂಚಾಲಕಿ ಶ್ರೀಮತಿ ಎಂ. ರಾಜೇಶ್ವರಿ ಎಸ್. ರಾವ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು.ಮಧ್ಯಾಹ್ನ ಊಟದ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ಜೋರ್ಜ್ ಕ್ರಾಸ್ತಾ ಸಿ. ಎಚ್. ಅವರು…

Read More

ಕಣ್ವತೀರ್ಥದಲ್ಲಿ ಮೀನು ಫ್ಯಾಕ್ಟರಿ ವಿರುದ್ಧ ನಾಗರಿಕರಿಂದ ಪ್ರತಿಭಟನೆ

ಕಳೆದ 8 ವರ್ಷಗಳಿಂದ ನಿರಂತರ ಜಲ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಿ ,ಜನವಾಸಕ್ಕೆ ಅಪಾಯಕಾರಿಯಾಗಿ ಕಾರ್ಯಾಚರಿಸುತ್ತಿರುವ ಯುನೈಟೆಡ್ ಸೀ ಪುಡ್ ಫ್ಯಾಕ್ಟರಿ ವಿರುದ್ಧ ಊರ ಸಾರ್ವಜನಿಕರು ಫಾಕ್ಟರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು .ಫಾಕ್ಟರಿಯ ಮಲೀನ ನೀರಿನ ದುಷ್ಪರಿಣಾಮ ಸ್ಥಳೀಯ ವಸತಿಗಳ ನಾಗರಿಕರ ಮೇಲೆ ಆಗುತ್ತಿದೆ ಸೂಕ್ತ ನಿಯಮಗಳನ್ನು ಪಾಲಿಸುತ್ತಿಲ್ಲ. ಎಡೆಬಿಡದೆ ತಾಜ್ಯ ನೀರಿನ ವಾಸನೆ ಸುತ್ತು ಮುತ್ತಲ ಜನರಿಗೆ ರೋಗ ಭೀತಿ ಉಂಟು ಮಾಡುತ್ತಿದೆ. ಈ ಬಗ್ಗೆ ಹಲವು ಕಾಲದಿಂದ ಪಂಚಾಯತ್‌ಗೆ ದೂರು ಸಲ್ಲಿಸಿದರೂ ಕೂಡ ಯಾವುದೇ…

Read More

ರೋಸಾರಿಯೋ ಶಾಲೆಯಲ್ಲಿ ಸ್ಮಾರ್ಟ್ ಕಿಡ್ ಶೋ

ಫೆಬ್ರವರಿ 14ರಂದು ಶಾಲೆಯಲ್ಲಿ ಆಯೋಜಿಸಲಾಗಿದ್ದ “ಸ್ಮಾರ್ಟ್ ಕಿಡ್ ಶೋ” ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಸಿರಿಲ್ ರೋಸಾರಿಯೋ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆವ್. ಫ್ರಾ. ವ್ಯಾಲೆರಿಯನ್ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೇವಿಸ್ ಸೆರ್ರಾವ್ ಅವರು ಅತಿಥಿಗಳಿಗೆ ಹಾಗೂ ಸಭಿಕರಿಗೆ ಆತ್ಮೀಯ ಸ್ವಾಗತ ಕೋರಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ರಮ್ಯಾ ಅವರು ಸಮರ್ಥವಾಗಿ ನಿರ್ವಹಿಸಿ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಮನಮೋಹಕವಾಗಿ ಪ್ರದರ್ಶಿಸಿ…

Read More

ಶೀಘ್ರ ಗುಣಮುಖರವಾಗುವಂತೆ ಮಾನ್ಯ ಶಾಸಕರಾದ ಶ್ರೀ.ಡಾ. ಮಂಜುನಾಥ ಭಂಡಾರಿಯರಿಗೆ – ಇತಿಹಾಸ ಪ್ರಸಿದ್ದ ಉಳ್ಳಾಲದಲ್ಲಿ ವಿಶೇಷ ಪ್ರಾರ್ಥನೆ

ಉಳ್ಳಾಲ: ಸಾರ್ವಜನಿಕ ಬದುಕಿನಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜನಮನ ಗೆದ್ದಿರುವ ಮಾನ್ಯ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯದ್ಯಕ್ಷರೂ,ಶಾಸಕರಾದ ಶ್ರೀ.ಮಂಜುನಾಥ ಭಂಡಾರಿ ಅವರು ಶೀಘ್ರವೇ ಸಂಪೂರ್ಣ ಚೇತರಿಸಿಕೊಂಡು, ಹಿಂದಿನಂತೆ ಪಕ್ಷ ಸಂಘಟನೆ ರಾಜಕೀಯ,ಸಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಲ್ಲಲಿ. ಭಗವಂತನು ಅವರಿಗೆ ದೃಢ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಮುಸ್ಲಿಂ ಅಲ್ಪಸಂಖ್ಯಾತರ ನೇತೃತ್ವದಲ್ಲಿ ದಕ್ಷಿಣ ಭಾರತದ ಅಜ್ಮೀರ್ ಎಂದೇ ಕರೆಯಲ್ಪಡುವ ಇತಿಹಾಸ ಪ್ರಸಿದ್ದ ಮುಸ್ಲಿಮರ ಪುಣ್ಯಕ್ಷೇತ್ರವಾದ ಸೈಯದ್ ಮದನಿ ದರ್ಗಾ ಉಳ್ಳಾಲ…

Read More

ಕುಂಜತ್ತೂರು ಪೀಸ್ ಶಾಲೆಯಲ್ಲಿ ‘ಪೀಸ್ ಕಾರ್ನಿವಲ್’ ಮೇಳ ಭರ್ಜರಿ ಯಶಸ್ಸು

ಮಂಜೇಶ್ವರ: ವಿದ್ಯಾರ್ಥಿಗಳ ಶಿಕ್ಷಣವನ್ನು ಪಠ್ಯಪುಸ್ತಕಗಳ ಮಿತಿಯಿಂದ ಹೊರತಂದು ನೈಜ ಅನುಭವಗಳ ಮೂಲಕ ಸಮೃದ್ಧಗೊಳಿಸುವ ಉದ್ದೇಶದಿಂದ ಶನಿವಾರದಂದು ಕುಂಜತ್ತೂರು ಪೀಸ್ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ “ಪೀಸ್ ಕಾರ್ನಿವಲ್” ಮೇಳ ಸಹಸ್ರಾರು ಮಂದಿಯ ಪಾಲ್ಗೊಳ್ಳುವಿಕೆಯೊಂದಿಗೆ ಶಿಸ್ತನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಸುಸೂತ್ರವಾಗಿ ಹಾಗೂ ಯಶಸ್ವಿಯಾಗಿ ಸಂಪನ್ನಗೊಂಡಿತು. ವ್ಯಾಪಾರ ವಹಿವಾಟಿನ ನೈಜ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ವ್ಯಾಪಾರಿಗಳು ಹಾಗೂ ಉದ್ಯಮಿಗಳನ್ನು ಈ ಕಾರ್ನಿವಲ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡದ್ದು ಮೇಘಾ ಮೇಳದ ವಿಶೇಷತೆಯಾಗಿತ್ತು. ಆಹಾರ ಪದಾರ್ಥಗಳು, ಆಟಿಕೆಗಳು, ಕೈಗಾರಿಕಾ ಉತ್ಪನ್ನಗಳು, ಹಸ್ತಕಲಾ ವಸ್ತುಗಳು ಸೇರಿದಂತೆ…

Read More

ಮಂಜೇಶ್ವರ ಅಂಡರ್‌ಪಾಸ್ ಬಳಿ ಜಾನುವಾರು ಲಾರಿ ಸಿಬ್ಬಂದಿಗೆ ಹಲ್ಲೆ: ಇಬ್ಬರು ಆಸ್ಪತ್ರೆಗೆ ದಾಖಲು

ಮಂಜೇಶ್ವರ: ಪಾಲಕ್ಕಾಡ್‌ನಿಂದ ಮಂಜೇಶ್ವರ ಉದ್ಯಾವರಕ್ಕೆ ಜಾನುವಾರುಗಳನ್ನು ತಂದ ಲಾರಿಯಲ್ಲಿದ್ದ ಮೂರು ಮಂದಿಗೆ ತಂಡವೊಂದು ಮಂಜೇಶ್ವರ ಅಂಡರ್ ಪಾಸ್ ಬಳಿ ಹಲ್ಲೆಗೈದು ಗಂಭೀರ ಗಾಯಗೊಳಿಸಿದ್ದಾರೆ. ಕಾಸರಗೋಡು ನಿವಾಸಿ ಅಬ್ಬಾಸ್, ಉತ್ತರಪ್ರದೇಶ ನಿವಾಸಿಗಳೂ ಪಾಲಕ್ಕಾಡ್‌ನಲ್ಲಿ ವಾಸಿಸುವ ಫುರ್ಖಾನ್ (47), ದಾವೂದ್ (28) ಎಂಬವರಿಗೆ ಹಲ್ಲೆಗೈದು ಗಾಯಗೊಳಿಸಲಾಗಿದೆ. ಈ ಪೈಕಿ ಫುರ್ಖಾನ್ ಹಾಗೂ ದಾವೂದ್‌ನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಶನಿವಾರ ಮುಂಜಾನೆ 1.30ರ ವೇಳೆ ಘಟನೆ ನಡೆದಿದೆ. ಈ ಮೂರು ಮಂದಿ ಪಾಲಕ್ಕಾಡ್‌ನಿಂದ ಜಾನುವಾರು ಗಳನ್ನು ಉದ್ಯಾವರಕ್ಕೆ ತಲುಪಿಸಿ…

Read More

ಮಂಜೇಶ್ವರದಲ್ಲಿ ಸ್ಫೋಟ ಆತಂಕ: ಉದ್ಯಮಿ ವಿಕ್ರಮ್ ಪೈ ಕಾರಿಗೆ ಬಾಂಬ್ ಶಂಕೆ, ಕೊಲೆ ಯತ್ನ ಆರೋಪ

ಮಂಜೇಶ್ವರ: ಕುಂಬಳೆಯ ಉದ್ಯಮಿ ವಿಕ್ರಮ್ ಪೈ ವಿರುದ್ಧ ಕೊಲೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪೊಸತ್ತಡ್ಕದಲ್ಲಿರುವ ಅವರ ಆಕ್ರೋ ಡೈರಿ ಫಾರ್ಮ್‌ಗೆ ಸಂಪರ್ಕಿಸುವ ಖಾಸಗಿ ಕಾಂಕ್ರೀಟ್ ರಸ್ತೆಯಲ್ಲಿ ಕಾರಿನ ಚಕ್ರ ಹತ್ತಿದ ತಕ್ಷಣ ಸ್ಫೋಟ ಸಂಭವಿಸಿ ವಾಹನಕ್ಕೆ ಹಾನಿಯಾಗಿದೆ. ಟಯರ್ ಸಂಪೂರ್ಣ ನಾಶವಾಗಿ, ಕಾರಿನ ಅಡಿಭಾಗ ಜಜ್ಜುಗುಜ್ಜಾಗಿದೆ. ಭಾರೀ ಶಬ್ದ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿತು. ಅದೃಷ್ಟವಶಾತ್ ವಿಕ್ರಮ್ ಪೈ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು….

Read More

ಕಾಸರಗೋಡಿನಲ್ಲಿ ಆಟೋ ಚಾಲಕರಿಗಾಗಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಯಶಸ್ವಿ

ಕಾಸರಗೋಡು: ದಿನಾಂಕ 14 ಫೆಬ್ರವರಿ 2026 ರಂದು ಕಾಸರಗೋಡಿನ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ, ನಗರದ ವಿವಿಧ ಆಟೋರಿಕ್ಷಾ ಚಾಲಕರ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣಾ ಶಿಬಿರವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಿಬಿರದ ಮುಖ್ಯಾಂಶಗಳು:ಫಲಾನುಭವಿಗಳು: ಸುಮಾರು 200ಕ್ಕೂ ಹೆಚ್ಚು ಆಟೋ ಚಾಲಕರು ಮತ್ತು ಅವರ ಕುಟುಂಬಸ್ಥರು ತಪಾಸಣೆಗೊಳಪಟ್ಟರು. ಸೇವೆಗಳು: 100 ಮಂದಿಗೆ ಉಚಿತ ಕನ್ನಡಕಗಳ ವಿತರಣೆ ಹಾಗೂ 37 ಮಂದಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆಗೆ…

Read More

ಲೇಖಕ, ಕವಿ ಗಿರೀಶ್ ಪಿ. ಎಮ್ ಚಿತ್ತಾರಿ ಕಾಸರಗೋಡು ಜಿಲ್ಲೆ ಇವರೀಗೆ ” ಚುಟುಕು ಸಿರಿ ರತ್ನ “ಪ್ರಶಸ್ತಿ 2026ಕ್ಕೆ ಆಯ್ಕೆ.

ಡಾ. ವಾಮನ್ ರಾವ್ ಬೇಕಲ್ ಸ್ಥಾಪಕರಾಗಿರುವ ಕನ್ನಡ ಭವನ ನುಳ್ಳಿಪ್ಪಾಡಿ ಕಾಸರಗೋಡು ಇದರ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ ಕನ್ನಡ ಭವನದ “ಚುಟುಕು ಯುಗಾಚಾರ್ಯ ಎಂ. ಜಿ. ಆರ್. ಅರಸ್ “ವೇದಿಕೆಯಲ್ಲಿ 22.02.2026.ಭಾನುವಾರ ನಡೆಯಲಿರುವ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ. 2026.ಬ್ರಿಹತ್ ಕಾರ್ಯಕ್ರಮ ದಲ್ಲಿ ಇವರೀಗೆ “ಚುಟುಕು ಸಿರಿ ರತ್ನ “ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್…

Read More
error: Content is protected !!