“ಬಾಂಗ್ಲಾದೇಶಿ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನ ಮೇಲೆ ಹಲ್ಲೆ: ಮಂಗಳೂರಿನ ಕಾವೂರಿನಲ್ಲಿ ನಾಲ್ವರು ವಿರುದ್ಧ ಪ್ರಕರಣ”
ಮಂಗಳೂರು:ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ, ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಗಿರಿಜಾ ಅನ್ಸಾರಿ ಕಳೆದ 10–15 ವರ್ಷಗಳಿಂದ ವಲಸೆ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದು, ಸ್ಥಳೀಯರಾದ ಈ ನಾಲ್ವರು ಆರೋಪಿಗಳು ಸತತವಾಗಿ “ನೀನು ಬಾಂಗ್ಲಾದೇಶದ ಪ್ರಜೆ” ಎಂದು ಆರೋಪಿಸಿ ದಾಖಲೆ ತೋರಿಸು ಎಂದು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ತಾನು ಬಾಂಗ್ಲಾದೇಶಿ ಅಲ್ಲ ಎಂದು ಹೇಳಿದಾಗಲೂ ಅವನ ತಲೆಯ ಮೇಲೆ…