ಜನವರಿ 13 ರಿಂದ 22 ರ ತನಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಉತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವ , 140 ಕ್ಕೂ ಅಧಿಕ ತಂಡಗಳು, 3೦೦೦ ಅಧಿಕ ಕಲಾವಿದರು ಭಾಗಿಯಾಗುವ ನಿರೀಕ್ಷೆ … !

ಮಂಗಳೂರು:ಮಲ್ಲಿಕಾ ಕಲಾ ಕಲಾವೃಂದವು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಉತ್ಸವದ ಅಂಗವಾಗಿ ದೇವಳದ ನೂತನ ವೇದಿಕೆಯಲ್ಲಿ 76ನೇ ವರ್ಷದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವು ಜನವರಿ 13 ರಿಂದ 22 ರ ತನಕ 10 ದಿನಗಳ ಕಾಲ ನಡೆಯಲಿದೆ ಎಂದು ಕಾರ್ಯಧ್ಯಕ್ಷರಾದ ಸುಧಾಕರ್ ರಾವ್ ಪೇಜಾವರ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , 10 ದಿನಗಳ ಕಾರ್ಯಕ್ರಮದಲ್ಲಿ ಸುಮಾರು 140 ಕ್ಕೂ ಅಧಿಕ ತಂಡಗಳು 3೦೦೦ ಅಧಿಕ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ . ಈ ವರ್ಷ ಬಾಲ ಪ್ರತಿಭೋತ್ಸವ, ಯುವ ಪ್ರತಿಭೋತ್ಸವ, ಮಹಿಳಾ ಪ್ರತಿಭೋತ್ಸವ, ಕನ್ನಡ-ತುಳು ನಾಟಕೋತ್ಸವ, ಪೌರಾಣಿಕ ಅಥವಾ ಚಾರಿತ್ರಿಕ ನಾಟಕಗಳು, ತೊಗಲು ಗೊಂಬೆ ಆಟ, ನೆರಳಿನಾಟ, ಯಕ್ಷಗಾನ ಗೊಂಬೆ ಆಟ, ಯಕ್ಷಗಾನ, ಮಹಿಳಾ, ಕಿಶೋರ ಯಕ್ಷಗಾನಗಳು, ನೃತ್ಯೋತ್ಸವ, ಹರಿಕಥೆ, ಪ್ರವಚನ, ಇಂದ್ರಜಾಲ ಪ್ರದರ್ಶನ, ದಾಸರ ಗೀತೆ, ಭಗವದ್ಗೀತೆ, ಕಂಠಪಾಠ ಸ್ಪರ್ಧೆ, ಯೋಗಾಸನ ಪ್ರದರ್ಶನ ಮುಂತಾದ ಕಾಯಕ್ರಮವನ್ನು ಆಯೋಜಸಲಾಗಿದ್ದು ಕಲಾ ಜಗತ್ತಿನ ಸಾಕ್ಷಾತ್ಕಾರವೇ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಉಂಟಾಗಲಿದೆ ಎಂದು ಅವರು ತಿಳಿಸಿದರು .

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ರವೀಂದ್ರ ಶೇಟ್ , ಕೆ ದಾಮೋದರ ರೈ , ವಿ ಕರುಣಾಕರನ್ , ಸನತ್ ಕುಮಾರ್ ಜೈನ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!