ಇನ್ನು ‘ಕೇರಳ’ವಲ್ಲ, ‘ಕೇರಳಂ’ ರಾಜ್ಯದ ಮರುನಾಮಕರಣಕ್ಕೆ ಕೇಂದ್ರ ಸಂಪುಟದ ಗ್ರೀನ್ ಸಿಗ್ನಲ್
ನವದೆಹಲಿ/ಮಂಜೇಶ್ವರ: ದಶಕಗಳ ಬೇಡಿಕೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಮಹತ್ವದ ಅನುಮೋದನೆ ನೀಡಿದೆ.ಪ್ರಧಾನಮಂತ್ರಿಯವರ ನೂತನ ಕಚೇರಿ ‘ಸೇವಾ ತೀರ್ಥ’ದಲ್ಲಿ ನಡೆದ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಈ ಐತಿಹಾಸಿಕ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಮಲಯಾಳಿಗಳ ದೀರ್ಘಕಾಲದ ಕನಸು ನನಸಾಗುವತ್ತ ಹೆಜ್ಜೆ ಇಟ್ಟಿದೆ. ಬದಲಾವಣೆಯ ಹಾದಿ ಹೀಗಿದೆ:ಸಂವಿಧಾನ ತಿದ್ದುಪಡಿ: ಭಾರತೀಯ ಸಂವಿಧಾನದ ಒಂದನೇ ಅನುಸೂಚಿಯಲ್ಲಿ ಪ್ರಸ್ತುತ ‘ಕೇರಳ’ ಎಂದಿರುವ ಹೆಸರನ್ನು ‘ಕೇರಳಂ’…
