ವಿಟ್ಲ : ಆಕಸ್ಮಿಕ ಬೆಂಕಿ – ಕರಚಿದ ಇಲೆಕ್ಟ್ರಾನಿಕ್ಸ್ ಅಂಗಡಿ,ಹೋಟೆಲ್, ಡ್ರೈವಿಂಗ್ ಸ್ಕೂಲ್

ವಿಟ್ಲ: ವಿಟ್ಲ ಕಲ್ಲಡ್ಕ ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಭಸ್ಮಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ. ಶ್ರೀ ಇಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಧಗಧಗನೇ ಸಂಪೂರ್ಣ ಅಂಗಡಿಯನ್ನು ಆಹುತಿ ಪಡೆದುಕೊಂಡಿದ್ದು, ಹತ್ತಿರದ ಅಮಿತ್ ಹೋಟೆಲ್, ಗಣೇಶ್ ಡ್ರೈವಿಂಗ್ ಸ್ಕೂಲ್ ಅಂಗಡಿ ಕಟ್ಟಡಗಳೂ ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಹತ್ತಿಕೊಂಡಿದೆನ್ನಲಾಗಿದೆ. ಅಗ್ನಿಶಾಮಕ ದಳದ ವಾಹನ ಬೆಂಕಿ ಆರಿಸುವ ಕಾರ್ಯಾಚರಣೆ ಮಾಡಿದೆ.

Read More

ಮನೆಯ ಮಹಡಿಯಿಂದ ಬಿದ್ದು ಯುವಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿದ ಘಟನೆ ಅವಿವಾಹಿತ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮೂಡುನಡುಗೋಡು ಗ್ರಾಮದಲ್ಲಿ ನಡೆದಿದೆ. ಮೂಡುನಡುಗೋಡು ಗ್ರಾಮದ ನಡುದಂಡೆ ನಿವಾಸಿ ಪ್ರವೀಣ್ ( 26) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಬಾರ್ ಒಂದರಲ್ಲಿ ಸಪ್ಲೈಯರ್ ಆಗಿದ್ದ ಈತ ಊಟ ಮುಗಿಸಿದ ಬಳಿಕ ಮನೆಯ ಮಹಡಿ ಮೇಲೆ ಹೋಗಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯ ತಪ್ಪಿ ಕೆಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ಈತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ,ಗಂಭೀರವಾಗಿ ಗಾಯಗೊಂಡಿದ್ದ…

Read More

ಪ್ರಖ್ಯಾತ ಸಂಘಟಕ, ಡೊಳ್ಳಿನ ಪದ ಕಲಾ ವಿಧಗ್ದ, ಕನ್ನಡ ಹೋರಾಟಗಾರ ಸಿದ್ರಾಮ ನಿಲಜಗಿ ಬ್ಯಾಕೂಡ ಬೆಳಗಾವಿ “ಕನ್ನಡ ಭವನದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಗೆ ಆಯ್ಕೆ.. !

ಕಾಸರಗೋಡು: ಪ್ರಖ್ಯಾತ ಸಂಘಟಕ, ಡೊಳ್ಳಿನ ಪದ ಕಲಾ ವಿಧಗ್ದ, ಕನ್ನಡ ಹೋರಾಟಗಾರ ಸಿದ್ರಾಮ ನಿಲಜಗಿ ಬ್ಯಾಕೂಡ ಬೆಳಗಾವಿ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ…

Read More

ಸಾಹಿತಿ, ಲೇಖಕಿ ಸತ್ಯವತಿ ಭಟ್ ಕೊಳಚಪ್ಪು ರೀಗೆ “ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026.ಆಯ್ಕೆ

ಕಾಸರಗೋಡು: ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮ, 18.01.2026.ಪ್ರಯುಕ್ತ ಕನ್ನಡ ಭವನ “ಶ್ರೀ ಕೃಷ್ಣ ದೇವರಾಯ “ವೇದಿಕೆಯಲ್ಲಿ ನಡೆಯಲಿರುವ “ನಾಡು -ನುಡಿಹಬ್ಬ “ಕಾರ್ಯಕ್ರಮದಲ್ಲಿ ಪ್ರಕಾಂಡ ಪಂಡಿತೆ, ಶ್ರೇಷ್ಠ ಕವಯತ್ರಿ, ಸಾಹಿತಿ ಸತ್ಯವತಿ ಭಟ್ ಕೊಳಚಪ್ಪು ಇವರಿಗೆ ಕನ್ನಡ ಭವನದ ಪ್ರತಿಷ್ಠಿತ “ರಾಷ್ಟ್ರ ಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಡಾ. ಆರ್. ಎ. ದಯಾನಂದಮೂರ್ತಿಗೆ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.ಆಯ್ಕೆ

ಕಾಸರಗೋಡು: ಡಾ. ಆರ್. ಎ. ದಯಾನಂದಮೂರ್ತಿ ಇವರಿಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ನ್ನು ಇದೇ ಬರುವ ಜನವರಿ 18ಕ್ಕೆ ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನಡೆಯುವ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

Read More

ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ,ಕರಾವಳಿಯ ಶಿಕ್ಷಣ ಹಾಗೂ ಕೈಗಾರಿಕಾ ಕ್ರಾಂತಿಯ ರೂವಾರಿ ಎನ್‌. ವಿನಯ್ ಹೆಗ್ಡೆ ಅಸ್ತಂಗತ . ಹೊಸ ವರ್ಷದಂದೇ ಕನ್ನಡಿಗರಿಗೆ ಬರ ಸಿಡಿಲು .. !

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಕೈಗಾರಿಕಾ ಕ್ರಾಂತಿಯ ಮೂಲಕ ಹೆಸರು ಗಳಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್ ವಿನಯ್ ಹೆಗ್ಡೆ ಅವರು ಜನವರಿ 1ರಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಜನವರಿ 1ರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 3.00 ರವರೆಗೆ ಮಂಗಳೂರಿನ ಶಿವಭಾಗ್‌ನಲ್ಲಿರುವ ಸದಾನಂದ ನಿವಾಸದಲ್ಲಿ ಮತ್ತು ಸಂಜೆ 4.30 ರಿಂದ ಸಂಜೆ 6.00…

Read More

ಜನವರಿ 2 ರಂದು : ಯುನಿವೆಫ್ ಕರ್ನಾಟಕ ವತಿಯಿಂದ “ಅರಿಯಿರಿ ಮನುಕುಲದ ಪ್ರವಾದಿಯನ್ನು “ಅಭಿಯಾನದ ಸಮಾರೋಪ ಸಮಾರಂಭ

ಮಂಗಳೂರು : ಯುನಿವೆಫ್ ಕರ್ನಾಟಕ ವತಿಯಿಂದ ಸೆಪ್ಟೆಂಬರ್ 19 ರಿಂದ ಜನವರಿ 2ರ ತನಕ ನಡೆಯಲಿರುವ  “ಅರಿಯಿರಿ ಮನುಕುಲದ ಪ್ರವಾದಿಯನ್ನು”ಎಂಬ ಪ್ರವಾದಿ ಸಂದೇಶ ಪ್ರಚಾರ ಅಭಿಯಾನದ ಸಮಾರೋಪ ಸಮಾರಂಭವು ಜನವರಿ 2ರ ಶುಕ್ರವಾರ ಸಂಜೆ 6.45 ಕ್ಕೆ ನಗರದ ಪುರಭವನದಲ್ಲಿ ಜರಗಲಿದೆ‌ ಎಂದು ಪ್ರವಾದಿ ಅಭಿಯಾನ ಕಾರ್ಯಕ್ರಮದ ಸಂಚಾಲಕರಾದ ಯು. ಕೆ. ಖಾಲಿದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.“ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಚಿಕ್ಕಮಗಳೂರಿನ ವಿಶ್ವಧರ್ಮಪೀಠ,…

Read More

ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯ ಜಿಲ್ಲಾ ಸಮಿತಿಯ ವಾರ್ಷಿಕೋತ್ಸವ

ಮಂಗಳೂರು: ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮವು ನಗರದ ಅತ್ತಾವರ ವೈದ್ಯನಾಥ ನಗರ ಮೇನಕುಲಂಜಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸಿಇಒ ಶಿವರಾಜ್ ವಹಿಸಿಕೊಂಡರು. ಸೇರಿದ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು ಮತ್ತು ನಿರ್ದೇಶಕರಾದ ಸದಾಶಿವ ಇವರು ಅತಿಥಿಗಳನ್ನು ಸ್ವಾಗತಿಸಿದರು ಕಾರ್ಯಕ್ರಮಗಳನ್ನು ಡಾ. ಶಿವಪ್ರಕಾಶ್ ಜಿಲ್ಲಾ ಶಾಸ್ತ್ರಕರು ಮತ್ತು ಅಧೀಕ್ಷಕರು ಬೆಲ್ಲ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರು ದೀಪ ಪ್ರಜ್ವಲಿಸುವ…

Read More

ಕೋಟ್ಯಾಂತರ ಖರ್ಚಿನ ಕಾಮಗಾರಿಯಲ್ಲಿ ವನಿತಾ ಹಾಸ್ಟೆಲ್ ಕಟ್ಟಡ ಉದ್ಘಾಟನೆಗೊಂಡರೂ ಕಾರ್ಯಾಚರಣೆಗೆ ಮೀನ ಮೇಷ ಎಣಿಸುತ್ತಿರುವ ಅಧಿಕಾರಿಗಳು

ಮಂಜೇಶ್ವರ: ಸೀಮಾವರ್ತಿ ಪ್ರದೇಶವಾದ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ವಿವಿಧ ಸರ್ಕಾರಿ, ಅರ್ಧಸರ್ಕಾರಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳ ವಸತಿಗಾಗಿ ನಿರ್ಮಿಸಲಾದ ಹಾಸ್ಟೆಲ್ ಕಟ್ಟಡವು ಉದ್ಘಾಟನೆಯಾದರೂ ಇನ್ನೂ ಬಳಕೆಗೆ ತೆರೆಯಲಾಗಿಲ್ಲ. ಇದರಿಂದಾಗಿ ದೂರದ ಪ್ರದೇಶಗಳಿಂದ ಆಗಮಿಸುವ ಮಹಿಳಾ ನೌಕರರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ನೇತೃತ್ವದಲ್ಲಿ ಈ ಹಾಸ್ಟೆಲ್ ಅನ್ನು ನಿರ್ಮಿಸಲಾಗಿದ್ದು, ವೊರ್ಕಾಡಿ ಗ್ರಾಮದ ಮಜೀರ್ಪಳ್ಳ ಧರ್ಮನಗರದಲ್ಲಿ, ಮಲಯೋರ ಹೆದ್ದಾರಿಗೆ ಸಮೀಪ ಬ್ಲಾಕ್ ಪಂಚಾಯತ್‌ಗೆ ಸೇರಿದ ಒಂದು ಏಕರೆ ಭೂಮಿಯಲ್ಲಿ…

Read More

ದ್ವಿಚಕ್ರ ವಾಹನ ಕಳವು ಪ್ರಕರಣ: ಮಾಸ್ಟರ್ ಮೈಂಡ್ ಕಳ್ಳನ ಬಂಧನ

ಉಡುಪಿ: ಶಿರ್ವ ಸಹಿತ ಕಾಪು, ಬೆಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕದ್ದ ಆರೋಪಿಯನ್ನು ಶಿರ್ವ ಪೋಲಿಸರು ಬಂಧಿಸಿದ್ದಾರೆ. ಡಿ.5ರಂದು ಬಂಟಕಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿದ್ದ ವಾಹನ ಕಳವಾದ ಬಗ್ಗೆ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೋಲಿಸರು ತನಿಖೆ ಆರಂಭಿಸಿದ್ದರು.ಶಿರ್ವ ಪೊಲೀಸರಿಂದ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಉಡುಪಿ, ಮಲ್ಪೆ ಕಾರ್ಕಳ, ಧರ್ಮಸ್ಥಳ ಕಡೆಗಳಲ್ಲಿ ಸಂಚರಿಸಿ ಆರೋಪಿ ಓಂ ಕೋಲಾರ ಎಂಬಾತನನ್ನು ಬಂಧಿಸಿದೆ. ಬಂಧಿತ ಆರೋಪಿಯಿಂದ ಶಿರ್ವ…

Read More
error: Content is protected !!