Headlines

ರಾಯಗಡದಲ್ಲಿ ಪ್ರವಾಹದ ಆರ್ಭಟ: ಸಾವಿರಾರು ಗ್ಯಾಸ್ ಸಿಲಿಂಡರ್‌ಗಳು ನದಿಯಲ್ಲಿ

ಮುಂಬಯಿ: ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳು ಪ್ರವಾಹದ ನೀರಿಗೆ ಕೊಚ್ಚಿಹೋಗಿ ಪಾತಳಗಂಗಾ ನದಿಯಲ್ಲಿ ತೇಲುತ್ತಿರುವ ಘಟನೆ ನಡೆದಿದೆ. ನಿರಂತರ ಮಳೆಯಿಂದ ಗ್ಯಾಸ್ ಸಿಲಿಂಡರ್‌ಗಳನ್ನು ಸಂಗ್ರಹಿಸಿದ್ದ ಘಟಕದ ತಡೆಗೋಡೆ ಕುಸಿದ ಪರಿಣಾಮ, ಪ್ರವಾಹದ ನೀರು ಒಳನುಗ್ಗಿ ಸಾವಿರಾರು ಸಿಲಿಂಡರ್‌ಗಳು ನದಿಗೆ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಸಿಲಿಂಡರ್‌ಗಳಲ್ಲಿ ಗ್ಯಾಸ್ ತುಂಬಿರುವ ಸಾಧ್ಯತೆ ಇರುವುದರಿಂದ, ಅವುಗಳನ್ನು ಯಾರೂ ಮನೆಗೆ ತೆಗೆದುಕೊಂಡು ಹೋಗಬಾರದು ಹಾಗೂ ಕಂಡುಬಂದರೆ ತಕ್ಷಣವೇ ಅಧಿಕಾರಿಗಳಿಗೆ ಅಥವಾ ಸಂಬಂಧಿತ…

Read More

ಉಡುಪಿ ವಿಷನ್-2035’ಗೆ ಚಾಲನೆ: ಜು.12ರಂದು ಸಮಾಲೋಚನಾ ಸಭೆ

ಉಡುಪಿ | ಜು. 9: ಮುಂದಿನ ಹತ್ತು ವರ್ಷಗಳ ಅವಧಿಗೆ ಉಡುಪಿಯ ಸಮಗ್ರ ಅಭಿವೃದ್ಧಿಯ ನೀಲನಕ್ಷೆ ರೂಪಿಸುವ ಉದ್ದೇಶದಿಂದ ‘ಉಡುಪಿ ವಿಷನ್-2035’ ಸಮಾಲೋಚನಾ ಸಭೆಯನ್ನು ಜುಲೈ 12ರಂದು ಸಂಜೆ 5.30ಕ್ಕೆ ಉಡುಪಿಯ ಹೊಟೇಲ್ ಕಿದಿಯೂರಿನ ಶೇಷಶಯನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರು ಸಭೆಯಲ್ಲಿ ಭಾಗವಹಿಸಿ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ…

Read More

​ಕುಂಜತ್ತೂರು ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ‘ಕಮ್ಯುನಿಟಿ ಹೆಲ್ಪರ್ಸ್ ಡೇ’: ಸಮುದಾಯ ಸೇವಕರಿಗೆ ಪುಟ್ಟ ಮಕ್ಕಳಿಂದ ಗೌರವ ನಮನ

​ಮಂಜೇಶ್ವರ: ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಮತ್ತು ಅವರ ಸೇವೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ, ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲೆಯ ಕೆ.ಜಿ. ವಿಭಾಗದ ವತಿಯಿಂದ ವಿನೂತನ ‘ಕಮ್ಯುನಿಟಿ ಹೆಲ್ಪರ್ಸ್ ಡೇ’ ಸಮುದಾಯ ಸೇವಕರ ದಿನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ​ ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ವೈದ್ಯರು, ಪೊಲೀಸರು, ರೈತರು, ಅಗ್ನಿಶಾಮಕ ದಳದ ಸಿಬ್ಬಂದಿ, ಶಿಕ್ಷಕರು ಮತ್ತು ಸಮಾಜದ ಇತರ ವಿವಿಧ ವಲಯಗಳ ಸೇವಕರ ವೇಷಭೂಷಣಗಳನ್ನು ಧರಿಸಿ ಪಾತ್ರಗಳನ್ನು…

Read More

ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಕಟ್ಟಡ ಕುಸಿತ; ಎರಡನೇ ಪ್ಲಾಟ್‌ಫಾರ್ಮ್‌ನಲ್ಲಿ ಅವಘಡ, ತಪ್ಪಿದ ಭಾರೀ ದುರಂತ

ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಹಳೆಯ ಕಟ್ಟಡ ಕುಸಿದು ಬಿದ್ದ ಪರಿಣಾಮ ಅವಘಡ ಸಂಭವಿಸಿದೆ. ಘಟನೆ ಎರಡನೇ ಪ್ಲಾಟ್‌ಫಾರ್ಮ್ ಬಳಿ ನಡೆದಿದ್ದು, ಕಟ್ಟಡದ ಅವಶೇಷಗಳು ಮೂರನೇ ರೈಲು ಹಳಿಯ ಮೇಲೆ ಬಿದ್ದಿವೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೊಡ್ಡ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಸಿದು ಬಿದ್ದಿದ್ದು ಸುಮಾರು 100 ವರ್ಷಗಳಷ್ಟು ಹಳೆಯ ಕ್ಲಾಕ್ ಟವರ್ ಆಗಿದೆ. ಈ ಕಟ್ಟಡ ದುರ್ಬಲಗೊಂಡಿರುವುದು ಈ ಹಿಂದಿನ ಪರಿಶೀಲನೆಯಲ್ಲಿ…

Read More

ಶಾರದಾ ಆರ್ಟ್ಸ್ ಕಲಾವಿದರು ಮತ್ತು ಐಸಿರಿ ಕಲಾವಿದರ ನೂತನ ತುಳು ನಾಟಕಗಳಿಗೆ ಶುಭ ಮುಹೂರ್ತ

ಮಂಜೇಶ್ವರ | ಜು. 9: ಶಾರದಾ ಆರ್ಟ್ಸ್ ಮಂಜೇಶ್ವರ ಹಾಗೂ ಐಸಿರಿ ಕಲಾವಿದರು ಮಂಜೇಶ್ವರ ತಂಡಗಳ 2026ನೇ ಸಾಲಿನ ನೂತನ ತುಳು ನಾಟಕಗಳಿಗೆ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶುಭ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ನಾಯಕ ನಟ ಶನಿಲ್ ಗೌತಮ್ , ಹರಿನಾಥ ಬಂಡಾರಿ ಮುಳಿಂಜ , ದಿನಕರ್ ಹೊಸಂಗಡಿ , ಚಂದ್ರಹಾಸ್ ಮುಂದಂಗಾರು ಕಟ್ಟೆ , ಸಾತ್ವಿಕ್ ರೈ, ಸಾಮಿಲ್ ಬಂಗೇರ, ಪ್ರಜ್ಞೆಶ್ ಶೆಟ್ಟಿ, ಲಕ್ಷ್ಮಣ್ ಕುಂದರ್, ರವಿ ಕುಮಾರ್…

Read More

ಅಪಾಯದ ಮುನ್ನೆಚ್ಚರಿಕೆ ನೀಡದಿರುವುದು ಗಂಭೀರ ವೈಫಲ್ಯ; ಜನರನ್ನು ದಾರಿ ತಪ್ಪಿಸಲು ಸರ್ಕಾರ ಮಟ್ಟದಲ್ಲೇ ಪ್ರಯತ್ನ ನಡೆಯುತ್ತಿದೆ’ – ಪಿಣರಾಯಿ ವಿಜಯನ್

ವಯನಾಡಿನ ಕಳ್ಳಾಡಿ ಭೂಕುಸಿತ ದುರಂತ ಕುರಿತು ವಿರೋಧಪಕ್ಷ ನಾಯಕ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ವಯನಾಡಿನಲ್ಲಿ ಅತೀ ಭಾರೀ ಮಳೆಯಾಗಿದ್ದರೂ ಅಪಾಯದ ಮುನ್ನೆಚ್ಚರಿಕೆ ನೀಡದಿರುವುದು ದೊಡ್ಡ ವೈಫಲ್ಯ. ದುರಂತ ಸಂಭವಿಸಿದ ನಂತರವೇ ರೆಡ್ ಅಲರ್ಟ್ ಘೋಷಿಸಲಾಗಿದೆ. ನಿರ್ಮಾಣ ಕಾಮಗಾರಿಗಾಗಿ ರಾಶಿಯಾಗಿ ಹಾಕಿದ್ದ ಮಣ್ಣನ್ನು ತೆರವುಗೊಳಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅವರು ಆರೋಪಿಸಿದರು. “ನಿರ್ಮಾಣಕ್ಕಾಗಿ ಸಂಗ್ರಹಿಸಿದ್ದ ಮಣ್ಣು ಸಂಪೂರ್ಣವಾಗಿ ಕೊಚ್ಚಿಹೋಗಿಲ್ಲ. ಆದರೂ ಅದನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ” ಎಂದು ಅವರು ಹೇಳಿದರು….

Read More

ಕಳ್ಳಾಡಿ ಭೂಕುಸಿತ: ಮತ್ತಷ್ಟು ಮೃತದೇಹಗಳು ಪತ್ತೆ; ಸಾವಿನ ಸಂಖ್ಯೆ 7ಕ್ಕೆ ಏರಿಕೆ

ವಯನಾಡಿನ ಕಳ್ಳಾಡಿ ಭೂಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ *7ಕ್ಕೆ ಏರಿಕೆಯಾಗಿದೆ. ಇಂದು ಬೆಳಿಗ್ಗೆ ನಡೆದ ಶೋಧ ಕಾರ್ಯಾಚರಣೆಯಲ್ಲಿ *ಮೂರು ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು *ಬಿಹಾರ ಮೂಲದ ಮೊಹಮ್ಮದ್ ಇಮ್ರಾನ್, *ಹಿಮಾಚಲ ಪ್ರದೇಶದ ರಾಹುಲ್ ಶರ್ಮಾ ಹಾಗೂ ಉತ್ತರ ಪ್ರದೇಶದ ಅಸರುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದೆ. ದುರಂತದ ಮೂರನೇ ದಿನ ನಡೆದ ಶೋಧ ಕಾರ್ಯಾಚರಣೆಯಲ್ಲಿ ಮೊದಲ ವಲಯದಲ್ಲಿ (Zone-1) ಬಿಹಾರ ಮೂಲದ ಮೊಹಮ್ಮದ್ ಇಮ್ರಾನ್ ಅವರ ಮೃತದೇಹ ಪತ್ತೆಯಾಗಿದೆ. ಅವರು ಯೋಜನೆಯಲ್ಲಿ ಎಕ್ಸ್ಕವೇಟರ್ ಆಪರೇಟರ್ ಆಗಿ ಕೆಲಸ…

Read More

ಬಿಜೆಪಿಗೆ ನೆಮ್ಮದಿ; ವಾಜೊಟ್ಟುಕೋಣಂ ಕಾರ್ಪೊರೇಟರ್ ಆರ್. ಸುಗತನ್‌ಗೆ ಮಧ್ಯಂತರ ಜಾಮೀನು, ಪ್ರಮಾಣವಚನಕ್ಕೆ ಅವಕಾಶ

ವಾಜೊಟ್ಟುಕೋಣಂ ವಾರ್ಡ್‌ನ ಕಾರ್ಪೊರೇಟರ್ ಆರ್. ಸುಗತನ್ ಅವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನಗರಸಭೆಯಲ್ಲಿ ಕಾರ್ಪೊರೇಟರ್ ಆಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಜಾಮೀನು ನೀಡಲಾಗಿದೆ. ನೆಡುಮಂಗಾಡು ದ್ವಿತೀಯ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜುಲೈ 13ರ ಸಂಜೆ 5 ಗಂಟೆಯಿಂದ ಜುಲೈ 14ರ ರಾತ್ರಿ 9 ಗಂಟೆಯವರೆಗೆ ಮಧ್ಯಂತರ ಜಾಮೀನು ನೀಡಿದೆ. ನೆಡುಮಂಗಾಡು ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಎರಡು ಪ್ರಕರಣಗಳಲ್ಲಿ ಈ ಜಾಮೀನು ಅನ್ವಯವಾಗಲಿದೆ. ಸುಗತನ್ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಒಂದು ದಿನದ ವಿನಾಯಿತಿ…

Read More

ಅರುಣಾಚಲ ಪ್ರದೇಶದಲ್ಲಿ ಭೂಕುಸಿತ ದುರಂತ: ಇಬ್ಬರು ಸಾವು, ನಾಲ್ವರು ನಾಪತ್ತೆ

ಇಟಾನಗರ್ | ಜು. 9: ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇನ್ನೂ ನಾಲ್ವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಲೋಹಿತ್ ಜಿಲ್ಲೆಯ ಶಿವಾಜಿ ನಗರದಲ್ಲಿ ಬೆಟ್ಟದ ಇಳಿಜಾರಿನಲ್ಲಿ ಭೂಕುಸಿತ ಸಂಭವಿಸಿದ್ದು, ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ವಲಸೆ ಕಾರ್ಮಿಕರು ಮಣ್ಣಿನಡಿ ಸಿಲುಕಿದರು. ಇದುವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಹಾಗೂ ಅರುಣಾಚಲ…

Read More

ಕೆಪಿಟಿ ಬಳಿ ಭೀಕರ ಅಪಘಾತ: ಜಮ್ಮುವಿನಲ್ಲಿ ಸೇವೆಯಲ್ಲಿದ್ದ ಸಿಐಎಸ್‌ಎಫ್ ಹೆಡ್ ಕಾನ್‌ಸ್ಟೆಬಲ್ ಸ್ಥಳದಲ್ಲೇ ಸಾವು

ಮಂಗಳೂರು | ಜು. 9: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಮ್ಮುವಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಐಎಸ್‌ಎಫ್ ಹೆಡ್ ಕಾನ್‌ಸ್ಟೆಬಲ್ ಸೀತಾರಾಮ ಗೌಡ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿರುವ ಸೀತಾರಾಮ ಗೌಡ ಅವರು ಸ್ಕೂಟರ್‌ನಲ್ಲಿ ಕೆಪಿಟಿಯಿಂದ ಕೊಟ್ಟಾರಚೌಕಿ ಕಡೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಕೂಟರ್ ಮೊದಲು ಡಿವೈಡರ್‌ಗೆ ಢಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ…

Read More
error: Content is protected !!