ಮಧುರೈಯ ‘5 ರೂ ಪರೋಟ’ ಅಭಿಮಾನಿಗೆ ರಜನಿಕಾಂತ್ ಗೌರವ: ಮನೆಗೆ ಆಹ್ವಾನಿಸಿ ಚಿನ್ನದ ಸರ ಉಡುಗೊರೆ
ಚೆನ್ನೈ: ಇತ್ತೀಚೆಗೆ ಮಧುರೈನ ಬೀದಿ ಬದಿಯಲ್ಲಿ ಸಣ್ಣ ಹೊಟೇಲ್ ನಡೆಸುತ್ತಿರುವ ತಮ್ಮ ಕಟ್ಟಾ ಅಭಿಮಾನಿಯೊಬ್ಬರನ್ನು ಭೇಟಿಯಾದ ಸೂಪರ್ಸ್ಟಾರ್ ರಜನಿಕಾಂತ್ ಆತನ ಗೌರವಾನ್ವಿತ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿಮಾನಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.ಕಳೆದ 15 ವರ್ಷಗಳಿಂದ ಮಧುರೈನ ರಸ್ತೆ ಬದಿಯಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿರುವ ನಟ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ ಶೇಖರ್, 15 ವರ್ಷಗಳ ಹಿಂದೆ ರಜನೀಕಾಂತ್ ಅವರ ಹುಟ್ಟುಹಬ್ಬದ ಪ್ರಯುಕ್ತ ಐದು ರೂಪಾಯಿಗೆ ಪರೋಟ ಮಾರಾಟ ಮಾರಲು ಪ್ರಾರಂಭಿಸಿದರು ಅಂದಿನಿಂದ ಇಂದಿನವರೆಗೂ ಅದೇ 5 ರೂಪಾಯಿ ಬೆಲೆಯಲ್ಲಿ…
