ಮೂಡಬಿದ್ರೆಯಲ್ಲಿ ದಿಶಾ ಟ್ರಸ್ಟ್–ತೋಟಗಾರಿಕಾ ಇಲಾಖೆ ಜಂಟಿ ಬೆಳೆ ಸಂರಕ್ಷಣೆ ಮಾಹಿತಿ ಕಾರ್ಯಾಗಾರ
ಮಂಗಳೂರು:ದಿಶಾ ಟ್ರಸ್ಟ್ ರಿ. ಕೈಕಂಬ ಮಂಗಳೂರು ಮತ್ತು ಮಂಗಳೂರು ತಾಲೂಕು ತೋಟಗಾರಿಕಾ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಬೆಳೆ ಸಂರಕ್ಷಣೆ ಕುರಿತ ಮಾಹಿತಿ ಕಾರ್ಯಾಗಾರ ಮೂಡಬಿದ್ರೆಯಲ್ಲಿ ನಡೆಯಿತು.ಕೃಷಿಕರ ನೆಲ ಜಲ ಅಭಿವೃದ್ಧಿ ಸಂಘ ಶಿರ್ತಾಡಿ , ಮಕ್ಕಿ ಕಜೆ ಇವರ ಸಹಕಾರದೊಂದಿಗೆ ಮೂಡಬಿದ್ರೆ ತಾಲೂಕಿನ ಶಿರ್ತಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ದಿಶಾ ಟ್ರಸ್ಟ್ ನ ಯೋಜನಾ ನಿರ್ದೇಶಕರಾದ ಡಾ. ಐರಿನ್ ವೇಗಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮುಂದಿನ ಮೂರು ವರ್ಷಗಳಲ್ಲಿ ನೈಸರ್ಗಿಕ ಸಂಪನ್ಯೂಲ ಯೋಜನೆಯನ್ನು…
