ಎಕೆಪಿಎ ಕಾಸರಗೋಡು ವೆಸ್ಟ್ ಘಟಕದಿಂದ ಹೊಸ ವರ್ಷಾಚರಣೆ
ಕಾಸರಗೋಡು : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ಎಕೆಪಿಎ) ಕಾಸರಗೋಡು ವೆಸ್ಟ್ ಘಟಕದ ವತಿಯಿಂದ ಹೊಸ ವರ್ಷಾಚರಣೆ ಆಚರಿಸಲಾಯಿತು. ಆಶ್ರಿತ್ ರೈಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವೆಸ್ಟ್ ಘಟಕದ ಅಧ್ಯಕ್ಷರಾದ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿದರು. ದೀಪಾವಳಿ ಹಾಗೂ ಕೇರಳ ಪಿರವಿ ಅಂಗವಾಗಿ ಎಕೆಪಿಎ ಸದಸ್ಯರಿಗೆ ಕಾಸರಗೋಡು ವಲಯ ಮಟ್ಟದಲ್ಲಿ ನಡೆಸಿದ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ನೀಡಲಾಯಿತು. ಕಾಸರಗೋಡಿನ ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಶ್ರೀ ಪ್ರದೀಪ್ ಬೇಕಲ್ ಅವರು…
