ಉಪ್ಪಳ ನಿವಾಸಿ ಯುವಕನೊಬ್ಬ ದುಬೈಯಲ್ಲಿ ಸಾವು

ಮಂಜೇಶ್ವರ: ಉಪ್ಪಳ ನಿವಾಸಿಯಾದ ಯುವಕನೊಬ್ಬ ದುಬೈಯಲ್ಲಿ ಸಾವನ್ನಪ್ಪಿದ್ದಾನೆ. ಉಪ್ಪಳ ಹಿದಾಯತ್ ಬಜಾರ್ ನಿವಾಸಿ ಅಬ್ದುಲ್ ರಹ್ಮಾನ್ ಎಂಬವರ ಪುತ್ರ ಮುಹಮ್ಮದ್ ರಫೀಕ್ (27) ಸಾವನ್ನಪ್ಪಿದ ದುರ್ದೈವಿ.

ಇವರು ದುಬೈಯ ಸೂಪರ್ ಮಾರ್ಕೆಟ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ದಿವಸ ವಾಸಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಇವರನ್ನು ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ಸಾವು ಸಂಭವಿಸಿರುವ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ.ಕೆಎಂಸಿಸಿ ಸಂಘಟನೆಯ ನೇತೃತ್ವದಲ್ಲಿ ಶವ ಶರೀರ ಊರಿಗೆ ತರಲಿರುವ ಕ್ರಮ ಆರಂಭಿಸಲಾಗಿದೆಯೆಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!