ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ

ಮಂಜೇಶ್ವರ :–ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಸಮ್ಮೇಳನ ಹೊಸಂಗಡಿ ವ್ಯಪಾರಿ ಭವನದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳ ಸ್ಟೇಟ್ ಟೈಲೊರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ವಹಿಸಿದ್ದರು. ಕಾರ್ಯಕ್ರಮ ಉದ್ಘಾಟನೆಯನ್ನು K. S. T. A. ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ. S. ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಮಂಜೇಶ್ವರ ವ್ಯಾಪಾರಿ ಯಾಕೋಪನ ಸಮಿತಿ ಅಧ್ಯಕ್ಷ ಬಶೀರ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯದರ್ಶಿ ಸತೀಶ್ ಆಚಾರ್ಯ ವಿಶ್ವನಾಥ್ ಶೆಟ್ಟಿ ಕುತ್ತಾನಾಡಿ ಮಾತಾಡಿದರು. ಜೊತೆ…

Read More

ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಉಚಿತ ಆಯುರ್ವೇದ ಶಿಬಿರ

ಮಂಜೇಶ್ವರ: ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ, ಆದಿಕ್ಷೇತ್ರ ಶ್ರೀ ರಕೇಶ್ವರೀ ದೇವಸ್ಥಾನ ಹೊಸಂಗಡಿ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ) ಕೊಂಡೆವೂರು ಮತ್ತು ಒನ್‌ಸೈಟ್ ಎಸ್ಪಿಲೋರ್ ಲಕೋಟಿಕಾ ಫೌಂಡೇಶನ್ ಬೆಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಂಗಳೂರು ಡಾ. ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ (ರಿ)ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶ್ರೀ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ, ಮಂಗಳೂರು ಇದರ ಸಹಯೋಗದಲ್ಲಿ…

Read More

ಮಂಜೇಶ್ವರ ಗ್ರಾಮ ಪಂಚಾಯತಿನ ನೂತನ ಆಡಳಿತ ಸಮಿತಿ ಸದಸ್ಯರ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

ಮಂಜೇಶ್ವರ ಗ್ರಾಮ ಪಂಚಾಯತಿನ ನೂತನ ಆಡಳಿತ ಸಮಿತಿ ಸದಸ್ಯರ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಭಾನುವಾರದಂದು ಮಂಜೇಶ್ವರದ ಗೋವಿಂದ ಪೈ ಗಿಳಿವಿಂಡುವಿನಲ್ಲಿ ಜರುಗಿತು. ನೂತನವಾಗಿ ಆಯ್ಕೆಯಾದ ಎಲ್ಲಾ ಸದಸ್ಯರು ಪದವಿ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಆಡಳಿತದ ಜವಾಬ್ದಾರಿ ವಹಿಸಿಕೊಂಡರು. ಅದೇ ರೀತಿ ಮಂಗಲ್ಪಾಡಿ ಪಂಚಾಯತಿನಲ್ಲಿ ಅವಿರೋಧವಾಗಿ ಗೆದ್ದು ಬಂದ  ಯು ಡಿ  ಎಫ್ ಅಭ್ಯರ್ಥಿ ಶಮೀನಾ ಟೀಚರ್ ಉರ್ದು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷತೆಯಾಗಿತ್ತು. ಅದೇ ರೀತಿ ಮಂಜೇಶ್ವರ ಗ್ರಾಮ ಪಂಚಾಯತಿನಲ್ಲಿ ಮೂವರು ಮಹಿಳಾ ಸದಸ್ಯರುಗಳು ಆಂಗ್ಲ…

Read More

ನಾಯಕತ್ವ ವಿಚಾರ ಸ್ಥಳೀಯ ನಾಯಕರೇ ಬಗೆಹರಿಸಿಕೊಳ್ಳಬೇಕು : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ:ರಾಜ್ಯದಲ್ಲಿ ಸಿಎಂ ಕುರ್ಚಿ ಕದನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ಗೊಂದಲ ಸೃಷ್ಟಿ ಮಾಡಿಲ್ಲ. ಇದು ಸ್ಥಳೀಯ ಮಟ್ಟದಲ್ಲೇ ಇದ್ದು, ಸ್ಥಳೀಯ ನಾಯಕರೇ ಇದನ್ನ ಬಗೆಹರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, “ಹೈಕಮಾಂಡ್ ಯಾವುದೇ ಗೊಂದಲವನ್ನು ಸೃಷ್ಟಿಸಿಲ್ಲ. ಅದು ಸ್ಥಳೀಯ ಮಟ್ಟದಲ್ಲೇ ಇದೆ” ಎಂದರು. ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆ “ಹೈಕಮಾಂಡ್ ಮೇಲೆ ಆರೋಪ ಹೊರಿಸುವುದು ಎಷ್ಟು ಸರಿ?”. ಹೈಕಮಾಂಡ್…

Read More

ಖುರ್ಚಿ ಗೊಂದಲದ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್‌ಗೆ ಏಕೆ ಸಾಧ್ಯವಾಗುತ್ತಿಲ್ಲ : ಪ್ರಹ್ಲಾದ್ ಜೋಶಿ

ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಉದ್ಭವಿಸಿರುವ ಮುಖ್ಯಮಂತ್ರಿ ಕುರ್ಚಿ ಗೊಂದಲದ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್‌ಗೆ ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ. ಪವರ್ ಶೇರಿಂಗ್ ಗೊಂದಲದಿಂದಾಗಿ ಇಡೀ ರಾಜ್ಯದಲ್ಲಿ ಅಸ್ಥಿರತೆ, ಅರಾಜಕತೆ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಪಲ್ಲಾದ್ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎನ್ನುವ ಸ್ಥಿತಿಯಿದೆ. ರಾಜ್ಯದಲ್ಲಿ ಅರಾಜಕತೆ, ಅಸ್ಥಿರತೆಯಿಂದ ಆಡಳಿತ ಯಂತ್ರದ ನಿಯಂತ್ರಣ ಕಳೆದುಕೊಂಡ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕಾಂಗ್ರೆಸ್ ಹೈಕಮಾಂಡ್‌ ರಾಜ್ಯದ ನಾಯಕರ…

Read More

ಗೃಹ ಪರಿಸರದ ಬಾವಿಗೆ ಬಿದ್ದು ನರಿಂಗಾನ ಕಲ್ಲರಕೋಡಿ ಶಾಲಾ ದೈಹಿಕ ಶಿಕ್ಷಕ ಆತ್ಮಹತ್ಯೆ..?ಮಗಳ ಶಾಲಾ ವಾರ್ಷಿಕೋತ್ಸವದಂದೇ ಘಟನೆ.ನರ ದೌರ್ಬಲ್ಯದಿಂದ ನೊಂದು ಸಾವಿಗೆ ಶರಣಾಗಿರುವ ಶಂಕೆ.

ಉಳ್ಳಾಲ: ನರಿಂಗಾನ ಗ್ರಾಮದ ಕಲ್ಲರಕೋಡಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾಕರ್ ಜೋಗಿ(51) ಎಂಬವರು ಕೋಟೆಕಾರು ಪಟ್ಟಣ ವ್ಯಾಪ್ತಿಯ ಕೊಂಡಾಣದ ತನ್ನ ಮನೆ ಆವರಣದ ಬಾವಿಯಲ್ಲಿ ಶುಕ್ರವಾರ ಸಂಜೆ ಶವವಾಗಿ ಪತ್ತೆಯಾಗಿದ್ದು,ಅನಾರೋಗ್ಯದಿಂದ ಆತ್ಮಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ. ನಿನ್ನೆ ಸಂಜೆ ಪ್ರಭಾಕರ್ ಅವರು ತನ್ನ ಮಗಳನ್ನ ಉಚ್ಚಿಲದ ಶಾಲೆಗೆ ಶಾಲಾ ವಾರ್ಷಿಕೋತ್ಸವಕ್ಕೆಂದು ಬಿಟ್ಟು ಮನೆಗೆ ಬಂದಿದ್ದರು.ಬಳಿಕ ಪತ್ನಿ ಮತ್ತು ಮಗನ ಜೊತೆ ಮಗಳ ಶಾಲಾ ವಾರ್ಷಿಕೋತ್ಸವಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು.ಈ ವೇಳೆ ಪತ್ನಿ ಪ್ರಭಾಕರ್ ಅವರನ್ನ ಹುಡುಕಾಡಿದಾಗ…

Read More

ವಿಶ್ವ ರಾಮಕ್ಷತ್ರಿಯ ತ್ರೈಮಾಸಿಕ ಮಹಾಸಭೆಯಲ್ಲಿ “ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ವ್ಯಕ್ತಿ ಚಿತ್ರಣ ಕೃತಿ ಲೋಕಾರ್ಪಣೆ.

ಕಾಸರಗೋಡು : ಕನ್ನಡ ಭವನದ ತ್ರಿವಿಕ್ರಮ ಶಕ್ತಿ ಡಾ. ವಾಮನ್ ರಾವ್ ಬೇಕಲ್ “ಎಂಬ ಕೃತಿ ವಿಶ್ವ ರಾಮಕ್ಷತ್ರಿಯ ತ್ರೈಮಾಸಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಎಚ್ ಆರ್ ಶಶಿಧರ್ ನಾಯ್ಕ್ ರೀಗೆ ವಿ. ರಾ. ಮಹಾಸಂಘ ಉಪಾಧ್ಯಕ್ಷರೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷರೂ ಆದ ಡಾ. ವಾಮನ್ ರಾವ್ ಬೇಕಲ್ ನೀಡಿ ಶಶಿಧರ್ ನಾಯ್ಕ್ ಲೋಕಾರ್ಪಣೆ ಮಾಡಿದರು. ಈ ಕೃತಿಯನ್ನು ಡಾ. ಮೊಗಸಾಲೆಯವರ ಕಾಂತಾವರ ಕನ್ನಡ ಸಂಘವು “ನಾಡಿಗೆ ನಮಸ್ಕಾರ “ಎಂಬ ಪುಸ್ತಕ ಮಾಲೆಯಲ್ಲಿ ಸಾಹಿತಿ ವಿರಾಜ್…

Read More

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ… !

ಮಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಾವಣೆ ವಿರುದ್ಧ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸ್ವಾಯತ್ತ ಸಂಸ್ಥೆಯಾದ ಇ.ಡಿ.ಯನ್ನು ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ರವರ ವಿರುದ್ಧದ ಷಡ್ಯಂತ್ರ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯು ಪ್ರತಿಭಟನೆಯನ್ನು ನಡೆಸಲಾಯಿತು . ಆದರೆ ಜಿಲ್ಲಾ ಬಿಜೆಪಿ ಕಚೇರಿಯ ತನಕ ಪ್ರತಿಭಟನೆ ನಡೆಯದೆ ಮಲ್ಲಿಕಟ್ಟೆಯ…

Read More

ಮ.ನ.ಪಾ ವ್ಯಾಪ್ತಿಯಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ಕುಂಠಿತ . ತಡೆಹಿಡಿದಿರುವ ಅನುದಾನವನ್ನು ಬಿಡುಗಡೆಗೊಳಿಸಬೇಕು .ಶಾಸಕ ವೇದವ್ಯಾಸ ಕಾಮತ್ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಮನವಿ

ಮ.ನ.ಪಾ ವ್ಯಾಪ್ತಿಯಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು, ಜನಸಾಮಾನ್ಯರ ಹಿತದೃಷ್ಟಿಯಿಂದಲಾದರೂ ತಡೆಹಿಡಿದಿರುವ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಶಾಸಕ ವೇದವ್ಯಾಸ ಕಾಮತ್ ರವರು ಆಗ್ರಹಿಸಿದರು. ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದ ಅವರು, ರಸ್ತೆ ದುರಸ್ತಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಕಳೆದ ಎರಡೂವರೆ ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ನಯಾ ಪೈಸೆ ಅನುದಾನ ನೀಡಿಲ್ಲ. ಅಲ್ಲದೇ ಈ ಹಿಂದೆ ಬಜೆಟ್ ನಲ್ಲೇ ಘೋಷಣೆಯಾದಂತಹ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ -1 ಗೆ 150…

Read More

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ- ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಡ್ಯ:ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮನುಷ್ಯ ಸಮಾಜ ನಿರ್ಮಾಣವಾಗಬೇಕು. ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ಮಳವಳ್ಳಿಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮತ್ಸು ತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಸಮಾರೋಪ ಸಮಾರಂಭ ದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಯಂತೋತ್ಸವಗಳು ಹಲವು ತಾಲ್ಲೂಕು ಮತ್ತುಜಿಲ್ಲಾ ಕೇಂದ್ರಗಳಲ್ಲಿ ನಡೆದುಕೊಂಡು ಬರುತ್ತಿದ್ದು,…

Read More
error: Content is protected !!