ಮಂಗಳೂರು: ಐಇಇಇ ಮಂಗಳೂರು ಉಪವಿಭಾಗದ ವತಿಯಿಂದ 9ನೇ ಅಂತರಾಷ್ಟ್ರೀಯ ಐಇಇಇ ಡಿಸ್ಕವರ್ 25 ಸಮ್ಮೇಳನವು ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ವಿ.ಎಲ್.ಎಸ್.ಐ ಎಲೆಕ್ನಿಕಲ್ ಸರ್ಕ್ಯೂಟ್ಸ್ ಮತ್ತು ರೋಬೋಟ ವಿಷಯದಲ್ಲಿ ಅಕ್ಟೋಬರ್ 17 ಮತ್ತು 18, 2025ರಂದು ಪಿ. ಎ. ತಾಂತ್ರಿಕ ಮಹಾವಿದ್ಯಾಲಯ ನಡುಪದವು ಮಂಗಳೂರು ಇಲ್ಲಿ ನಡೆಯಲಿದೆ ಎಂದು ಐಇಇಇ ಮಂಗಳೂರು ಉಪವಿಭಾಗ ಇದರ ಜಂಟಿ ಕಾರ್ಯದರ್ಶಿಯಾದ ಡಾ. ಹರಿವಿನೋದ್ ಎನ್ ತಿಳಿಸಿದರು .
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಇದು ಸಂಶೋಧಕರು, ಶೆಕಣಿಕ ಮತ್ತು ಕೈಗಾರಿಕಾ ತಜ್ಞರು ಹೊಸ ತಂತ್ರಜ್ಞಾನ ಆವಿಷ್ಕಾರಗಳನ್ನು ಹಂಚಿಕೊಳ್ಳಲು ಹಾಗೂ ಪರಸ್ಪರ ಚರ್ಚಿಸುವ ಒಂದು ವೇದಿಕೆಯಾಗಲಿದೆ. ಈ ಸಮ್ಮೇಳನಕ್ಕೆ ಸುಮಾರು 526 ಪ್ರಬಂಧಗಳು ಸಲ್ಲಿಕೆಯಾಗಿದ್ದು, 136 ಪ್ರಬಂಧಗಳು ಮಂಡನೆಗಾಗಿ ಆಯ್ಕೆ ಮಾಡಲಾಗಿದ್ದು, ಮಂಡಿಸಲ್ಪಟ್ಟ ಎಲ್ಲಾ ಪ್ರಬಂಧಗಳು ಐಇಇಇ Conference Publication Program Digital Library ಪ್ರಕಟಣೆಗಾಗಿ ಸಲ್ಲಿಸಲಾಗುವುದು ಎಂದರು .
ಪಿ. ಎ. ಇಂಜಿನಿಯರಿಂಗ್ ಕಾಲೇಜು ಉಪಪ್ರಾಂಶುಪಾಲರಾದ ಡಾ. ಶರ್ಮಿಳಾ ಕುಮಾರಿ ಕಾರ್ಯಕ್ರಮದ ಬಗ್ಗೆ ಮಾತನಾಡಿ , ಅಕ್ಟೋಬರ್ 17 ರಂದು ಜರಗುವ ಉದ್ಘಾಟಣಾ ಸಮಾರಂಭದಲ್ಲಿ ಇನ್ಫೋಸೀಸ್ ಇದರ -ಉಪಾಧ್ಯಕ್ಷ ಹಾಗೂ ಹೆಡ್-ಡೆಲಿವರಿ ರಿಸ್ಕ್ ಮ್ಯಾನೇಜೆಂಟ್ ವಾಸುದೇವ ಕಾಮತ್, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ NIT-ಕ್ಯಾಲಿಕಟ್ ಪ್ರೊಫೆಸರ್ ಹಾಗೂ ಐಇಇಇ
ರೀಜನಲ್ 10 ಎಷ್ಯಾ ಪೆಸಿಫಿಕ್ ಇದರ ಡೈರೆಕ್ಟರ್ ಡಾ. ಸಮೀರ್ ಎಸ್.ಎಮ್. ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಮಾರಂಭದಲ್ಲಿ CDAC ನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಸುಧರ್ಶನ ಅವರು ಪ್ರಾಸ್ತಾವಿಕ ಉಪನ್ಯಾಸ ನೀಡಲಿದ್ದಾರೆ ಎಂದರು .
ಈ ಸಂದರ್ಭದಲ್ಲಿ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ . ರಮೀಸ್ ಎಂ. ಕೆ. ಮತ್ತು ಜೆ ಎನ್ ಎನ್ ಸಿ ಇ ಶಿವಮೊಗ್ಗ ಕಾಲೇಜಿನ ಡೀನ್ ಡಾ. ಎಸ್. ವಿ. ಸತ್ಯನಾರಾಯಣ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಪ್ರಾಂಶುಪಾಲರಾದ ಡಾ. ಶರ್ಮಿಳಾ ಕುಮಾರಿ ಎಂ. ಮತ್ತು ಡಾ. ಮೊಹಮ್ಮದ್ ಜಾಕಿರ್ ಬೆಳ್ಳಾರಿ ಸಮ್ಮೇಳನದ ಸಂಘಟಕರಾಗಿರುತ್ತಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ರಮೀಸ್ ಎಂ. ಕೆ. , ಡಾ.ಸಯ್ಯದ್ ಅಮೀನ್ ಅಹಮ್ಮದ್ , ಡಾ.ಮೊಹಮ್ಮದ್ ಜಾಕಿರ್ ಉಪಸ್ಥಿತರಿದ್ದರು .