ತುಳು ಕಥಾಸಂಕಲನ ‘ನಾಕೂರು’ ತೆಲುಗು ಅನುವಾದ ಕೃತಿ ಬಿಡುಗಡೆ

ಮಂಗಳೂರು: ಹಿರಿಯ ಕವಿ–ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರ ತುಳು ಭಾಷೆಯ ಹತ್ತು ಆಯ್ದ ಸಣ್ಣಕಥೆಗಳನ್ನು ಹೈದರಾಬಾದ್‌ನ ರಂಗನಾಥ ರಾವ್ ಅವರು ತೆಲುಗಿಗೆ ಅನುವಾದಿಸಿರುವ ‘ನಾಕೂರು’ ಕೃತಿಯನ್ನು ನಗರದ ಪತ್ರಿಕಾಭವನದಲ್ಲಿ ಇಂದು ಬಿಡುಗಡೆಗೊಳಿಸಲಾಯಿತು. ತುಳುನಾಡಿನ ಬದುಕು, ಸಂಸ್ಕೃತಿ, ಜಾನಪದ ಹಾಗೂ ಪ್ರಾದೇಶಿಕ ವೈಶಿಷ್ಟ್ಯಗಳನ್ನು ಪ್ರತಿಬಿಂಬಿಸುವ ಈ ಕಥೆಗಳು ಮೊದಲ ಬಾರಿಗೆ ತುಳುವಿನಿಂದ ತೆಲುಗಿಗೆ ಅನುವಾದಗೊಂಡು ಪುಸ್ತಕ ರೂಪದಲ್ಲಿ ಪ್ರಕಟವಾಗಿದ್ದು, ತೆಲುಗು ಓದುಗರಿಗೆ ತುಳುನಾಡಿನ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಮಹತ್ವದ ಕೃತಿಯಾಗಿದೆ. ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ ಡಾ….

Read More

ಪೋರ್ಚುಗಲ್‌ಗೆ ಸೋಲು, ಸ್ಪೇನ್ ಕ್ವಾರ್ಟರ್‌ಫೈನಲ್‌ಗೆ; 1-0 ಗೋಲಿನ ಜಯ, ರೊನಾಲ್ಡೊ ಕಣ್ಣೀರಿನ ವಿದಾಯ

ಫಿಫಾ ವಿಶ್ವಕಪ್ 2026:* ಪೋರ್ಚುಗಲ್ ತಂಡ ವಿಶ್ವಕಪ್‌ನಿಂದ ಹೊರಬಿದ್ದಿದೆ. ಪ್ರೀ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಪೇನ್ 1-0 ಗೋಲುಗಳ ಅಂತರದಲ್ಲಿ ಪೋರ್ಚುಗಲ್‌ನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಹೆಚ್ಚುವರಿ ಸಮಯದಲ್ಲಿ (ಇಂಜುರಿ ಟೈಮ್) ಬದಲಿ ಆಟಗಾರನಾಗಿ ಕಣಕ್ಕಿಳಿದ ಮಿಕೆಲ್ ಮೆರಿನೋ ಪಂದ್ಯದಲ್ಲಿ ಏಕೈಕ ಮತ್ತು ನಿರ್ಣಾಯಕ ಗೋಲು ದಾಖಲಿಸಿ ಸ್ಪೇನ್‌ಗೆ ಗೆಲುವು ತಂದುಕೊಟ್ಟರು. ಇಂಜುರಿ ಟೈಮ್‌ನಲ್ಲಿ ಬಂದ ಆ ಗೋಲು ಪೋರ್ಚುಗಲ್‌ನ ವಿಶ್ವಕಪ್ ಕನಸಿಗೆ ತೆರೆ ಎಳೆದಿತು. ಡಲ್ಲಾಸ್‌ನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಆರಂಭದಿಂದಲೇ ಸ್ಪೇನ್ ಆಕ್ರಮಣಕಾರಿ ಆಟ ಪ್ರದರ್ಶಿಸಿತು….

Read More

ಜುಲೈ 12ರಂದು ಪುರಭವನದಲ್ಲಿ ಸಿತಾರ್ ವಾದನ–ಹಿಂದೂಸ್ತಾನಿ ಶಾಸ್ತ್ರೀಯ ಗಾಯನ

ಮಂಗಳೂರು:ಸಂಗೀತ ಭಾರತಿ ಪ್ರತಿಷ್ಠಾನ (ರಿ) ವತಿಯಿಂದ ಜುಲೈ 12, ಭಾನುವಾರ ಸಂಜೆ 5.30ಕ್ಕೆ ನಗರದ ಪುರಭವನದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ರಿಸ್ಟ್ರಿಮ್ ಸಹಯೋಗದಲ್ಲಿ ‘ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉಪಾಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದರು. ಕಾರ್ಯಕ್ರಮದ ಮೊದಲ ಭಾಗದಲ್ಲಿ ಬೆಂಗಳೂರುದ ಸಂಜೀವ್ ಕೊರ್ತಿ ಅವರಿಂದ ಸಿತಾರ್ ವಾದನ, ಎರಡನೇ ಭಾಗದಲ್ಲಿ ಗೋವಾದ ಪಂ. ಶಶಾಂಕ್ ಮತ್ತೇದಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದೆ. ತಬ್ಲಾದಲ್ಲಿ ಮಯಾಂಕ್ ಬೆಡೆಕರ್…

Read More

ಭಾರೀ ಗಾಳಿ–ಮಳೆ: ಮಾಣಿ–ಮೈಸೂರು ರಸ್ತೆಗೆ ಮರ ಉರುಳಿ ಸಂಚಾರ ಅಸ್ತವ್ಯಸ್ತ

ಬಂಟ್ವಾಳ, ಜು. 7: ಮಂಗಳವಾರ ಬೆಳಿಗ್ಗೆ ಸುರಿದ ಭಾರೀ ಗಾಳಿ–ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ಮಾಣಿ ಸಮೀಪ ಮಾಣಿ–ಮೈಸೂರು ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರ ಕೆಲಕಾಲ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಪರಿಣಾಮ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹಾಗೂ ವಿವಿಧ ಕೆಲಸಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದರು. ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಾಹನಗಳನ್ನು ಕೊಡಾಜೆ ಗಡಿ–ಬೊಲ್ಲುಕಲ್ಲು ರಸ್ತೆಯ ಮೂಲಕ…

Read More

ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ₹80 ಸಾವಿರ ಕಳವು: 24 ಗಂಟೆಯೊಳಗೆ ಮೂವರು ಅಂತರ್ ಜಿಲ್ಲಾ ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ಕಳವು ಮಾಡಿದ ಆರೋಪದಡಿ ಮೂವರು ಮಹಿಳೆಯರನ್ನು ಕೊಲ್ಲೂರು ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿಗಳಾದ ನೇತ್ರಾವತಿ (33), ಶಾರದ (50) ಹಾಗೂ ದುರ್ಗಮ್ಮ (44) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ನಿಮಿಶಾ ಹಾಗೂ ಅವರ ಪತಿ ಪ್ರಜೋಶ್ ಅವರು ಜುಲೈ 5ರಂದು ದೇವಸ್ಥಾನದಲ್ಲಿ ದೇವರ ದರ್ಶನ ಮುಗಿಸಿ ಹೊರಾಂಗಣಕ್ಕೆ ಬಂದಾಗ, ರಾತ್ರಿ ಸುಮಾರು…

Read More

ಉಡುಪಿ ಪತ್ರಿಕಾ ಭವನ ಸಮಿತಿ: ಲೆಕ್ಕಾಚಾರ ಮಂಡನೆ, ನೂತನ ಸಮಿತಿಗೆ ಅಧಿಕಾರ ಹಸ್ತಾಂತರ

ಉಡುಪಿ: ಉಡುಪಿ ಪತ್ರಿಕಾ ಭವನ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಸಮಿತಿಯ ನಿಕಟಪೂರ್ವ ಸಂಚಾಲಕ ಅಜಿತ್ ಆರಾಡಿ ಅಧ್ಯಕ್ಷತೆಯಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ನಡೆಯಿತು.ನಿಕಟಪೂರ್ವ ಸಂಚಾಲಕ ಅಜಿತ್ ಆರಾಡಿ ವರದಿ ವಾಚಿಸಿ, 2024-2025 ಹಾಗೂ 2025-2026 ನೇ ಸಾಲಿನ ಲೆಕ್ಕಪತ್ರವನ್ನು ಸಭೆಯ ಮುಂದಿಟ್ಟರು.ಲೆಕ್ಕಪರಿಶೋಧಕರಿಂದ ಪರಿಶೋಧನೆಗೆ ಒಳಪಟ್ಟಿರುವ ವರದಿಯನ್ನು ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಅಂಗೀಕರಿಸಿದರು. ಲೆಕ್ಕಪತ್ರವನ್ನು ಅಂಗೀಕರಿಸಲಾಯಿತು. ಉಡುಪಿ ಪತ್ರಿಕಾ ಭವನದಲ್ಲಿ 2022 ರ ಅಕ್ಟೋಬರ್ 19 ರಂದು ಉಡುಪಿ…

Read More

ಸಂಜೀವಿನಿ ಒಕ್ಕೂಟದಲ್ಲಿ ₹23 ಲಕ್ಷ ವಂಚನೆ: ದಂಪತಿ ಬಂಧನ

ಉಡುಪಿ, ಜು. 7: ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಡೂರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಲ್ಲಿ ₹23 ಲಕ್ಷ ಹಣ ದುರ್ಬಳಕೆ ಹಾಗೂ ವಂಚನೆ ನಡೆಸಿದ ಆರೋಪದಡಿ ಇಬ್ಬರನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಒಕ್ಕೂಟದ ಮಾಜಿ ಮುಖ್ಯ ಪುಸ್ತಕ ಬರಹಗಾರ್ತಿ ಸುಗಂಧಿ ಹಾಗೂ ಅವರ ಪತಿ ಸಂತೋಷ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಸುಗಂಧಿ ಅವರು 2023ರಿಂದ 2025ರ ಅವಧಿಯಲ್ಲಿ ಸದಸ್ಯರಿಂದ ಸಂಗ್ರಹಿಸಿದ ಸಾಲ ಮರುಪಾವತಿ ಹಣವನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿದ್ದರೂ, ಅದನ್ನು…

Read More

ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ಸಾರ್ವಜನಿಕರ ವಿನೂತನ ಪ್ರತಿಭಟನೆ

ಉಡುಪಿ, ಜು. 7: ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಹಲವು ಬಾರಿ ಪುರಸಭೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಾರ್ವಜನಿಕರು ರಸ್ತೆ ಮಧ್ಯದ ಗುಂಡಿಗಳಲ್ಲಿ ಬಾಳೆ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಕಾರ್ಕಳ ಪುರಸಭೆ ವ್ಯಾಪ್ತಿಯ ಕಲ್ಲೊಟ್ಟೆ–ಬಂಡಿಮಠ ರಸ್ತೆಯಲ್ಲಿ ನಡೆದಿದೆ. ಕಾರ್ಕಳ ಮಾರುಕಟ್ಟೆ ರಸ್ತೆಯಿಂದ ಪೆರ್ವಾಜೆ, ಕಲ್ಲೊಟ್ಟೆ ಮೂಲಕ ಬಂಡಿಮಠಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನಗಳಷ್ಟೇ ಅಲ್ಲದೆ ಪಾದಚಾರಿಗಳ…

Read More

ವಯನಾಡಿನ ಕಳ್ಳಾಡಿ ಸುರಂಗ ಮಾರ್ಗದ ಬಳಿ ಭೂಕುಸಿತ; ಹಲವು ವಾಹನಗಳು ಸಿಲುಕಿವೆ

ವಯನಾಡು: ಕಳ್ಳಾಡಿ ಸುರಂಗ ಮಾರ್ಗದ ಸಮೀಪ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಸ್ಥಳದಲ್ಲೇ ಸಿಲುಕಿಕೊಂಡಿವೆ. ಸುರಂಗ ಮಾರ್ಗ ನಿರ್ಮಾಣಕ್ಕಾಗಿ ನಿರ್ಮಿಸಲಾಗಿದ್ದ ಕಾಂಕ್ರೀಟ್ ತಡೆಗೋಡೆ ಸಂಪೂರ್ಣವಾಗಿ ಕುಸಿದಿದೆ. ಕಳೆದ ಕೆಲವು ಗಂಟೆಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಭೂಕುಸಿತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ರಾಜ್ಯ ಸಚಿವ ಟಿ. ಸಿದ್ದೀಕ್ ಅವರು ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ) ತಂಡವನ್ನು ತಕ್ಷಣ ಘಟನೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ. ಭೂಕುಸಿತದಿಂದ ಈ…

Read More

ವಿದ್ಯಾರ್ಥಿಗಳ ಸಮಸ್ಯೆಗಳ ಆಲಿಕೆಗೆ ‘ಛಾತ್ರೋಂಕಿ ಗೂಂಜ್’ ಅಭಿಯಾನ: ಎಂ.ಕಾಂ. ಕೋರ್ಸ್ ರದ್ದತಿ ವಿರುದ್ಧ ದ. ಕ ಎನ್‌ಎಸ್‌ಯುಐ ಗುಡುಗು …. !

ಮಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶಾದ್ಯಂತ ವಿದ್ಯಾರ್ಥಿಗಳ ಧ್ವನಿಯನ್ನು ಆಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ “ಛಾತ್ರೋಂಕಿ ಗೂಂಜ್” (ವಿದ್ಯಾರ್ಥಿಗಳ ಧ್ವನಿ) ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಎಸ್‌ಯುಐ ಮತ್ತು ಯೂತ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಚಾಲನೆ ನೀಡಲಾಯಿತು. ಬಳಿಕ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ.ಕ.ಜಿಲ್ಲಾಧ್ಯಕ್ಷ ಸುಹಾನ್ ಆಳ್ವ , ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು, ಪರೀಕ್ಷಾ ವಿಭಾಗದಲ್ಲಿನ ಅಕ್ರಮಗಳು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ…

Read More
error: Content is protected !!