ಸರಕು ವಾಹನದಲ್ಲಿ ಕಾರ್ಮಿಕರ ಸಾಗಾಟ: 10ಸಾವಿರ ದಂಡ ಹಾಕಿದ ಕೋರ್ಟ್ … !

ಉಡುಪಿ:ಪೋಲೀಸರ ಎಚ್ಚರಿಕೆಯನ್ನು ಲೆಕ್ಕಿಸದೆ ಗೂಡ್ಸ್ ವಾಹನದಲ್ಲಿ ಸೆಂಟ್ರಿಂಗ್ ಮಷೀನ್ ಗಳೊಂದಿಗೆ ಕೂಲಿ ಕಾರ್ಮಿಕರನ್ನು ಸಾಗಿಸುವ ಕೆಲಸ ನಿರಂತರ ಹಾಗೂ ನಿರಾತಂಕವಾಗಿ ನಡೆಯುತ್ತಿದ್ದು ಪೊಲೀಸರು ವಾಹನವನ್ನು ಬೆನ್ನಟ್ಟಿ ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾರ್ಕಳ ನ್ಯಾಯಾಲಯವು ವಾಹನದ ಮಾಲಕ ನಾಗಪ್ಪ ಎಂಬವರಿಗೆ 10 ಸಾವಿರ ದಂಡವಿಧಿಸಿದೆ. ಕಾರ್ಕಳ ಪರಿಸರದಲ್ಲಿ ಮಾತ್ರವಲ್ಲ ಜಿಲ್ಲೆಯದ್ಯಂತ ಬೆಳಿಗ್ಗೆ ಕೆಲಸಕ್ಕೆ ಕರೆದುಕೊಂಡು ಮತ್ತು ಕೆಲಸ ಮುಗಿಸಿ ಹಿಂದಿರುಗುವ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ಸಿಮೆಂಟ್ ಕಾಂಕ್ರೀಟ್ ಮಷೀನ್ ನೊಟ್ಟಿಗೆ ತುಂಬಿಕೊಂಡು ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಪೊಲೀಸರು ಈ…

Read More

ವಿವಾಹದ ತಯಾರಿಯಲ್ಲಿದ್ದ ಮನೆಯಿಂದ ಮದುಮಗಳು ನಾಪತ್ತೆ.. !

ಬಂಟ್ವಾಳ: ಮದುವೆಯ ತಯಾರಿಯಲ್ಲಿದ್ದ ಮನೆಯಿಂದ ಮದುಮಗಳು ನಾಪತ್ತೆಯಾದ ಘಟನೆ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ನಡೆದಿದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಶ್ಪಿಯ ( 21) ನಾಪತ್ತೆಯಾದ ಯುವತಿಯಾಗಿದ್ದಾಳೆ ಡಿ.14 ರಂದು ಅಶ್ಪಿಯಳನ್ನು . ಬಿ ಮೂಡ ಗ್ರಾಮದ ಬಂಟ್ವಾಳದ ಯುವಕನೋರ್ವನಿಗೆ ಮದುವೆ ಮಾಡುವುದಾಗಿ ಹಿರಿಯರೊಂದಿಗೆ ಮಾತುಕತೆ ಮಾಡಿ ಯುನಿಟಿ ಹಾಲ್ ಅಲ್ಲಿ ಮದುವೆ ನಿಶ್ಷಯಿಸಿರುತ್ತಾರೆ.ಡಿ‌. 14 ರಂದು ಬೆಳಗ್ಗೆ ಸುಮಾರು 03:30 ಗಂಟೆ ತನಕ ಮನೆಯಲ್ಲೇ ಮಲಗಿದ್ದು ಆ ಬಳಿಕ ಬೆಳಿಗ್ಗೆ ಸುಮಾರು 04:30 ಗಂಟೆಗೆ…

Read More

ಎಕೆಎಂಎಸ್ ಬಸ್‌ ಮಾಲೀಕ ಸೈಫುದ್ದೀನ್‌ ಹತ್ಯೆ ಪ್ರಕರಣ: ಐದನೇ ಆರೋಪಿಯ ಬಂಧನ.. !

ಉಡುಪಿ: ಎಕೆಎಂಎಸ್ ಬಸ್‌ ಮಾಲೀಕ ಸೈಫುದ್ದೀನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಉಡುಪಿ ಮಿಶನ್ ಕಂಪೌಂಡ್ ಬಳಿಯ ಶಾಂತಿ ನಗರದ ನಿವಾಸಿ ಮಾಲಿ ಮೊಹಮ್ಮದ್‌ ಸಿಯಾನ್‌(31) ಬಂಧಿತ ಆರೋಪಿ. ಈತನನ್ನು ಸೋಮವಾರ ಬೆಳಿಗ್ಗೆ 10.30ಕ್ಕೆ ಎಂಜಿಎಂ ಕಾಲೇಜಿನ ಬಸ್‌ ಸ್ಟ್ಯಾಂಡ್‌ ಬಳಿಯಲ್ಲಿ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ KA20MF207ನೇ ಗ್ಲಾಂಜಾ ಕಾರನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್‌ ಪೋನ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 4 ಜನ ಆರೋಪಿಗಳನ್ನು ಬಂಧಿಸಲಾಗಿದ್ದು,…

Read More

ಜಿಲ್ಲೆಯ ಹಲವು ಪಂಚಾಯತ್‌ಗಳಲ್ಲಿ ಎಡರಂಗದ ಆಡಳಿತಕ್ಕೆ ಹಿನ್ನಡೆ- ಮೀಂಜದಲ್ಲೂ ಎಡರಂಗಕ್ಕೆ ಕೈತಪ್ಪಿದ ಆಡಳಿತ

ಮಂಜೇಶ್ವರ: ಜಿಲ್ಲೆಯ ಹಲವು ಪಂಚಾಯತ್‌ಗಳಲ್ಲಿ ಎಡರಂಗದ ಆಡಳಿತಕ್ಕೆ ಹಿನ್ನಡೆಯಾಗಿರುವಂತೆಯೇ ಮೀಂಜದಲ್ಲೂ ಎಡರಂಗ ಆಡಳಿತ ಕೈತಪ್ಪಿದೆ.ಇಲ್ಲಿ ಕಳೆದಬಾರಿ ಸಿಪಿಐಗೆ 3 ಸೀಟು ಲಭಿಸಿದ್ದು, ಎಡರಂಗಕ್ಕೆ ಒಟ್ಟು 5 ಸ್ಥಾನ ಲಭಿಸಿತ್ತು. ಆದರೆ ಈ ಬಾರಿ ಸಿಪಿಎಂಗೆ ಒಂದು ಸ್ಥಾನ ಮಾತ್ರ ಲಭಿಸಿದೆ. ಕಳೆದಬಾರಿ ಆರು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ 1 ಸೀಟು ಹೆಚ್ಚಿಸಿಕೊಂಡಿದೆ. ಈ ಬಾರಿ ಇಲ್ಲಿ ಯುಡಿಎಫ್ 9 ಸೀಟುಗಳನ್ನು ಪಡೆದು ಆಡಳಿತವನ್ನು ತನ್ನದಾಗಿಸಿದೆ. ಮಂಜೇಶ್ವರದಲ್ಲಿ ಯುಡಿ ಎಫ್ ಸಂಭ್ರಮಾಚರಣೆ ನಡೆಸಿದೆ. ತೂಮಿನಾಡಿನಿಂದ ಮಂಜೇಶ್ವರ ಅಂಡರ್ ಪಾಸ್…

Read More

ಬೆಂಗಳೂರಿನಿಂದ ಮಾದಕ ವಸ್ತು ತಂದು ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದ ಮೂವರ ಬಂಧನ … !

ಮಂಗಳೂರು: ಮಂಗಳೂರು ಸಿಸಿಬಿ ಘಟಕದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನಿಂದ ಮಾದಕ ವಸ್ತು ತಂದು ಮಂಗಳೂರಿನ ಡ್ರಗ್ ಪೆಡ್ಲರ್‌ಗಳಿಗೆ ಪೂರೈಕೆ ಮಾಡುತ್ತಿದ್ದ ತಂಡದ ಮೂವರನ್ನು ಬಂಧಿಸಿದ್ದಾರೆ. ಮಂಗಳೂರು ಮಲ್ಲೂರಿನ ಅಹಮ್ಮದ್ ಶಾಬೀತ್ ( 35), ಬಂಟ್ವಾಳ ಪರ್ಲಿಯಾದ ಮಹಮ್ಮದ್ ಶಂಶೀರ್ (36) ಮತ್ತು ಸರಪಡಿಯ ನೌಶೀನ(27) ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಸಿಸಿಬಿ ಘಟಕದ ಪೊಲೀಸರು ಡಿ.13ರಂದು ಕಾರಿನಲ್ಲಿ ಬರುತ್ತಿದ್ದ ಅಹಮ್ಮದ್ ಶಾಬೀತ್, ಮತ್ತು ಆತನ ತಂಡವನ್ನು ಅರ್ಕುಳ ಬಳಿ ವಶಕ್ಕೆ ಪಡೆದು ದಸ್ತಗಿರಿ…

Read More

ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಗಳ ಬಂಧನ… !

ಮಂಗಳೂರು: ತಲ್ವಾರ್ ಹಿಡಿದು ಡಾನ್ಸ್ ಮಾಡಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪಿಗಳ ಬಂಧನವಾಗಿದೆ.ಬಂಧಿತರನ್ನು ಬಂದರು ನಿವಾಸಿ ಅಮೀರ್ ಸುಹೇಲ್ (28) ಹಾಗೂ ಉರುಂದಾಡಿಗುಡ್ಡೆ ಕಾವೂರು ನಿವಾಸಿ ಸುರೇಶ (29) ಎಂದು ತಿಳಿದುಬಂದಿದೆ. ಆರೋಪಿಗಳು ದಿ.13 ರಂದು ಸಾಮಾಜಿಕ ಜಾಲತಾಣವಾದ ಪೇಸಬುಕ್ ಖಾತೆಯಲ್ಲಿ ಅಮೀರ್ ಸುಹೇಲನು ತಲ್ವಾರ್ ಹಿಡಿದು ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಮೇಲೆ VIBES ಮತ್ತು ಬಿಳಿ ಬಣ್ಣದ ಹಾರ್ಟ್ ಗುರುತಿನ ಚಿಹ್ನೆಯೊಂದಿಗೆ ಸ್ಟೋರಿಗೆ ಹಾಕಿದ್ದು ಈ ವಿಡಿಯೋ ವೈರಲ್ ಆಗಿದೆ.ಸಾಮಾಜಿಕ ಜಾಲತಾಣದ…

Read More

ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾ‌ರ್ ವಾಚನಾಲಯದ ಮೇಲೆ ಪಟಾಕಿ ಸಿಡಿಸಿ ಹಾನಿ- ಕುಂಬಳೆ ಪೊಲೀಸರು ಕೇಸು ದಾಖಲು

ಮಂಜೇಶ್ವರ: ಪೇರಾಲ್ ಕಣ್ಣೂರಿನಲ್ಲಿ ಇ.ಕೆ. ನಾಯನಾ‌ರ್ ವಾಚನಾಲಯದ ಮೇಲೆ ಪಟಾಕಿ ಸಿಡಿಸಿ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಶನಿವಾರ ಸಂಜೆ ಯುಡಿಎಫ್ ಕಾರ್ಯಕರ್ತರ ತಂಡ ಈ ಕೃತ್ಯವೆಸಗಿರುವುದಾಗಿ ಸಿಪಿಎಂ ಆರೋಪಿಸಿದೆ. ವಾಚನಾಲಯಕ್ಕೆ ಪಟಾಕಿ ಎಸೆದು ಬಳಿಕ ಪ್ಲೆಕ್ಸ್ ಬೋರ್ಡ್‌ಗಳನ್ನು ಹಾನಿಗೈಯುವುದರ ಜೊತೆಯಾಗಿ ವಾಚನಾಲಯದ ಮುಂಬಾಗದಲ್ಲಿ ನಿಂತಿದ್ದ ಹಸೈನಾರ್ ಕೋರಿತ್ತಳ (52) ಎಂಬವರಿಗೂ ಹಲ್ಲೆಗೈದಿರುವ ಬಗ್ಗೆ ದೂರಲಾಗಿದೆ. ಹಸೈನಾರ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಸಿಪಿಎಂ ನೀಡಿದ…

Read More

ನನ್ನ ಮೇಲಿನ ಕಳ್ಳತನದ ಆರೋಪ ಸಾಬೀತು ಮಾಡಿ… ! ರವಿ ಪ್ರಸನ್ನರಿಗೆ ಓಪನ್ ಚಾಲೆಂಜ್ ಹಾಕಿದ ತಮ್ಮಣ್ಣ ಶೆಟ್ಟಿ ….. !

ಮಂಗಳೂರು: ನನ್ನ ಮೇಲಿನ ಆರೋಪ ಶುದ್ಧ ಸುಳ್ಳು ನಾನು ಕೊಂಡಾಣ , ಷಣ್ಮುಖ ದೇವಾಲಯದ ಭಂಡಾರ ಕದ್ದಿಲ್ಲ. ಒಂದು ವೇಳೆ ರವಿ ಪ್ರಸನ್ನರ ಆರೋಪ ಸತ್ಯ ಆಗಿದ್ದರೆ ನಾನು ಕೊಂಡಾಣದ ಮಣ್ಣಿನಲ್ಲಿ ಇನ್ನು ಮುಂದೆ ದೈವದ ಬಗ್ಗೆ ಮಾತನಾಡುವುದಿಲ್ಲ ಎಂದು ಶಪಥ ಮಾಡುತ್ತೇನೆ. ಒಂದು ವೇಳೆ ಪ್ರಸನ್ನ ರವಿ ಹೇಳಿರುವುದು ಸುಳ್ಳು ಎಂದು ಸಾಬೀತಾದರೆ ಆತನನ್ನು ತಂತ್ರಿ ಕಂತ್ರಿ ಕುತಂತ್ರಿ ಎಂದು ಕರೆಯುತ್ತೇನೆ ಎಂಬುದಾಗಿ ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,…

Read More

ಮೀಂಜ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಸ್ಥಾಪಕ ಸದಸ್ಯರು ಮತ್ತು ಅರ್ಚಕರೂ ಆಗಿದ್ದ ಶಿವರಾಮ ಆಚಾರ್ಯ ಕೋಳ್ಯೂರುಪದವು ವಿಧಿವಶ

ಮೀಂಜ:- ಶ್ರೀ ಸತ್ಯನಾರಾಯಣ ಸೇವಾ ಸಮಿತಿಯ ಸ್ಥಾಪಕ ಸದಸ್ಯರು ಮತ್ತು ಅರ್ಚಕರೂ ಆಗಿದ್ದ ಶಿವರಾಮ ಆಚಾರ್ಯ ಕೋಳ್ಯೂರುಪದವು (63 ) ಅಲ್ಪ ಕಾಲದ ಅಸೌಖ್ಯದಿಂದ ಡಿ.13 ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಪತ್ನಿ ಮೀನಾಕ್ಷಿ ,ತಮ್ಮ ಶಂಕರ ಆಚಾರ್ಯ, ತಂಗಿ ದೇವಕಿ, ಮಗ ಸಂತೋಷ್,ಸೊಸೆ ಶ್ವೇತಾ, ಅಳಿಯ ಪದ್ಮನಾಭ,ಮೊಮ್ಮಗ ಗಾಯನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಕಿರಿಯ ಮಗ ಅಶೋಕ ಮತ್ತು ಮಗಳಾದ ನವ್ಯ ಇವರು ಅಕಾಲಿಕ ಮರಣಕ್ಕೀಡಾದ ಕಾರಣ ಈ ಮೊದಲೇ ಕಳೆದುಕೊಂಡಿದ್ದಾರೆ. ಶ್ರೀ…

Read More

ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮ ಶತಮಾನೋತ್ಸವ, ಶ್ರೀ ಸತ್ಯಸಾಯಿ ಪಾದುಕಾ ಪ್ರತಿಷ್ಠಾಪನೆ ಹಾಗೂ ಶಾಲಾ ವಾರ್ಷಿಕೋತ್ಸವ – ಪ್ರಶಾಂತಿ ಸಂಭ್ರಮ

ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಜನ್ಮಶತಮಾನೋತ್ಸವದ ಅಂಗವಾಗಿ, ಶ್ರೀ ಸತ್ಯಸಾಯಿ ಪಾದುಕಾ ಪ್ರತಿಷ್ಠಾಪನೆ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಒಳಗೊಂಡ “ಪ್ರಶಾಂತಿ ಸಂಭ್ರಮ”ವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಡಿಸೆಂಬರ್ 13ರ ಶನಿವಾರದಂದು, ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಬಾಬಾ ಆಶ್ರಮ – ಪ್ರಶಾಂತಿ ನಿಲಯಂನಿಂದ ಬಾಯಾರಿನ ಪ್ರಶಾಂತಿ ವಿದ್ಯಾಕೇಂದ್ರಕ್ಕೆ ಲಭಿಸಿದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಅಮೃತಶಿಲಾ ಪಾದುಕೆಯ ಪ್ರತಿಷ್ಠಾಪನಾ ಕಾರ್ಯಕ್ರಮವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಈ ಪಾದುಕಾ ಪ್ರತಿಷ್ಠಾಪನೆಯನ್ನು ಶ್ರೀ ಸತ್ಯಸಾಯಿ…

Read More
error: Content is protected !!