ಮದ್ಯಪಾನ ಮಾಡಿ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದ ಪತಿಯನ್ನು ಕೊಂದು ಮನೆಯ ಬಾತ್‌ರೂಮ್‌ನಲ್ಲಿ ಹೂತಿಟ್ಟ ಪತ್ನಿ; ಪಾಯಸದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಲೆ
ಉತ್ತರಪ್ರದೇಶ; ಉತ್ತರಪ್ರದೇಶದ ಆಗ್ರಾ ದಲ್ಲಿ ಪತಿಯ ನಿರಂತರ ಹಲ್ಲೆಯಿಂದ ಬೇಸತ್ತ ಪತ್ನಿಯೊಬ್ಬಳು, ಪಾಯಸದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿದ ಬಳಿಕ ಪತಿಯನ್ನು ಕೊಂದು ಮನೆಯ ಬಾತ್‌ರೂಮ್‌ನಲ್ಲೇ ಹೂತಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 45 ದಿನಗಳ ತನಿಖೆಯ ಬಳಿಕ ಪೊಲೀಸರು 44 ವರ್ಷದ ಪತಿಯ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮನೆಯ ಬಾತ್‌ರೂಮ್‌ನಲ್ಲಿ ಹೊಸದಾಗಿ ಸಿಮೆಂಟ್ ಮತ್ತು ಟೈಲ್ಸ್ ಅಳವಡಿಸಿರುವುದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಯಿತು. ಬಳಿಕ ಅದನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೇ 18ರಂದು…
