Headlines

ಕೊಟ್ಟಾರಚೌಕಿ, ಮಾಲೆಮಾರ್ ಮತ್ತು ಮಾಲಾಡಿ ಪ್ರದೇಶಗಳ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ …. !

ಮಂಗಳೂರು:ನಗರದ ಕೊಟ್ಟಾರಚೌಕಿ, ಮಾಲೆಮಾರ್ ಮತ್ತು ಮಾಲಾಡಿ ಪ್ರದೇಶಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಪ್ರತಿಭಟನಾ ಧರಣಿಯು ಕೊಟ್ಟಾರಚೌಕಿ ಜಂಕ್ಷನ್ ಬಳಿ ಇಂದು ಸ್ಥಳೀಯ ಜನಹಿತರಕ್ಷಣಾ ಸಮಿತಿಯ ವತಿಯಿಂದ ನಡೆಯಿತು . ಜನಹಿತರಕ್ಷಣಾ ಸಮಿತಿಯ ಪ್ರಮುಖ ಹೋರಾಟಗಾರದ ವಿಜಯ್ ಕುಮಾರ್ ಸಮಿತಿಯ ಬೇಡಿಕೆಯನ್ನು ಮುಂದಿಟ್ಟು , ಮಾಲೆಮಾರ್ ಚೌಕಿ ಸರ್ವಿಸ್ ರಸ್ತೆ ನಿರ್ಮಾಣ , ಮಾಲೆಮಾರ್ – ಕುಂಟಿಕಾನ ಸರ್ವಿಸ್ ರಸ್ತೆ ನಿರ್ಮಾಣ, ಚೌಕಿಯಿಂದ ಮಾಲಾಡಿ ರಸ್ತೆ ಕಡೆ ರಸ್ತೆಯ ತಿರುವು ದಿಕ್ಕನ್ನು ಸರಾಗಪಡಿಸುವ ಬಗ್ಗೆ, ಕೊಟ್ಟಾರ ಚೌಕಿ…

Read More

ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಪತ್ನಿಗೆ ಅವಮಾನ: ಬಂಟ್ವಾಳದ ಶರಣ್ ರೈ ಬಂಧನ

ಮಂಗಳೂರು ನಗರ ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಅವರ ಪತ್ನಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ ಬಂಟ್ವಾಳ ತಾಲೂಕಿನ ಶರಣ್ ರೈ(29) ಎಂಬಾತನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಧಿವೇಶನದಲ್ಲಿ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದನ್ನೇ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಶರಣ್ ರೈ ಎಂಬಾತನು ಶಾಸಕರ ಪತ್ನಿಯನ್ನು ಅವಮಾನಿಸುವ ರೀತಿಯಲ್ಲಿ ಹಾಗೂ ಮಹಿಳೆಯರ ಗೌರವ…

Read More

ಬಾವಿಗೆ ಹಾರಿ ಆತ್ಮಹತ್ಯೆ ಮಾಡುವ ವೇಳೆ ದೇಹದಿಂದ ಬೇರ್ಪಟ್ಟ ರುಂಡ

ಉಡುಪಿ: ಆತ್ಮಹತ್ಯೆ ವೇಳೆ ದೇಹದಿಂದ ರುಂಡ ಬೇರ್ಪಟ್ಟ ಹೃದಯ ವಿದ್ರಾವಕ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.ಕಕ್ಕುಂಜೆ ನಿವಾಸಿ ಪುರುಷೋತ್ತಮ ನಾಯಕ್ (52) ದುರಂತ ರೀತಿಯಲ್ಲಿ ಆತ್ಮಹತ್ಯೆ ಶರಣಾದ ವ್ಯಕ್ತಿ. ಇವರು ನಿನ್ನೆ ತಡರಾತ್ರಿ ಮನೆಯ ಬಾವಿಯ ನೈಲಾನ್ ಹಗ್ಗ ಬಿಗಿದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ದೇಹದಿಂದ ರುಂಡ ಬೇರ್ಪಟ್ಟಿದೆ. ಇವರು ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರ. ಮಣಿಪಾಲದ ವ್ಯಾಲಿವ್ಯೂ ಹೋಟೆಲಿನಲ್ಲಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು.‌…

Read More

ವರ್ಕಾಡಿ ಪಂಚಾಯತ್ ನಲ್ಲಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯನ್ನು ಸ್ಥಾಪಿಸಬೇಕು : DYFI

ಮಂಜೇಶ್ವರ: ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಹೈಸ್ಕೂಲ್ ಹಾಗೂ ಹೈಯರ್ ಸೆಕೆಂಡರಿ ಶಾಲೆಗಳನ್ನು ಸ್ಥಾಪಿಸಬೇಕಾಗಿ DYFI ಮಂಜೇಶ್ವರ ಬ್ಲೋಕ್ ಸಮ್ಮೇಳನ ಪ್ರಮೇಯದ ಮೂಲಕ ತಿಳಿಸಿದರೆ.ಮೀಯಪದವು ನಲ್ಲಿ ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್ ಉದ್ಘಾಟಿಸಿದರು. ಬ್ಲೋಕ್ ಅಧ್ಯಕ್ಷ ಆಕಾಶ್ ಪೈವಳಿಕೆ ಅಧ್ಯಕ್ಷತೆ ವಹಿಸಿದ್ದರು.ಅಡ್ವಾ.ಎಂ ಕೆ ಹಶೀರ್, ಪದ್ಮಜಾ ಕೂಳೂರು,ಆಕಾಶ್ ಪೈವಳಿಕೆ ಸೇರಿರುವ ಪ್ರಸಿಡಿಯಂ ಸಮ್ಮೇಳನವನ್ನು ನಿಯಂತ್ರಿಸಿದರು. ಬ್ಲೋಕ್ ಕಾರ್ಯದರ್ಶಿ ವಿನಯ್ ಕುಮಾರ್ ಚಟುವಟಿಕ ವರದಿಯನ್ನು ಮಂಡಿಸಿದರು. ಪದ್ಮಜಾ ಕೂಳೂರು ಹುತಾತ್ಮ ಪ್ರಮೇಯ ಶಬೀರ್ ಮಾಲಿಗೆ ಶ್ರದ್ಧಾಂಜಲಿ ಪ್ರಮೇಯವನ್ನು ಮಂಡಿಸಿದರು….

Read More

ಶ್ರವಣ ದೋಷದ ಬಗ್ಗೆ ಜಾಗೃತಿ ಅಗತ್ಯ -ಖಾದರ್ ಶಾ*ಶ್ರವಣ ತಪಾಸಣಾ ಶಿಬಿರಕ್ಕೆ ಚಾಲನೆ

ಮಂಗಳೂರು, ಫೆ.7; ಟೀಮ್ ಈಶ್ವರ್ ಮಲ್ಪೆ ಅವರ ವೈದ್ಯಕೀಯ ತಂಡ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ರ ಸಂಘದ ಸಹಯೋಗದೊಂದಿಗೆ ಮಂಗಳೂರು ಪ್ರೆಸ್ ಕ್ಲಬ್ ,ಪತ್ರಿಕಾ ಭವನ ಟ್ರಸ್ಟ್ ಸಹಕಾರ ದೊಂದಿಗೆ ‌‌‌ ಮಂಗಳೂರಿನ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಎರಡು ದಿನಗಳ ಶ್ರವಣ ತಪಾಸಣಾ ಶಿಬಿರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಶನಿವಾರ ಚಾಲನೆ ನೀಡಿ ಮಾತನಾಡುತ್ತಾ, ಶ್ರವಣ ದೋಷದ ಬಗ್ಗೆ ನಿರ್ಲಕ್ಷ್ಯ ಬೇಡ.ಸಮಾಜದಲ್ಲಿ ಸಾಕಷ್ಟು ಮಂದಿ ಶ್ರವಣ…

Read More

ಶ್ರೀ ಸುಧೀಂದ್ರ ಶತಸ್ಮರಣ – ಶತ ವಾದ್ಯನಮನ‌ ಕಾರ್ಯಕ್ರಮ ಸಂಪನ್ನ

ಮಂಗಳೂರು: ಜಗದ್ಗುರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ‌ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಂಗಳೂರಿನ ಕೊಂಚಾಡಿಯಲ್ಲಿರುವ ಕೆನರಾ ವಿಕಾಸ ಕಾಲೇಜು ಮೈದಾನದಲ್ಲಿ ಶತಸ್ಮರಣ ಶತವಾದ್ಯನಮನ ಕಾರ್ಯಕ್ರಮ ನಡೆಯಿತು. ಕರ್ನಾಟಕ, ಕೇರಳ, ಮಹಾರಾಷ್ಟ್ರ ಸಹಿತ ಭಾರತದ ವಿವಿಧ ರಾಜ್ಯಗಳ 125 ಕಲಾವಿದರು ಒಂದೇ ವೇದಿಕೆಯಲ್ಲಿ ತಬಲಾ, ಹಾರ್ಮೋನಿಯಂ, ವೀಣೆ, ಸಿತಾರ , ಕೊಳಲು ಸಹಿತ ವಿವಿಧ ವಾದ್ಯಗಳನ್ನು ನುಡಿಸುವ ಮೂಲಕ ವಾದ್ಯ ನಮನ ಸಲ್ಲಿಸಿದರು.

Read More

ಫೆಬ್ರವರಿ 13ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಿಗಲಿದೆ – “ಮಗ್ಗಿ ಪುಸ್ತಕ” ….!?

ಮಂಗಳೂರು : ಚಿನ್ನಾಸ್ವಾಮಿ ಫಿಲ್ಮಂ ಸಂಸ್ಥೆಯಡಿ ಚಿನ್ನಾಸ್ವಾಮಿ ಎತಿರಾಜ್ ನಿರ್ಮಾಣದ, ಹರಿವರಾಸನಂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ ” ಮಗ್ಗಿ ಪುಸ್ತಕ ” ಕನ್ನಡ ಚಲನಚಿತ್ರ ಇದೇ ಫೆಬ್ರವರಿ 13 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ನಿರ್ದೇಶಕ ಹರಿವರಾಸನಂ ಹೇಳಿದರು. ಪತ್ರಿಕಾಭವನದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು , ಕೊರೋನಾ ಕಾಲದಲ್ಲಿ ನಡೆದ. ಕಂಡರೂ ಕಾಣದಂತಹ ವಿಷಯಗಳ ಚಿತ್ರಣದ ಅನುಭವ ನೀಡಲಿದೆ ಮಗ್ಗಿ ಪುಸ್ತಕ. ಮೊಬೈಲ್‌ನಲ್ಲಿ ಒಳ್ಳೆಯದೂ ಇರತ್ತೆ ಕೆಟ್ಟದ್ದೂ ಇರತ್ತೆ. ಒಳ್ಳೆಯದನ್ನ ಕೂಡಬೇಕು…..

Read More

ಕವಯತ್ರಿ, ಸಾಹಿತಿ, ದ. ಕನ್ನಡ ಜಿಲ್ಲೆಯ ರೇಣುಕಾ ಸುಧೀರ್ ರಿಗೆ “ಕವಿ ಕಾವ್ಯ ವಿಭೂಷಣ “ಪ್ರಶಸ್ತಿ 2026.ಕ್ಕೆ ಆಯ್ಕೆ

ಮಂಗಳೂರು: ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ ಕನ್ನಡ ಭವನದ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವಾರ್ಷಿಕೋತ್ಸವದ ಪ್ರಯುಕ್ತ 22.02.2026.ಭಾನುವಾರ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯದ “ಚುಟುಕು ಯುಗಾಚಾರ್ಯ ಎಂ. ಜಿ. ಆರ್. ಅರಸ್ “ವೇದಿಕೆಯಲ್ಲಿ ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಕೂಡ್ಲು ಸರ್ವಾಧ್ಯಕ್ಷತೆಯಲ್ಲಿ, ಶ್ರೀಮದ್ ಎಡನೀರ್ ಶ್ರೀಗಳ ಹಾಗೂ ಗದಗ ಜಿಲ್ಲೆಯ ಶ್ರೀ ಶ್ರೀ ರಮೇಶ ಮಹಾಸ್ವಾಮಿ, ಗೋವಿನಾಳ ಇವರ ದಿವ್ಯ…

Read More

ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾದ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳು ಅರೆಸ್ಟ್

ಮಂಗಳೂರು: ಗಾಂಜಾ ಪೂರೈಕೆ ಮಾಡುತ್ತಿದ್ದ ಒರಿಸ್ಸಾದ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡದಲ್ಲಿ ಬಂಧಿಸಲಾಗಿದೆ.ದಿನಾಂಕ:19-01-2026 ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂ.53,03,000 ಮೌಲ್ಯದ 1 ಕ್ವಿಂಟಾಲ್ 6 ಕೆ.ಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ತನಿಖೆ ನಡೆಸಿ ಪ್ರಕರಣದ ಆರೋಪಿಗಳಿಗೆ ಹಣ ಮತ್ತು ವಾಹನದ ವ್ಯವಸ್ಥೆಯನ್ನು ಮಾಡಿದ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ ಕೆ (27) ಹಾಗೂ ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ನಝಿರ್ (42)…

Read More

₹23 ಲಕ್ಷ ಚಿನ್ನಾಭರಣ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, 222 ಗ್ರಾಂ ಚಿನ್ನ ವಶ

ಮಂಗಳೂರು: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ₹23 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳ್ಳತನ ಪ್ರಕರಣವನ್ನು ಭೇದಿಸಿರುವ ಬಜ್ಪೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ನಾಸರ್ @ ನಾಸಿರ್ @ ನಾಚಿ (31) ಹಾಗೂ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಎಂದು ಗುರುತಿಸಲಾಗಿದೆ. 23-09-2025ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ನಿವಾಸಿ ಮೊಹಮ್ಮದ್ ಷರೀಫ್ ಅವರು ತಮ್ಮ ಸಂಬಂಧಿಕರ ಮೆಹಂದಿ…

Read More
error: Content is protected !!